ಹೈಕೋರ್ಟ್
ಹೈಕೋರ್ಟ್

ಭಾಷಾ ಮಾಧ್ಯಮ:ಸರ್ಕಾರದ ನಿಲುವು ತಿಳಿಸಲು ಕಾಲಾವಕಾಶ ಕೋರಿಕೆಗೆ ಕೋರ್ಟ್ ನಿರಾಕರಣೆ

ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದಂತೆ ಸರ್ಕಾರ ತನ್ನ ಸ್ಪಷ್ಟ ನಿಲುವು ತಿಳಿಸಲು ಒಂದು ತಿಂಗಳುಕಾಲವಕಾಶ ...

ಬೆಂಗಳೂರು: ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದಂತೆ ಸರ್ಕಾರ ತನ್ನ ಸ್ಪಷ್ಟ ನಿಲುವು ತಿಳಿಸಲು ಒಂದು ತಿಂಗಳುಕಾಲವಕಾಶ ನೀಡಬೇಕೆಂಬ ಕೋರಿಕೆ ಯನ್ನು ಹೈಕೋರ್ಟ್ ನಿರಾಕರಿಸಿದೆ. ಹೊಸದಾಗಿ ಆರಂಭವಾಗುವ ಶಾಲೆಗಳಲ್ಲಿ 1-5ನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಯೋ ಜನಾ ಸಂಸ್ಥೆ (ಕೆಎಎಂಎಸ್) ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ಮುಂದುವರಿಸಿದ ನ್ಯಾ.ಬಿ.ವಿ.ನಾಗರತ್ನ ಅವರ ಪೀಠ, ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಹೈಕೋರ್ಟ್ ಸುಪ್ರೀಂನ ತೀರ್ಪಿಗೆ ಬದ್ದವಾಗಿರಬೇಕು. ಅಲ್ಲದೇ ಇದರಿಂದ ನೂತನ ಶಾಲೆ ಹಾಗೂ ಈಗಿರುವ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ಇದು ಅಡ್ಡಿಯಾಗಬಾರದು ಎಂದು
ಅಭಿಪ್ರಾಯಪಟ್ಟು ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ರಾಜ್ಯ ಅಡ್ವೊಕೇಟ್ ಜನರಲ್  ಫ್ರೊ ರವಿವರ್ಮ ಕುಮಾರ್ ವಾದ ಮಂಡಿಸಿ, ಭಾಷಾ ಮಾಧ್ಯಮದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಂಡಿದ್ದು, ಪರಿಹಾರಾತ್ಮಕ ಅರ್ಜಿ ದಾಖಲಿಸಿದ್ದೇವೆ. ಈ ಅರ್ಜಿ ಇನ್ನೂ ಇತ್ಯರ್ಥವಾಗಬೇಕಿದೆ. ಮಾತ್ರವಲ್ಲದೇ ಮಾರ್ಚ್ ತಿಂಗಳಲ್ಲಿ ಆರಂಭವಾಗುವ ಮುಂದಿನ ಅಧಿವೇಶನದಲ್ಲಿ ಈ ಕುರಿತು ಚರ್ಚೆ ಆಗಬೇಕಿದೆ. ಆದ್ದರಿಂದ ಒಂದು ತಿಂಗಳು ಕಾಲಾವಕಾಶ ನೀಡಬೇಕೆಂದು ಕೋರಿದರು. ಇದನ್ನು ನ್ಯಾಯಾಲಯ ತಳ್ಳಿಹಾಕಿತು.

Related Stories

No stories found.

Advertisement

X
Kannada Prabha
www.kannadaprabha.com