ಜಾಹೀರಾತು ಫಲಕಗಳಿಗೂ ನಿಷೇಧ?

ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ಫ್ಲೆ ಕ್ಸ್, ಬ್ಯಾನರ್‍ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಆದರೆ ಬಿಬಿಎಂಪಿ ...
ಜಾಹೀರಾತು ಫಲಕ
ಜಾಹೀರಾತು ಫಲಕ
Updated on

ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ಫ್ಲೆ ಕ್ಸ್, ಬ್ಯಾನರ್‍ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಆದರೆ ಬಿಬಿಎಂಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫ್ಲೆ ಕ್ಸ್, ಬ್ಯಾನರ್ ಮಾತ್ರವಲ್ಲದೆ ಎಲ್ಲ ರೀತಿಯ ಜಾಹೀರಾತು  ಫಲಕಗಳನ್ನೂ ನಿಷೇಧಿಸುವ ಬಗ್ಗೆ ಚಿಂತನೆ ನಡೆಸಿದೆ.
ನಗರದಲ್ಲಿ ಹೆಚ್ಚುತ್ತಿರುವ ಜಾಹೀರಾತು ಫಲಕ ಅಕ್ರಮಗಳು ಹಾಗೂ ಅನಧಿಕೃತ ಜಾಹೀರಾತು ಹಾವಳಿ ಬಗ್ಗೆ ಮಂಗಳವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಯಿತು. ಬುಧವಾರ ನಡೆಯುವ ಮುಂದುವರಿದ ಸಭೆಯಲ್ಲಿ ಎಲ್ಲಾ ರೀತಿಯ ಜಾಹೀರಾತುಗಳನ್ನೂ ನಿಷೇಧಿಸುವ ಪ್ರಸ್ತಾಪ ಮಂಡಿಸಲು ತೀರ್ಮಾ ನಿಸಲಾಯಿತು. ಒಂದೊಮ್ಮೆ ಪ್ರಸ್ತಾಪ ಮಂಡಿಸಿ, ಅದಕ್ಕೆ ಸಭೆಯ ಒಪ್ಪಿಗೆ ಸಿಕ್ಕಿದ್ದೇ ಆದರೆ ಇನ್ನುಮುಂದೆ ನಗರದಲ್ಲಿ ಯಾವುದೇ ರೀತಿಯ ಜಾಹೀರಾತು ಫಲಕಗಳನ್ನೂ ಅಳವಡಿಸುವುದಕ್ಕೆ ಅವಕಾಶ ಇರುವುದಿಲ್ಲ.
ಪ್ರಸ್ತಾಪಕ್ಕೆ ಬೆಂಬಲ: ಅನಧಿಕೃತ ಜಾಹೀರಾತು ಕುರಿತ ಚರ್ಚೆ ತಾರಕಕ್ಕೇರುತ್ತಿದ್ದಾಗ ಬಿಜೆಪಿಯಮಂಜುನಾಥ ರಾಜು, ಎಲ್ಲಾ ರೀತಿಯ ಜಾಹೀರಾತುಗಳನ್ನೂ ನಿಷೇಧಿಸುವಂತೆ ಸಲಹೆ ನೀಡಿದರು. ಆಗ ಬಹುತೇಕ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು. ನಂತರ ಆಡಳಿತ ಪಕ್ಷ ನಾಯಕ ಎನ್.ಆರ್.ರಮೇಶ್, ಎಲ್ಲಾ ರೀತಿಯ ಜಾಹೀರಾತು ನಿಷೇಧಿಸುವ ಬಗ್ಗೆ ಪ್ರಸ್ತಾಪ ಸಿದ್ಧಪಡಿಸಿ ಬುಧವಾರವೇ ಮಂಡಿಸಿ, ಅದಕ್ಕೆ ಅನುಮೋದನೆ ಪಡೆಯೋಣ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ ರಾಜು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಈಗಾಗಲೇ ಜಾಹೀರಾತು ಗಳನ್ನು ನಿಷೇಧಿಸುವುದಕ್ಕೆ ತೀರ್ಮಾ ನಿಸಿದೆ.
ಈ ಬಗ್ಗೆ ಪ್ರಸ್ತಾಪವೂ ಸಿದ್ಧವಾಗಿದ್ದು, ಬುಧವಾರ ಸಭೆಯಲ್ಲಿ ಮಂಡಿಸಲಾಗುತ್ತದೆ. ಎಲ್ಲಾ ಸದಸ್ಯರುಇದನ್ನು ಅನುಮೋದಿಸುವ ಮೂಲಕ ನಗರದಲ್ಲಿ ಅನ„ಕೃತ ಜಾಹೀರಾತು ಹಾವಳಿಯನ್ನುಇನ್ನಿಲ್ಲದಂತೆ ಮಾಡಬೇಕೆಂದು ವಿನಂತಿಸಿದರು. ಲಾಭವಿಲ್ಲದ ಕೆಲಸ ಏಕೆ ಬೇಕು?: ನಗರದಲ್ಲಿ ಜಾಹೀರಾತುಗಳಿಂದ ಬಿಬಿಎಂಪಿಗೆ ಸಿಗುವ ಆದಾಯ ಬರೀ ರು. 21 ಕೋಟಿ ಮಾತ್ರ. ಇದರಲ್ಲಿ ನಿರ್ವಹಣೆ, ಕಾನೂನು ಹೋರಾಟ ಮತ್ತು ಜಾಹೀರಾತು ವಿಭಾಗದ ವೆಚ್ಚ ಕಳೆದರೆ ಉಳಿಯುವುದು ರು. 13 ಕೋಟಿ ಮಾತ್ರ. ಆದ್ದರಿಂದ ಈ ವಿಭಾಗದಲ್ಲಿರುವ ಸಿಬ್ಬಂದಿಯನ್ನು ತೆರಿಗೆ ಸಂಗ್ರಹಕ್ಕೆ ನಿಯೋಜಿಸಿದರೆ ಹೆಚ್ಚುವರಿ ರು. 200 ಕೋಟಿ ತೆರಿಗೆ ಸಂಗ್ರಹವನ್ನಾದರೂ ಮಾಡಬಹುದು. ಕೇವಲ ರು13 ಕೋಟಿ ಆದಾಯಕ್ಕಾಗಿ ನಾವು ಜಾಹೀರಾತು ನಿರ್ವಹಣೆ ಮಾಡಿಕೊಂಡು ನಿತ್ಯ ಕೋರ್ಟ್ ಮತ್ತು ಮಾಧ್ಯಮಗಳಿಂದ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಆದ್ದರಿಂದ ಜಾಹೀರಾತುಗಳನ್ನೇ ನಿಷೇಧಿಸುವುದು ಸೂಕ್ತ ಎಂದು ಮಂಜುನಾಥ ರಾಜು ಸಭೆಗೆ ವಿವರಿಸಿದರು. ಇದನ್ನು ಬಹುತೇಕ ಸದಸ್ಯರು ಸ್ವಾಗತಿಸಿದರು.
ಇದಕ್ಕೂ ಮುನ್ನ ಜಾಹೀರಾತು ಫಲಕಗಳ ಅಕ್ರಮಗಳ ಬಗ್ಗೆ ಆಡಳಿತ ಪಕ್ಷ ನಾಯಕ ಎನ್.ಆರ್.ರಮೇಶ್, ಪದ್ಮನಾಭ ರೆಡ್ಡಿ, ಎಸ್.ಹರೀಶ್, ಎ.ಎಚ್. ಬಸವರಾಜು ಸೇರಿದಂತೆ ಆಡಳಿತ ಪಕ್ಷದ ಸದಸ್ಯರೇ ಟೀಕಿಸಿದರು. ಆಯುಕ್ತರನ್ನೂ ಟೀಕಿಸಿ ಅನಧಿಕೃತ ಫಲಕಗಳ ವಿರುದಟಛಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಭೆಯ ಆರಂಭದಲ್ಲಿ ಆರ್.ಕೆ.ಲಕ್ಷ್ಮ ಣ್, ಡಾ.ಸರೋಜಿನಿ ಮಹಿಷಿ ಹಾಗೂ ರಾಮೇಶ್ವರ ಠಾಕೂರ್ ಅವರ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು. ಇದೇವೇಳೆ ಡಾ.ವೀರೇಂದ್ರ ಹೆಗ್ಗಡೆ, ಡಾ.ಶ್ರೀ ಶಿವಕುಮಾರ ಸ್ವಾಮಿ, ಡಾ. ಖಾರಗ್ ಸಿಂಗ್ ಸೇರಿದಂತೆ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾದವರನ್ನು ಮತ್ತು ಇಸ್ರೋ ನೂತನ ಅಧ್ಯಕ್ಷ ಕಿರಣ್‍ಕುಮಾರ್, ಪ್ಲಾಸ್ಟಿಕ್ ನಿಷೇಧಿಸಿದಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com