ರು.27 ಕೋಟಿ ಆಸ್ತಿಗೆ ಬಾಡಿಗೆ ರು.10!

ನಗರದ ಹೃದಯ ಭಾಗ ಇನ್ಫೆಂಟ್ರಿ ರಸ್ತೆಯಲ್ಲಿ ಲೇಡಿಸ್ ಕ್ಲಬ್‍ನ ರು. 26 ಕೋಟಿ 86 ಲಕ್ಷ ಮೌಲ್ಯದ ಸ್ವತ್ತಿಗೆ ತಿಂಗಳ ಬಾಡಿಗೆ ಕೇವಲ ರು.10!...
ಇನ್ಫೆಂಟ್ರಿ ರಸ್ತೆಯ ಲೇಡಿಸ್ ಕ್ಲಬ್‍
ಇನ್ಫೆಂಟ್ರಿ ರಸ್ತೆಯ ಲೇಡಿಸ್ ಕ್ಲಬ್‍

ಬೆಂಗಳೂರು: ನಗರದ ಹೃದಯ ಭಾಗ ಇನ್ಫೆಂಟ್ರಿ ರಸ್ತೆಯಲ್ಲಿ ಲೇಡಿಸ್ ಕ್ಲಬ್‍ನ ರು. 26 ಕೋಟಿ 86 ಲಕ್ಷ ಮೌಲ್ಯದ ಸ್ವತ್ತಿಗೆ ತಿಂಗಳ ಬಾಡಿಗೆ ಕೇವಲ ರು.10!

ಹೌದು, 18,275 ಚದರ ಅಡಿ ಆಸ್ತಿಯನ್ನು ಲೋಕೋಪಯೋಗಿ ಇಲಾಖೆ 1968 ಜೂನ್ 15ರಿಂದ 50 ವರ್ಷಗಳ ಅವಧಿಗೆ ತಿಂಗಳಿಗೆ ರು.10ಕ್ಕೆ ಬಾಡಿಗೆಗೆ ನೀಡಿತ್ತು. ಕೋಟ್ಯಂತರ ಮೌಲ್ಯದ ಈ ಆಸ್ತಿಗೆ ಕಳೆದ 47 ವರ್ಷಗಳಲ್ಲಿ ವಾರ್ಷಿಕ ರು.120ರಂತೆ ರು.5640 ಮಾತ್ರ ಬಾಡಿಗೆ ಸಂಗ್ರಹವಾಗಿದೆ. ಸರ್ಕಾರದಿಂದ ಭಾರಿ ಪ್ರಮಾಣದಲ್ಲಿ
ರಿಯಾಯಿತಿ ಪಡೆಯುತ್ತಿದ್ದರೂ ಕ್ಲಬ್‍ನಿಂದ ಮÁಹಿತಿ ಹಕ್ಕು ಕಾಯ್ದೆ ಅನ್ವಯ ಅರ್ಜಿಗಳಿಗೆ ಯಾವುದೇ ಮಾನ್ಯತೆ ಇರಲಿಲ್ಲ. ಆದರೆ, ಮಾಹಿತಿ ನೀಡಲೇಬೇಕು ಎಂದು ಕರ್ನಾಟಕ
ಮಾಹಿತಿ ಹಕ್ಕು ಒಕ್ಕೂಟದ ಉಮಾಪತಿ ಹಾಗೂ ನರಸಿಂಹಮೂರ್ತಿ ತಂಡ 2012ರ ಡಿಸೆಂಬರ್ 19ರಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಮೆಟ್ಟಿಲೇರಿದ್ದರು.

2 ವರ್ಷಗಳ ಕಾಲ ಅರ್ಜಿಯ ವಿಚಾರಣೆ ನಡೆಸಿದ ಆಯೋಗ, ರಾಜ್ಯ ಸರ್ಕಾರದಿಂದ ಭಾರಿ ಪ್ರಮಾಣದ ರಿಯಾಯಿತಿ ಪಡೆಯುತ್ತಿದ್ದ ಲೇಡಿಸ್ ಕ್ಲಬ್ ಸರ್ಕಾರದ ಸ್ವತ್ತು  ಎಂದು ಜ.23ರಂದು ಘೋಷಿಸಿತ್ತು. ಅಲ್ಲದೇ ಒಂದು ತಿಂಗಳ ಒಳಗೆ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ  ಅಧಿಕಾರಿಯನ್ನು ನೇಮಿಸಬೇಕು ಎಂದು ಆದೇಶ ನೀಡಿತ್ತು. ಫೆ..23ಕ್ಕೆ ಆಯೋಗ ನೀಡಿದ ಒಂದು ತಿಂಗಳ ಕಾಲಾವಧಿ ಪೂರ್ಣಗೊಂಡ ಕಾರಣ ಫೆ.24ರಂದು ಲೇಡಿಸ್ ಕ್ಲಬ್‍ಗೆ ಸದಸ್ಯತ್ವ ಕೋರಿ ಸುಧಾ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಕ್ಲಬ್‍ನ ವ್ಯವಹಾರಗಳ ಬಗ್ಗೆ, ಆದಾಯ ತೆರಿಗೆ ಸಲ್ಲಿಕೆ ಬಗ್ಗೆ ಪ್ರಮಾಣೀಕೃತ ದಾಖಲೆಗಳನ್ನು ನೀಡುವಂತೆ ಮಾಹಿತಿ ಕೋರಿರುವುದಾಗಿ ಆರ್‍ಟಿಐ ಹೋರಾಟಗಾರ ನರಸಿಂಹ ಮೂರ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com