ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್

ಇಂಡಿಯನ್ ಮುಜಾಹಿದ್ದಿನ್ ಹುಟ್ಟಿಗೆ ಬಿಜೆಪಿ ಕಾರಣ

ಹುಬ್ಬಳ್ಳಿ: ಇಂಡಿಯನ್ ಮುಜಾಹಿದೀನ್ ಸಂಘಟನೆ, ಯಾಸಿನ್ ಭಟ್ಕಳ್ ಅಂಥವರು ಹುಟ್ಟಿಕೊಳ್ಳಲು ಬಿಜೆಪಿಯೇ ಕಾರಣ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜಗನ್ನಾಥ ಶೆಟ್ಟಿ ಆಯೋಗದ ವರದಿ ಜಾರಿಗೆ ತಂದಿದ್ದೇ ಆದಲ್ಲಿ ಇಂಥ ಸಂಘಟನೆ ಹುಟ್ಟಿಕೊಳ್ಳುತ್ತಿರಲಿಲ್ಲ ಎಂದರು.

ಜಗನ್ನಾಥ ಶೆಟ್ಟಿ ಅವರು 1997ರಲ್ಲಿ ಭಟ್ಕಳದಲ್ಲಿ ಒಂದು ವರ್ಷ ಅಧ್ಯಯನ ಮಾಡಿ ಭಯೋತ್ಪಾದಕ, ದೇಶದ್ರೋಹಿ ಚಟುವಟಿಕೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಜತೆಗೆ ಇದನ್ನು ನಿಗ್ರಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಿದ್ದರು.

ಈ ಆಯೋಗ ರಚನೆಗೆ ಒತ್ತಾಯಿಸಿದ್ದೇ ಬಿಜೆಪಿ. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಆಯೋಗದ ವರದಿ ಜಾರಿಗೆ ಇಚ್ಛಾಶಕ್ತಿ ತೋರಲಿಲ್ಲ. ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೂಡ ಆಯೋಗದ ವರದಿ ಜಾರಿಗೆ ಮುಂದಾಗಲಿಲ್ಲ. ಅಂದೇ ವರದಿ ಜಾರಿಗೆ ತಂದು ಕಾನೂನು ಬಿಗಿಗೊಳಿಸಿದ್ದರೆ ಬಹುಶಃ ಇಂಡಿಯನ್ ಮುಜಾಹಿದ್ದೀನ್ ಹುಟ್ಟುತ್ತಿರಲಿಲ್ಲ. ಇದಕ್ಕೆ ಬಿಜೆಪಿಯೇ ಹೊಣೆ ಎಂದರು. ವರದಿ ಜಾರಿಗೆ ಒತ್ತಾಯಿಸಿ ಶ್ರೀರಾಮ ಸೇನೆ ಭಟ್ಕಳದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲು ನಿಶ್ಚಯಿಸಿದೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com