ಮತ್ತೆ ವಿದ್ಯುತ್ ಶಾಕ್

ವಿದ್ಯುತ್ ಅಭಾವ ಕಾಣಿಸಿಕೊಳ್ಳುವ ಬೇಸಿಗೆಯಲ್ಲಿ ವಿದ್ಯುತ್ ದರ ಏರಿಕೆಯ ಬಿಸಿಯೂ ರಾಜ್ಯದ ಜನತೆಗೆ ತಟ್ಟಲಿದೆ...
ವಿದ್ಯುತ್
ವಿದ್ಯುತ್

ಬೆಂಗಳೂರು: ವಿದ್ಯುತ್ ಅಭಾವ ಕಾಣಿಸಿಕೊಳ್ಳುವ ಬೇಸಿಗೆಯಲ್ಲಿ ವಿದ್ಯುತ್ ದರ ಏರಿಕೆಯ ಬಿಸಿಯೂ ರಾಜ್ಯದ ಜನತೆಗೆ ತಟ್ಟಲಿದೆ.

ಈಗಾಗಲೇ ಎಸ್ಕಾಂಗಳು ಸಲ್ಲಿಸಿರುವ ವಿದ್ಯುತ್ ದರ ಏರಿಕೆ ಪ್ರಸ್ತಾಪವನ್ನು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಪರಿಶೀಲಿಸುತ್ತಿದೆ. ಈ ಪ್ರಕ್ರಿಯೆ ಮಾರ್ಚ್‌ಗೆ ಪೂರ್ಣಗೊಳ್ಳಲಿದ್ದು, ಏಪ್ರಿಲ್ 1ಕ್ಕೆ ಪರಿಷ್ಕೃತ ದರ ಜಾರಿಯಾಗಲಿದೆ.

ಕಳೆದ ಮೇ 12ರಂದು ಯೂನಿಟ್‌ಗೆ 34 ಪೈಸೆ ಏರಿಸಿದ್ದ ಆಯೋಗ ಈ ಬಾರಿಯೂ ಅಷ್ಟೇ ಏರಿಕೆಗೆ ಸಮ್ಮತಿಸುವ  ಸಾಧ್ಯತೆಯಿದೆ. ಪ್ರತಿ ಯೂನಿಟ್‌ಗೆ 80 ಪೈಸೆ ಏರಿಸಬೇಕೆಂಬ ಎಸ್ಕಾಂಗಳ ಬೇಡಿಕೆ ಬಗ್ಗೆ ಆಯೋಗ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಿದ್ದು, ಆಕ್ಷೇಪಣೆಗಳನ್ನೂ ಆಹ್ವಾನಿಸಿದೆ. ಈ ಬಗ್ಗೆ ಆಯೋಗ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಇದನ್ನು ಗ್ರಾಹಕರು ಪರಿಶೀಲಿಸಿ ಅಭಿಪ್ರಾಯ ಸಲ್ಲಿಸಬಹುದು ಎಂದು ಆಯೋಗದ ಅಧ್ಯಕ್ಷ ಎಂ.ಆರ್ ಶ್ರೀನಿವಾಸ ಮೂರ್ತಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com