ಉತ್ತರಾಧಿಕಾರಿ ನೇಮಕ: ಪ್ರಮೋದದೇವಿ ಮೇಲೆ ಕಾಂತರಾಜೇ ಅರಸ್ ಮುನಿಸು

ಮೈಸೂರು ಅರಮನೆ
ಮೈಸೂರು ಅರಮನೆ

ಮೈಸೂರು: ಯದುವಂಶದ ಉತ್ತರಾಧಿಕಾರಿಯಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ ಅವರ ದಿವಂಗತ ಸಹೋದರಿಯ ಪುತ್ರ ಕಾಂತರಾಜೇ ಅರಸ್ ಅವರೇ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿತ್ತು. ಆದರೆ ಆ ನಿರೀಕ್ಷೆಗಳು ಸುಳ್ಳಾಗುವ ಸಂಭವ ಎದುರಾಗಿದೆ.

ಒಡೆಯರ್‌ರ ಸಂಪೂರ್ಣ ಕಾರ್ಯವನ್ನು ಚದುರಂಗ ಕಾಂತರಾಜೇ ಅರಸ್ ನೆರವೇರಿಸಿದ್ದರು. ಈ ಕಾರಣದಿಂದ ಚದುರಂಗ ಕಾಂತರಾಜೇ ಅರಸ್ ಅವರೇ ಮುಂದಿನ ಉತ್ತರಾಧಿಕಾರಿಯಾಗುತ್ತಾರೆ ಎನ್ನಲಾಗುತ್ತಿತ್ತು. ಆದರೆ ಈಗ ಉತ್ತರಾಧಿಕಾರಿ ಪಟ್ಟಕ್ಕೆ ಯದುವೀರ್ ಹೆಸರು ಕೇಳಿ ಬರುತ್ತಿದೆ. ಈ ಕಾರಣದಿಂದ ಚದುರಂಗ ಕಾಂತರಾಜೇ ಅರಸ್ ರಾಣಿ ಪ್ರಮೋದಾದೇವಿ ವಿರುದ್ಧ ಮುನಿಸಿಕೊಂಡಿದ್ದಾರೆ.

ಈ ಕುರಿತು ಟಿವಿ ಚಾನಲ್‌ಗೆ ಪ್ರತಿಕ್ರಿಯೆ ನೀಡಿರುವ ಕಾಂತರಾಜೇ ಅರಸ್, ನನಗೆ ಮೊದಲು ಉತ್ತರಾಧಿಕಾರಿ ಮಾಡುವುದಾಗಿ ಹೇಳಿ ಪ್ರಮೋದಾದೇವಿ ಕರೆಸಿಕೊಂಡಿದ್ದರು. ಹೊರತು ನಾನಾಗಿಯೇ ಹೋಗಿರಲಿಲ್ಲ. ಆದರೆ ಈಗ ನಿನಗೆ ಮದುವೆಯಾಗಿದೆ. ಮದುವೆಯಾದವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ನನಗೆ ಮದುವೆಯಾಗಿರುವುದು ಅವರಿಗೆ ಮೊದಲೇ ತಿಳಿದಿತ್ತು. ಆಗ ಮದುವೆ ಕುರಿತು ಯಾವುದೇ ಪ್ರಸ್ತಾಪ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಆಗಲೇ ಈ ವಿಚಾರ ಹೇಳಿ ನನ್ನ ಮಗನ ಕುರಿತು ಕೇಳಿದ್ದರೆ ಬಹುಶಃ ನಾನು ಒಪ್ಪುತ್ತಿರಲಿಲ್ಲ. ಅಲ್ಲದೆ, ನಮ್ಮದೇ ಕುಟುಂಬದ ಕೆಲವರು ನನ್ನ ಹಾಗೂ ನನ್ನ ಪತ್ನಿಯ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಬಳಿಕ ತಲೆದೋರಿದ್ದ ಉತ್ತರಾಧಿಕಾರಿ ನೇಮಕ ವಿಚಾರ ಇನ್ನೂ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.

ಸಂಕ್ರಾಂತಿ ಬಳಿ ಇತ್ಯರ್ಥಗೊಳ್ಳುವ ವಿಶ್ವಾಸ ಮೂಡಿತ್ತು. ಆದರೆ ಇದೀಗ ರಾಜಮನೆತನದಲ್ಲಿ ಇತ್ತೀಚಿನ ಬೆಳವಣಿಗಗಳು ಅರಮನೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೊದು ಮತ್ತೊಮ್ಮೆ ಸಾಬೀತಾಗಿದೆ. ಪರಿಣಾಮ ರಾಜವಂಶಸ್ಥರ ಉತ್ತರಾಧಿಕಾರಿ ನೇಮಕ ಮತ್ತೆ ಕಗ್ಗಾಂಟಾಗುತ್ತಿದೆ.

ದಸರಾ ಸಂದರ್ಭದಲ್ಲಿ ಚದುರಂಗ ಕಾಂತರಾಜೇ ಅರಸ್​  ರಾಜ ಖಡ್ಗವಿಟ್ಟು ಪೂಜೆ ಕೂಡ ಮಾಡಿದ್ದರು. ಇಷ್ಟೆಲ್ಲ ಆದರೂ ಕೂಡ ರಾಣಿ ಎಂದಿಗೂ ಎಲ್ಲಿಯೂ ಚದುರಂಗ ಕಾಂತರಾಜೇ ಅರಸ್​ ಮುಂದಿನ ಉತ್ತರಾಧಿಕಾರಿ ಎಂದಿರಲಿಲ್ಲ. ಇದೀಗ ಉತ್ತರಾಧಿಕಾರಿಯಾಗಿ ಯದುವೀರ್​ ಹೆಸರು ಕೇಳಿ ಬರುತ್ತಿದ್ದು, ಸಹಜವಾಗಿಯೇ ಚದುರಂಗಕಾಂತ ರಾಜೇ ಅರಸ್​ ಗೆ ಮುನಿಸು ತರಿಸಿದೆ. ಯದುವೀರ್​ ನಂತೆಯೇ ನನಗೂ ಉಪನಯನವಾಗಿದೆ. ನನಗೆ ಆಗದ್ದು ಯದುವೀರ್ ಗೆ ಹೇಗೆ ಸಾಧ್ಯವಾಗುತ್ತೆ ಎಂದು ರಾಣಿ ಪ್ರಮೋದಾದೇವಿ ಅವರನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com