ಬೆಂಗಳೂರಿನಲ್ಲಿ ಹೃದಯ ಜೋಡನೆ ಯಶಸ್ವಿ

ಹೃದಯ (ಸಾಂದರ್ಭಿಕ ಚಿತ್ರ)
ಹೃದಯ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಜನವರಿ 1ರಂದು ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಾಜಿಯ ಜೀವಂತ ಹೃದಯವನ್ನು ಉತ್ತರಪ್ರದೇಶದ ಮೂಲದ ವ್ಯಕ್ತಿಯೋರ್ವನಿಗೆ ಯಶಸ್ವಿಯಾಗಿ ಜೋಡನೆ ಮಾಡಲಾಗಿದೆ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಜಾಲಹಳ್ಳಿಯಲ್ಲಿ ಅಪಘಾತಕ್ಕೀಡಾಗಿ ಎಂ. ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಾಜಿಯ ಮೆದಳು ನಿಷ್ಕ್ರಿಯೆಗೊಂಡಿತ್ತು. ಕೆಂಗೇರಿಯ ಬಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿಯೋರ್ವನಿಗೆ ಹೃದಯ ಕಸಿ ಮಾಡುವ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಹೃದಯ ದಾನ ಮಾಡಲು ಬಾಲಾಜಿ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ಇಂದು 2.30 ನಿಮಿಷಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಹೃದಯ ಜೋಡನೆ ಮಾಡಲಾಗಿದೆ.

ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗವನ್ನು ಟ್ರಾಫಿಕ್ ಫ್ರೀ ಮಾಡಲಾಗಿತ್ತು. ಸುಮಾರು 30 ಕಿ.ಮೀ ವ್ಯಾಪ್ತಿಯನ್ನು ಆ್ಯಂಬುಲೇಸ್ ಕೇವಲ 27 ನಿಮಿಷಗಳಲ್ಲಿ ಪೂರೈಸಿ ಬಿಜಿಎಸ್ ಆಸ್ಪತ್ರೆಯನ್ನು ಸೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com