12 ಮುದ್ದೆ ನುಂಗಿ ಬಹುಮಾನ ಗೆದ್ದ ಭೂಪ!

ಧನುರ್ ಮಾಸದ ಚಳಿಯಲ್ಲಿ ಬಿಸಿಬಿಸಿ ರಾಗಿಮುದ್ದೆ ಜೊತೆಗೆ ಕೋಳಿ ಹಾಗೂ...
ಗುರಪ್ಪ
ಗುರಪ್ಪ

ಮಾಲೂರು: ಧನುರ್ ಮಾಸದ ಚಳಿಯಲ್ಲಿ ಬಿಸಿಬಿಸಿ ರಾಗಿಮುದ್ದೆ, ಜೊತೆಗೆ ಕೋಳಿ ಹಾಗೂ ಅವರೆ ಸಾರು. ಹೆಚ್ಚು ಮುದ್ದೆ ತಿಂದವರಿಗೆ ಐದು ಸಾವಿರ ರು. ಬಹುಮಾನ.

28 ಕಲಿಗಳು ಭಾಗವಹಿಸಿದ್ದರೂ ಕೋಳಿ ಸಾರು ಜೊತೆಗೆ 12 ಮುದ್ದೆ ತಿಂದ ದೊಡ್ಡಕಡತೂರಿನ ಗುರಪ್ಪ ಮೊದಲ ಬಹುಮಾನವಾಗಿ ರು. 5 ಸಾವಿರ ಜೇಬಿಗಿಳಿಸಿದರು. ಸಂಕ್ರಾತಿ ಹಬ್ಬದ ಪ್ರಯುಕ್ತ ಸ್ಥಳೀಯ ಗ್ರಾಮೀಣ ಕ್ರೀಡೆ ಸಾಂಸ್ಕೃತಿಕ ಕಲಾ ವೇದಿಕೆ ಆಯೋಜಿಸಿದ್ದ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯ ವಿಶೇಷ. ಪಟ್ಟಣದ ಟೆಂಪೋ ನಿಲ್ದಾಣದ ಬಳಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತಾಲೂಕಿನ ವಿವಿದಢೆಯಿಂದ ಬಂದಿದ್ದ ಸ್ಪರ್ಧಿಗಳು ರು. 200 ನೀಡಿ ಸ್ಪರ್ಧೆಗಿಳಿದರು.

ಪ್ರಥಮ ಹಂತವಾಗಿ ಮೊದಲಿಗೆ 250 ಗ್ರಾಂ ತೂಕದ ನಾಲ್ಕು ಮುದ್ದೆ ನೀಡಲಾಯಿತು. ಕೋಳಿ ಸಾರು ಜೊತೆಗೆ ಸಸ್ಯಹಾರಿಗಳಿಗಾಗಿ ಅವರೆ ಕಾಳಿನ ಸಾರು ನೀಡಲಾಗಿತ್ತು. ಬಹಳಷ್ಟು ಮಂದಿ ನಾಲ್ಕು ಮುದ್ದೆಗಳಿಗೆ ಸುಸ್ತಾದರೆ ಐದು ಮಂದಿ ಎರಡನೇ ಸುತ್ತಿನಲ್ಲಿ ಮತ್ತೆರಡು ಮುದ್ದೆ ನುಂಗಿದರು.

ಅಂತಿಮವಾಗಿ ದೊಡ್ಡಕಡತೊರಿನ ಗುರಪ್ಪ ರೆಡ್ಡಿ 12 ಮುದ್ದೆ ತಿಂದು ಮೀಸೆ ತೀಡಿದರೆ. ಮೆಹರ್ ಪಾಷ 9.5 ಮುದ್ದೆ ತಿಂದು ದ್ವೀತಿಯ ಬಹುಮಾನವಾಗಿ ರು. 3 ಸಾವಿರ ಗಿಟ್ಟಿಸಿದ. 9 ಮುದ್ದೆ ತಿಂದ ಚಳಗನಹಳ್ಳಿಯ ಮುನಿರಾಜು ತೃತೀಯ ಬಹುಮಾನವಾಗಿ ರು. 2 ಸಾವಿರ ಪಡೆದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com