ಐಟಿಐಗೆ ಆನ್‌ಲೈನ್ ಪ್ರವೇಶ

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಐಟಿಐ ಕಾಲೇಜುಗಳಿಗೆ ಆನ್‌ಲೈನ್ ಪ್ರವೇಶ ವ್ಯವಸ್ಥೆ ಜತೆಗೆ ಬಯೋವುಟ್ರಿಕ್ ಹಾಜರಾತಿ ಜಾರಿಗೆ ತರಲಾಗುವುದು ಎಂದು ಕಾರ್ಮಿಕ...
ಐಟಿಐಗೆ ಆನ್‌ಲೈನ್ ಪ್ರವೇಶ

ಬಳ್ಳಾರಿ: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಐಟಿಐ ಕಾಲೇಜುಗಳಿಗೆ ಆನ್‌ಲೈನ್ ಪ್ರವೇಶ ವ್ಯವಸ್ಥೆ ಜತೆಗೆ ಬಯೋವುಟ್ರಿಕ್ ಹಾಜರಾತಿ ಜಾರಿಗೆ ತರಲಾಗುವುದು ಎಂದು ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ ನಾಯ್ಕ ತಿಳಿಸಿದರು.

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾತಡಿದ ಅವರು, ಕೆಲವು ಖಆಸಗಿ ಕಾಲೇಜುಗಳಲ್ಲಿ ಐಟಿಐ ಸರ್ಟಿಫಿಕೇಟ್‌ಗಳು ಮಾರಾಟವಾಗುತ್ತಿವೆ ಎಂಬ ಆರೋಪವಿದೆ.

ಇದನ್ನ ತಡೆಯಲು ಆನ್‌ಲೈನ್ ಪ್ರವೇಶ, ಬಯೋವುಟ್ರಿಕ್ ಹಾಜರಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಆರಂಭದಲ್ಲಿ 258 ಸರ್ಕಾರಿ ಹಾಗೂ 196 ಅನುದಾನಿತ ಐಟಿಐ ಕಾಲೇಜುಗಳಲ್ಲಿ ಬಯೋವುಟ್ರಿಕ್ ವ್ಯವಸ್ಥೆ ಅಳವಡಿಸಲಾಗುತ್ತದೆ. ನಂತರದಲ್ಲಿ ಎಲ್ಲಾ 1046 ಖಾಸಗಿ ಕಾಲೇಜುಗಳಿಗೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಕಾರ್ಮಿಕ ಇಲಾಖೆಯು 25 ಐಟಿಐ ಕಾಲೇಜು ಆರಂಭಿಸಲು ಅನುದಾನ ನೀಡಬೇಕಿತ್ತು. ಆದರೆ, 50 ಕಾಲೇಜು ನೀಡಬೇಕೆಂದು ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.  ಜರ್ಮನಿ, ಕೆನಡಾದಲ್ಲಿ ಸುಮಾರು 10 ಲಕ್ಷ ಐಟಿಐ ಅಭ್ಯರ್ಥಿಗಳಿಗೆ ಬೇಡಿಕೆ ಇದ್ದು, ಈ ದೇಶಗಳ ರಾಯಭಾರಿ, ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.

ಇಲ್ಲಿನ ಐಟಿಐ ಪೂರ್ಣಗೊಳಿಸಿದವರಿಗೆ ಆ ದೇಶದ ಪರಿಣಿತರಿಂದ ಕೌಶಲ್ಯಾಧಾರಿತ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರ ಎರಡನೇ ಸುತ್ತಿನ ಮಾತುಕತೆ ನಡೆಸಲಾಗುವುದು ಎಂದರು.

ಮಲ್ಟಿ ಟ್ರೇಡ್ ಅಧ್ಯಯನ: ದೇಶದ 15 ಐಟಿಐ ಕಾಲೇಜಿನಲ್ಲಿ ರೈತರ ಮಕ್ಕಳಿಗೆ ಅನುಕೂಲವಾಗಲು ಕೃಷಿ ಟ್ರೇಡ್ ಎಂಬ ಹೊಸ ಕೋರ್ಸ್ ಆರಂಭಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬಳ್ಳಾರಿ ಐಟಿಐ ಕಾಲೇಜಿನಲ್ಲಿ ಇದನ್ನು ಪರಿಚಯಿಸಲಾಗುವುದು. ಹಂತಹಂತವಾಗಿ ಎಲ್ಲಾ ಕಾಲೇಜುಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಐಟಿಐ ಪರೀಕ್ಷೆ ಅವ್ಯವಹಾರದ ಕುರಿತು ಪರಿಶೀಲಿಸಲು ರಚಿಸಲಾಗಿದ್ದ ಹಿರಿಯ ಜಂಟಿ ನಿರ್ದೇಶಕ ಹೊಳ್ಳ ನೇತೃತ್ವದಲ್ಲಿ ಸಮಿತಿ ವರದಿ ಸಲ್ಲಿಸಿದೆ. ಸರ್ಕಾರ ಅದನ್ನು ಪರಿಶೀಲಿಸುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com