ಕೆಪಿಎಸ್‌ಸಿ ಶಿಫಾರಸು ವಾಪಸ್ ಪಡೆಯಿರಿ

ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕೆಪಿಎಸ್‌ಸಿ ನೇಮಕಕ್ಕೆ...
ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್
ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕೆಪಿಎಸ್‌ಸಿ ನೇಮಕಕ್ಕೆ ಮಾಡಿರುವ ಶಿಫಾರಸನ್ನು ವಾಪಸ್ ಪಡೆಯಬೇಕು ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ಕೋರ್ಟ್ ಆದೇಶವನ್ನು ಪಾಲನೆಗಾಗಿ ಮುಖ್ಯಮಂತ್ರಿಯವರೇ ಸ್ವಯಂ ಪ್ರೇರಿತವಾಗಿ ಶಿಫಾರಸನ್ನು ವಾಪಸ್ ಪಡೆಯಬೇಕು. ಸದಸ್ಯರ ನೇಮಕಕ್ಕೆ ಶೋಧನಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾವು ಮಂಗಳಾ ಶ್ರೀಧರ್ ಅವರನ್ನು ನೇಮಕ ಮಾಡಿದ್ದಾಗ 2013ರ ಸುಪ್ರೀಂ ಕೋರ್ಟ್ ಆದೇಶ ಇರಲಿಲ್ಲ. ಮಂಗಳಾ ಶ್ರೀಧರ್ ನೇಮಕವನ್ನು ಹೈಕೋರ್ಟ್ ಪ್ರಶ್ನಿಸಿ ರಾಜಕೀಯದವರನ್ನು ಏಕೆ ನೇಮಕ ಮಾಡಿದ್ದೀರಿ ಎಂದಿದೆ.

ಹಾಗಾಗಿ ರಾಜಕೀಯ ನಾಯಕರ ನೇಮಕ ಸರಿಯಲ್ಲ. ಹಿಂದೆ, ವಿ.ಸೋಮಣ್ಣ ಅವರನ್ನು ಪರಿಷತ್‌ಗೆ ನೇಮಿಸುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಯಾವುದೇ ತೀರ್ಪು ಇಲ್ಲದಿದ್ದರೂ ತಿರಸ್ಕರಿಸಿದ್ದರು. ಆದರೆ, ಈಗ ಕೋರ್ಟ್ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಶಿಫಾರಸು ಮಾಡಿರುವುದು ಸರಿಯಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com