ಅಧಿಕಾರಿ ಲೋಕಾ ಬಲೆಗೆ

ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಖಾಸಗಿ ಶಾಲೆಯಲ್ಲಿ ಸೀಟು ಕೊಡಿಸಲು ರು. 20 ಸಾವಿರ ಲಂಚ ಪಡೆದ ಶಿಕ್ಷಣ ಇಲಾಖೆ ಕೆ.ಆರ್.ಪುರ ಸಮೂಹ ಸಂಪನ್ಮೂಲ ಅಧಿಕಾರಿ ಹನುಮಂತ ಪೂಜಾರಿ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ...
ಲೋಕಾಯುಕ್ತ
ಲೋಕಾಯುಕ್ತ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಖಾಸಗಿ ಶಾಲೆಯಲ್ಲಿ ಸೀಟು ಕೊಡಿಸಲು ರು. 20 ಸಾವಿರ ಲಂಚ ಪಡೆದ ಶಿಕ್ಷಣ ಇಲಾಖೆ ಕೆ.ಆರ್.ಪುರ ಸಮೂಹ ಸಂಪನ್ಮೂಲ ಅಧಿಕಾರಿ ಹನುಮಂತ ಪೂಜಾರಿ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಜೆ.ಆರ್.ಜಯಶೀಲಾ ಎಂಬುವರು ತಮ್ಮ ಮಗಳಿಗೆ ಚೈತನ್ಯ ಇ-ಟೆಕ್ನೋ ಶಾಲೆಯಲ್ಲಿ ಪ್ರವೇಶಕ್ಕೆ ಆರ್‍ಟಿಇ ಅನ್ವಯ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಅ„ಕಾರಿ ಹನುಮಂತ ಪೂಜಾರಿ ಅವರನ್ನು ವಿಚಾರಿಸಿದಾಗ ಜಾತಿ ಪ್ರಮಾಣಪತ್ರ ಇಲ್ಲದೆ ಸೀಟು ಸಾಧ್ಯವಿಲ್ಲ. ಹೀಗಾಗಿ, ರು. 25 ಸಾವಿರ ಲಂಚ ನೀಡಿದರೆ ಸೀಟು ಕೊಡಿಸುವುದಾಗಿ ಹೇಳಿದ್ದಾರೆ.

ಮುಂಗಡವಾಗಿ ರು.4 ಸಾವಿರ ತೆಗೆದುಕೊಂಡಿದ್ದರು. ಬಾಕಿ ಹಣವನ್ನು ನೀಡಬೇಕು ಎಂದು ಹನುಮಂತ ಅವರು ಒತ್ತಾಯಿಸಿದ್ದರು. ಲಂಚ ನೀಡಲು ಇಚ್ಛಿಸದ ಜಯಶೀಲಾ ಅವರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬೆಳ್ಳಂದೂರು ಸಮೀಪದ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಜಯಶೀಲಾ ಅವರಿಂದ ರು.20 ಸಾವಿರ  ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com