ಸಾಂದರ್ಭಿಕ ಚಿತ್ರ
ಜಿಲ್ಲಾ ಸುದ್ದಿ
ಹಳೇ ಪ್ರೇಯಸಿಯ ಹೊಸ ಪ್ರಿಯಕರನ ಬೈಕ್‌ಗೆ ಬೆಂಕಿ ಹಚ್ಚಿದ ಹಳೇ ಪ್ರೇಮಿ
ಹಳೇ ಪ್ರೇಯಸಿಯ ಹೊಸ ಪ್ರಿಯಕರನ ಬೈಕ್‌ಗೆ ಬೆಂಕಿ ಹಚ್ಚಿದ್ದ ಆರೋಪಿ ಸೇರಿ ಇಬ್ಬರನ್ನು ಅಶೋಕ ನಗರ...
ಬೆಂಗಳೂರು: ಹಳೇ ಪ್ರೇಯಸಿಯ ಹೊಸ ಪ್ರಿಯಕರನ ಬೈಕ್‌ಗೆ ಬೆಂಕಿ ಹಚ್ಚಿದ್ದ ಆರೋಪಿ ಸೇರಿ ಇಬ್ಬರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಲಾಲ್‌ಬಾಗ್ ರಸ್ತೆ ಕೆ.ಎಸ್ ಗಾರ್ಡನ್ ನಿವಾಸಿಗಳಾದ ಹ್ಯಾರಿ ಅಲೆಕ್ಸ್ (22) ಹಾಗೂ ಅನ್ಬು(28) ಬಂಧಿತರು. ಆರೋಪಿ ಅಲೆಕ್ಸ್ ಈ ಹಿಂದೆ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇಬ್ಬರ ನಡುವೆ ವೈಮನಸ್ಯ ಉಂಟಾಗಿ ದೂರವಾಗಿದ್ದರು.
ಬಳಿಕ ಅರುಣ್‌ಕುಮಾರ್ ಎಂಬಾತ ಅದೇ ಹುಡುಗಿಯನ್ನು ಪ್ರೀತಿಸಲು ಆರಂಭಿಸಿದ್ದ. ಅಲ್ಲದೇ, ಆಕೆಯ ಹೆಸರನ್ನು ವಾಹನದ ನೋಂದಣಿ ಸಂಖ್ಯೆಯ ಫಲಕದಲ್ಲಿಯೂ ಹಾಕಿಸಿಕೊಂಡಿದ್ದ. ಇದರಿಂದ ಆಕ್ರೋಶಗೊಂಡ ಅಲೆಕ್ಸ್, ಅರುಣ್ ಕುಮಾರ್ ಜತೆ ಜಗಳ ಮಾಡಿದ್ದ.
ವೈಯಕ್ತಿಕ ದ್ವೇಷದಿಂದ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಅನ್ಬು ಹಾಗೂ ಆತನ ಸ್ನೇಹಿತರು ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ