ನಾಯಿ ಅನಾಥ ಕುರಿಮರಿಗೆ ಹಾಲುಣಿಸುತ್ತಿರುವ ದೃಶ್ಯ
ಕೋಲಾರ: ಅನಾಥ ಕುರಿಮರಿಗೆ ನಾಯಿಯೊಂದು ಆಸರೆಯಾಗಿ ನಿಂತು ತಾಯ್ತನ ಕರುಣಿಸುತ್ತಿದೆ!
ಇಂಥದ್ದೊಂದು ಅಪರೂಪದ ಪ್ರಸಂಗ ತಾಲೂಕಿನ ಬೆಗ್ಲಿ ಬೆಣಜೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಮ್ಮ ಹಾಗೂ ವೆಂಕಟೇಶಪ್ಪ ಎಂಬವರು ಸಾಕಿದ್ದ ಕುರಿಯೊಂದು ತನ್ನ ಮರಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಪ್ರಾಣ ಬಿಟ್ಟಿತ್ತು.
ಆ ಮರಿಗೆ ಹಾಲು ಉಣಿಸಿ ಪಾಲನೆ ಮಾಡುವುದು ರೈತ ದಂಪತಿಗೆ ಕಷ್ಟವಾಗಿತ್ತು. ಕುರಿ ಮರಿಯು ಎಲ್ಲಿ ಕೈತಪ್ಪಿ ಹೋಗುತ್ತದೋ ಎಂದು ಆತಂಕದಲ್ಲಿದ್ದರು. ಆದರೆ, ಇವರೇ ಸಾಕಿದ್ದ ನಾಯಿ, ತನ್ನ ಮರಿಗಳೊಟ್ಟಿಗೆ ಕುರಿ ಮರಿಗೂ ಹಾಲುಣಿಸಿ ತಾಯ್ತನ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ