
ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೆ ಎಚ್ 1ಎನ್1 ಮಹಾಮಾರಿಗೆ 33 ಮಂದಿ ಬಲಿಯಾಗಿದ್ದು, 533 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ ರೋಗಕ್ಕೆ ಸಂಬಂಧಿಸಿ 1714 ಜನರ ಪರೀಕ್ಷೆ ನಡೆಸಲಾಗಿದೆ. ಇವರಲ್ಲಿ 533 ಜನರು ಸೋಂಕಿನಿಂದ ಬಳಲುತ್ತಿರುವುದು ಖಾತ್ರಿಯಾದರೆ, 274 ಮಂದಿ ಗುಣಮುಖರಾಗಿದ್ದಾರೆ. 28 ರೋಗಿಗಳು ತುರ್ತು ಚಿಕಿತ್ಸಾ ಘಟಕ ಹಾಗೂ 297 ರೋಗಿಗಳು ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನವರಿಯಲ್ಲಿ 9 ಹಾಗೂ ಫೆಬ್ರವರಿಯಲ್ಲಿ ಇವತ್ತಿನವರೆಗೆ 24 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
Advertisement