
ಜಯನಗರದ ಶಾಲಿನಿ ಮೈದಾನದಲ್ಲಿ ವರ್ಣರಂಜಿತ ಕಾರ್ಯಕ್ರಮ
ಬೆಂಗಳೂರು: `ನಮ್ಮ ಬೆಂಗಳೂರು' 6ನೇ ಆವೃತ್ತಿಯ ಪ್ರತಿಷ್ಠಿತ 2014ನೇ ಸಾಲಿನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಒಟ್ಟು 76,250 ಗಣ್ಯರ ಪೈಕಿ ವಿವಿಧ ಕ್ಷೇತ್ರಗಳಲ್ಲಿನ 70 ಮಂದಿ ಗಣ್ಯರು ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾ. 4 ರಂದು ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸರ್ಕಾರಿ ನೌಕರರ ವಿಭಾಗದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ 7 ಮಂದಿ ಅಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದರೆ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಬಿಎಂಟಿಸಿ ಹಾಗೂ ಬೆಂಗಳೂರು ಸಿಟಿ ಪೊಲೀಸ್ ಇಲಾಖೆಗಳು ಅತ್ಯುತ್ತಮ ಸರ್ಕಾರಿ ಸಂಸ್ಥೆಗಳ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾಗಿವೆ.
2014ನೇ ಸಾಲಿನ ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ `ನಮ್ಮ ಬೆಂಗಳೂರು ಪ್ರತಿಷ್ಠಾನ'ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಪಬ್ಬಿಶೆಟ್ಟಿ, ನಮ್ಮ ಬೆಂಗಳೂರು ಪ್ರತಿಷ್ಠಾನವು ಐದು ವರ್ಷಗಳಿಂದ ನಮ್ಮ ಬೆಂಗಳೂರು ಪ್ರಶಸ್ತಿ' ನೀಡುತ್ತಾ ಬರುತ್ತಿದೆ. ಬೆಂಗಳೂರಿನ ಸಮಗ್ರ ಪ್ರಗತಿಗೆ ದುಡಿದ ಗಣ್ಯರನ್ನು ಸಾರ್ವಜನಿಕರ ಮೂಲಕ ಗುರುತಿಸಿ, ಅವರನ್ನು ಸನ್ಮಾನಿಸುವುದು ಇದರ ಉದ್ದೇಶವಾಗಿದೆ.
2014 ನೇ ಸಾಲಿನ ಪ್ರಶಸ್ತಿಗೆ `ನಮ್ಮ ಬೆಂಗಳೂರು ಪ್ರತಿಷ್ಠಾನ'ವು ನಾಮ ನಿರ್ದೇಶನ ಪ್ರಕ್ರಿಯೆ ಶುರುಮಾಡಿದಾಗ, ಒಟ್ಟು 76, 250 ಗಣ್ಯರು ನಾಮನಿರ್ದೇಶನಗೊಂಡಿದ್ದರು. ಈ ಪೈಕಿ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿನ 70 ಮಂದಿ ಗಣ್ಯರನ್ನು ಅಂತಿಮವಾಗಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ 'ಎಂದು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿ, ಮಾಧ್ಯಮ ಸಂಸ್ಥೆ, ನಾಗರಿಕ ವ್ಯಕ್ತಿ, ನಾಗರಿಕ-ಯುವಜನಾಂಗ, ನಾಗರಿಕ ಸಂಸ್ಥೆ (ಸ್ವಯಂ ಸೇವಾ ಸಂಸ್ಥೆ ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಸ್ಥೆ), ಸರ್ಕಾರಿ ನೌಕರ, ಸರ್ಕಾರಿ ಸಂಸ್ಥೆ, ಚುನಾಯಿತ ಪ್ರತಿನಿಧಿ, ಸಾಮಾಜಿಕ ಉದ್ಯಮಿ, ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಸೇರಿದಂತೆ ಇದೇ ಮೊದಲ ಬಾರಿಗೆ ಅನಿವಾಸಿ ಬೆಂಗಳೂರಿಗ ಮತ್ತು ಬೆಂಗಳೂರಿನ ವಿದೇಶಿ ನಿವಾಸಿಗ ಎಂಬ ಎರಡು ಹೊಸ ವಿಭಾಗಗಳಲ್ಲೂ ಪ್ರಶಸ್ತಿಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಲಾಗಿತ್ತು. ಇದರಲ್ಲಿ ಅರ್ಹರಾದ ಪ್ರತಿಭೆಗಳನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿಗಳ ಮಾನದಂಡ ಕೇವಲ ಅವರು ಪಡೆದ ಮತಗಳ ಸಂಖ್ಯೆಗಳ ಆಧಾರ ಮಾತ್ರವಲ್ಲ, ಬೆಂಗಳೂರಿಗೆ ನೀಡಿದ ಕೊಡುಗೆಯನ್ನೂ ಪರಿಶೀಲಿಸಲಾಗಿದೆ. ಈ ಆಧಾರದಲ್ಲಿ 2014ನೇ ಸಾಲಿಗೆ 70 ಗಣ್ಯರ ಆಯ್ಕೆಯಾಗಿದ್ದಾರೆಂದು ಅವರು ಸ್ಪಷ್ಟಪಡಿಸಿದ್ದಾರೆ. `ನಮ್ಮ ಬೆಂಗಳೂರು ಪ್ರಶಸ್ತಿ'ಯನ್ನು 2009ರಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಅವರ ಆಸಕ್ತಿ ಮತ್ತು ಮಾರ್ಗದರ್ಶನದಿಂದ ಪ್ರಾರಂಭಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ಬದಲಾವಣೆಗೆ ಶ್ರಮಿಸಿದವರನ್ನು ಗುರುತಿಸಿ, ಗೌರವಿಸುವ ಮೂಲಕ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷ ಆಯ್ಕೆಯಾದ ಎಲ್ಲ 70 ಮಂದಿಗೂ ಪ್ರಶಸ್ತಿ ನೀಡುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ನೌಕರ
Advertisement