ಕದಂಬರ ಕಾಲದ ಫಿರಂಗಿ ಪತ್ತೆ

ಮುಂಡೂರು ಕುಕ್ಕಿನಡ್ಕ ದೇವಳ ಬ್ರಹ್ಮಕಲಶೋತ್ಸವ ದೇವಳದ ಕಾಮಗಾರಿ ನಡೆಸುತ್ತಿದ್ದ ವೇಳೆ ಕದಂಬ...
ಪತ್ತೆಯಾದ ಫಿರಂಗಿ
ಪತ್ತೆಯಾದ ಫಿರಂಗಿ

ಪುತ್ತೂರು: ಮುಂಡೂರು ಕುಕ್ಕಿನಡ್ಕ ದೇವಳ ಬ್ರಹ್ಮಕಲಶೋತ್ಸವ ದೇವಳದ ಕಾಮಗಾರಿ ನಡೆಸುತ್ತಿದ್ದ ವೇಳೆ ಕದಂಬ ಅರಸರ ಕಾಲದಲ್ಲಿ ಬಳಸಲಾಗುತ್ತಿತ್ತು ಎನ್ನಲಾದ ಫಿರಂಗಿಯೊಂದು ಪತ್ತೆಯಾಗಿದೆ.

ಕದಂಬ ವಂಶದ ಆಳ್ವಿಕೆ ಈ ಭಾಗದಲ್ಲಿತ್ತು ಎನ್ನುವುದಕ್ಕೆ ಈ ಫಿರಂಗಿ ಸಾಕ್ಷಿಯಾಗಿದ್ದು, ಸುಮಾರು 5 ಅಡಿ ಉದ್ದ, 75 ಕೆಜಿ ಭಾರ ಹೊಂದಿದೆ. ಇದನ್ನು ದೇವ ಸ್ಥಾನದಲ್ಲಿಯೇ ಸಂರಕ್ಷಿಸಲಾಗುವುದು ಎಂದು ಮೊಕ್ತೇಸರ ಮೋನಪ್ಪ ಕರ್ಕೇರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾನ್ಯವಾಗಿ ಫಿರಂಗಿಗಳನ್ನು ಯುದ್ಧದ ಸಂದರ್ಭ ಬಳಸಲಾಗುತ್ತದೆ. ದಕ್ಷಿಣ ಕನ್ನಡಕ್ಕೆ ಕದಂಬ ವಂಶಜರು ದಂಡೆತ್ತಿ ಬಂದಿರುವ ಕುರುಹು ಇದಾಗಿರಬಹುದು ಎಂಬ ಸಂಶಯವೂ ಮೂಡಿದೆ. ಇದಕ್ಕೆ ಪೂರಕವಾಗಿ ಇನ್ನಷ್ಟು ಪುರಾವೆಗಳು ಇದೇ ಭಾಗದಲ್ಲಿ ಸಿಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ದೇವಾಲಯದ ಪಕ್ಕದಲ್ಲೇ ಕಚೇರಿ ಗುಡ್ಡೆ, ದಂಡನಕುಕ್ಕು ಎಂಬ ಪ್ರದೇಶವಿದೆ.

ಅರಸರು ದಂಡಿನ ಸಮೇತ ವಿಶ್ರಾಂತಿ ಪಡೆದುಕೊಳ್ಳಲು ದಂಡನ ಕುಕ್ಕು ಪ್ರದೇಶಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಈ ಎಲ್ಲ ವಿಚಾರಗಳು ರಾಜ ವಂಶದ ಕುರುಹುಗಳಿಗೆ ಸಾಕ್ಷಿ ಎಂದು ಮೋನಪ್ಪ ಕರ್ಕೇರಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com