ವಿವಿಗಳ ಅಂಗಳಕ್ಕೂ ಬಂತು ನಾಡಗೀತೆ

ಬಣ್ಣಬಣ್ಣದ ದಿರಿಸು ತೊಟ್ಟು, ಕೈಯಲ್ಲಿ ಬುಕ್ ಹಿಡಿದು ಬೀಡುಬಿಡುಸಾಗಿ ಕಾಲೇಜಿಗೆ ಬರುವ ಯುವಕ...
ನಾಡಗೀತೆಯನ್ನು ವಿವಿ ಹಾಗೂ ಕಾಲೇಜುಗಳಲ್ಲಿ ಕಡ್ಡಾಯ ಹಾಡಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
ನಾಡಗೀತೆಯನ್ನು ವಿವಿ ಹಾಗೂ ಕಾಲೇಜುಗಳಲ್ಲಿ ಕಡ್ಡಾಯ ಹಾಡಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

ಹೇಗೆ, ಯಾವಾಗ ಹಾಡಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗದೇ ಪೇಚಾಟ

ಶಿವಮೊಗ್ಗ:
ಬಣ್ಣಬಣ್ಣದ ದಿರಿಸು ತೊಟ್ಟು, ಕೈಯಲ್ಲಿ ಬುಕ್ ಹಿಡಿದು ಬೀಡುಬಿಡುಸಾಗಿ ಕಾಲೇಜಿಗೆ ಬರುವ ಯುವಕ-ಯುವತಿಯರು ಶಿಸ್ತಾಗಿ ಸಾಲಿನಲ್ಲಿ ನಿಂತು ಮಹಾಕವಿ ಕುವೆಂಪು ರಚಿತ ನಾಡಗೀತೆ 'ಜೈ ಭಾರತ ಜನನಿಯ ತನುಜಾತೆ...' ಹಾಡಿ ತರಗತಿ ಆರಂಭಿಸಿದರೆ ಹೇಗಿರುತ್ತದೆ? ಅಂತಹ ದಿನ ದೂರವಿಲ್ಲ. ಇನ್ನು ಮುಂದೆ ನಾಡಗೀತೆಯನ್ನು ವಿವಿ ಹಾಗೂ ಕಾಲೇಜುಗಳಲ್ಲಿ ಕಡ್ಡಾಯ ಹಾಡಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ 'ರಾಷ್ಟ್ರಭಕ್ತಿ ಮತ್ತು ಭಾವೈಕ್ಯತೆ ವಿದ್ಯಾರ್ಥಿಗಳಲ್ಲಿ ಮೂಡಿಸುವ ದೃಷ್ಟಿಯಿಂದ ಎಲ್ಲಿ ವಿವಿಗಳು ಹಾಗೂ ಕಾಲೇಜುಗಳಲ್ಲಿ ಪ್ರತಿದಿನ ನಾಡಗೀತೆಯೊಂದಿಗೆ ತರಗತಿ ಪ್ರಾರಂಭಸಲು' ತೀರ್ಮಾನ ಕೈಗೊಳ್ಳುಲಾಗಿದೆ. ಆದರೆ, ಹೇಗೆ ಹಾಡಿಸಬೇಕು, ಯಾವಾಗ ಹಾಡಿಸಬೇಕು ಎಂಬುದನ್ನು ನಿರ್ಧರಿಸಿಲ್ಲ. ಹೀಗಾಗಿ ಈ ಆದೇಶ ವಿವಿಗಳ ಪೇಚಾಟಕ್ಕೆ ಕಾರಣವಾಗಿದೆ.

ನಾಡಗೀತೆ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಕವಿ ಚನ್ನವೀರ ಕಣವಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸಮಿತಿ ನೀಡಿರುವ ಶಿಫಾರಸುಗಳನ್ನೇ ಅನುಷ್ಠಾನ ಮಾಡಲು ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾಲೇಜುಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯ ಮಾಡಲು ಹೊರಟಿರುವುದು ಚರ್ಚೆಗೆ ಅನುವು ಮಾಡಿದೆ.

ರಾಷ್ಟ್ರಗೀತೆ ಹಾಡುವುದನ್ನೇ ಕಾಲೇಜುಗಳಲ್ಲಿ ಕಡ್ಡಾಯ ಮಾಡಿಲ್ಲ, ಈಗ ನಾಡಗೀತೆ ಹಾಡಿಸಲು ಹೊರಟಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

ಯಾವ ರಾಗದಲ್ಲಿ ನಾಡಗೀತೆ ಹಾಡಬೇಕು, ಪಲ್ಲವಿ ಪುನರಾವರ್ಥನೆಯಾಗಬೇಕೆ, ಎಷ್ಟು ನಿಮಿಷದಲ್ಲಿ ಹಾಡಬೇಕು ಎಂದು ಇನ್ನೂ ಸರ್ಕಾರದ ಹಂತದಲ್ಲೇ ಚರ್ಚೆ ನಡೆಯುತ್ತಿದೆ. ಈಗ ಕಡ್ಡಾಯ ಮಾಡಿದರೆ ವಿದ್ಯಾರ್ಥಿಗಳು ಯಾವ ರಾಗದಲ್ಲಿ ಹಾಡಬೇಕು ಎಂಬುದೇ ಗೊತ್ತಿಲ್ಲ. ಇದನ್ನು ನಿವಾರಿಸದೆ ಕಡ್ಡಾಯ ಮಾಡಲು ಹೊರಟರೆ ಸಮಸ್ಯೆಯೇ ಹೆಚ್ಚು ಎಂಬ ಭಾವನೆ ವಿಶ್ವವಿದ್ಯಾಲಯಗಳಲ್ಲಿ ಮೂಡಿದೆ.

ಏನು ಕಷ್ಟ?
ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಎಲ್ಲ ತರಗತಿಗಳು ಒಂದೇ ಸಮಯಕ್ಕೆ ಆರಂಭವಾಗುವುದಿಲ್ಲ. ಒಂದೆರಡು ಗಂಟೆ ಆಸುಪಾಸಿನಲ್ಲಿ ಶುರುವಾಗುತ್ತವೆ. ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಸಮಯಕ್ಕೆ ಕಾಲೇಜಿಗೆ ಬರಲು ಹೇಳಿದರೆ ನಾಡಗೀತೆ ನಂತರ ಬಹಳಷ್ಟು ವಿದ್ಯಾರ್ಥಿಗಳು ಕಾಲೇಜು ಕಾರಿಡಾರ್‌ನಲ್ಲಿ ಠಳಾಯಿಸುತ್ತಿರುತ್ತಾರೆ. ಸಂಶೋಧನೆಗೆಂದೇ ಶುರುವಾಗಿರುವ ಹಂಪಿ ಕನ್ನಡ ವಿವಿ, ಜಾನಪದ ವಿವಿಗಳಲ್ಲಿ ವಿದ್ಯಾರ್ಥಿಗಳನ್ನು ಒಂದೇ ಸಮಯದಲ್ಲಿ ಒಗ್ಗೂಡಿಸುವುದು ಕಷ್ಟದ ವಿಷಯವೇ.

ರಾಜ್ಯ ಸರ್ಕಾರ ನಾಡಗೀತೆ ಹಾಡಿಸಬೇಕೆಂದು ಸೂಚನೆ ನೀಡಿರುವುದು ಹೌದು. ಇದನ್ನು ಹೇಗೆ ಅನುಷ್ಠಾನ ಮಾಡಬೇಕೆಂದು ಚರ್ಚೆ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧ್ಯಾಪಕರೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿ, ಅಭಿಪ್ರಾಯ ಪಡೆದು ಮುಂದುವರಿಯಲು ನಿರ್ಧರಿಸಿದ್ದೇವೆ.

-ಪ್ರೊ.ಮಲ್ಲಿಕಾ ಘಂಟಿ,
ಕುಲಸಚಿವರು, ಕುವೆಂಪು ವಿವಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com