ಕಾನೂನು ಹೋರಾಟ

ನಗರದಲ್ಲಿರುವ ಅನಧಿಕೃತ ಜಾಹೀರಾತು ಗಳನ್ನು ತೆರವುಗೊಳಿಸಲು ವಲಯ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಲು ಬಿಬಿಎಂಪಿ...
ಅನಧಿಕೃತ ಜಾಹೀರಾತು ಫಲಕ
ಅನಧಿಕೃತ ಜಾಹೀರಾತು ಫಲಕ
Updated on

ಬೆಂಗಳೂರು: ನಗರದಲ್ಲಿರುವ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ವಲಯ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಲು ಬಿಬಿಎಂಪಿ ತೀರ್ಮಾ ನಿಸಿದೆ.ಅನಧಿಕೃತ ಜಾಹೀರಾತುಗಳನ್ನು ಹಾಕಿದ ಅನೇಕ ಮಂದಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದ್ದರಿಂದ ಇಂಥ ಜಾಹೀರಾತುಗಳ ವಿರುದ್ಧ  ಹೋರಾಟ ನಡೆಸಲು ವಿಶೇಷ ಕಾನೂನು  ಘಟಕ ಸ್ಥಾಪಿಸಿವುದಕ್ಕೂ ಬಿಬಿಎಂಪಿ ನಿರ್ಧರಿಸಿದೆ. ಮೇಯರ್ ಶಾಂತಕುಮಾರಿ ಅಧ್ಯಕ್ಷತೆಯಲ್ಲಿ  ಮಂಗಳವಾರ ನಡೆದ  ಕೌನ್ಸಿಲ್  ಭಂಗಿಯಲ್ಲಿ ಜಾಹೀರಾತು ಫಲಕಗಳ ಕುರಿತು ಸದಸ್ಯ ರಾದ ಪದ್ಮನಾಭ ರೆಡ್ಡಿ ಹಾಗೂ ಮಂಜುನಾಥ ರೆಡ್ಡಿ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಆಯುಕ್ತರು ಉತ್ತರಿಸಿದರು. ಅಧಿಕೃತ ಜಾಹೀರಾತುಗಳ ಪಟ್ಟಿ  ಸಿದ್ಧವಿದೆ  ಅದನ್ನಾಧರಿಸಿ  ಕಾಲಮಿತಿಯಲ್ಲಿಅನಧಿಕೃತ ಫಲಕಗಳನ್ನು ತೆರವುಗೊಳಿಸಲಾಗುವುದು. ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ಜತೆಗೆ ಬಿಎಂಟಿಎಫ್ ಸಹಕಾರವನ್ನು, ಹಾಗೆಯೇ  ಪಾಲಿಕೆ ಸದಸ್ಯರ ನೆರವನ್ನೂ ಪಡೆಯಲಾಗುವುದು ಎಂದು ವಿವರಿಸಿದರು. ಇದಕ್ಕೂ ಮುನ್ನ ಮಾತನಾಡಿದ ಪದ್ಮನಾಭ ರೆಡ್ಡಿ, ನಗರದಲ್ಲಿ 21,000 ಅನಧಿಕೃತ ಜಾಹೀರಾತುಗಳಿವೆ.ಈತನಕ ಒಬ್ಬ ಅ„ಕಾರಿ ವಿರುದಟಛಿವೂ ಕ್ರಮಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನಮಗೇ ಬೇರೆ ಮಾಹಿತಿ ನೀಡಿದ್ದಾರೆ, ಲೋಕಾಯುಕ್ತಕ್ಕೇ ಬೇರೆ ಮಾಹಿತಿ ನೀಡಿದ್ದಾರೆ. ಪತ್ತೆ ಮಾಡಲು ನಿಮಗೆ ಸಾಧ್ಯವಿಲ್ಲದಿದ್ದರೆ ನಿಮ್ಮ ಅಧಿಕಾರಿಗಳನ್ನು ಕೊಡಿ, ನಾನು ಸ್ವಂತ ವೆಚ್ಚದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುತ್ತೇನೆ ಎಂದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಎ.ಎಚ್.ಬಸವರಾಜು, ಅನಧಿಕೃತ ಜಾಹೀರಾತುಗಳ ಹಿಂದೆ ಕಾಣದ ಕೈಗಳಿದ್ದು, ಇದು ಇನ್ನೊಂದು ತಿಂಗಳ ಅವಧಿಯಲ್ಲಾದರೂಬಯಲಾಗಲಿ. ಸಮಗ್ರ ತನಿಖೆ ನಡೆಸಿ ಎಂದು ಆಯುಕ್ತರನ್ನು ಒತ್ತಾಯಿಸಿದರು. ನಗರದಲ್ಲಿ 21,000 ಅನಧಿಕೃತ ಜಾಹೀರಾತುಗಳಿವೆ ಎಂದು ರಮೇಶ್ ನೀಡಿದ ಸಿಡಿಗಳನ್ನು  ಅಧಿಕಾರಿಗಳು  ವೀಕ್ಷಿಸಿದ್ದಾರೆ   ಅವರು ಎಷ್ಟು ಮಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ ಎಂದು ಕೂಗಾಡಿದರು. ಆಗ ಬಿಜೆಪಿಯ ಎಸ್.ಹರೀಶ್, ನಮ್ಮ ಅಧಿಕಾರಿಗಳು ಸ್ಮಶಾನಗಳಲ್ಲೂ ಜಾಹೀರಾತು ಹಾಕುವುದಕ್ಕೆ ಅವಕಾಶ ನೀಡಿದ್ದಾರೆ. ಜಾಹೀರಾತು ಫಲಕಗಳ ಗುತ್ತಿಗೆಯನ್ನು 8 ವರ್ಷಗಳಿಂದ ನವೀಕರಿಸದೆ ಅಕ್ರಮದಲ್ಲಿಯೇ ಉಳಿಸಿಕೊಂಡು  ಬರಲಾಗುತ್ತಿದೆ  ಆದ್ದರಿಂದ  ಇನ್ನುಮುಂದೆ ಇ- ಹರಾಜು ಮೂಲಕ ಜಾಹೀರಾತು ಫಲಕಗಳಿಗೆ ಅನುಮತಿ  ನೀಡುವುದು ಸೂಕ್ತ ಎಂದರು. ಕೆಟ್ಟ ಸಿನಿಮಾಗಳ ಬಗ್ಗೆ ಚರ್ಚೆ: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಕೀಳು ಅಭಿರುಚಿಯ ಚಿತ್ರಗಳು ನಿರ್ಮಾಣವಾಗುತ್ತಿರುವ ಬಗ್ಗೆ ಬಿಬಿಎಂಪಿ ಕೌನ್ಸಿಲ್  ಬಿ ಬಿ ಎಂಪಿ ಸಭೆಯಲ್ಲಿ  ವ್ಯಾಪಕ ಚರ್ಚೆ ನಡೆಸಲಾಯಿತು.  ಬಿಜೆಪಿಯ ಹಿರಿಯ ಸದಸ್ಯ ಬಿ.ಆರ್. ನಂಜುಂಡಪ್ಪ ಮಾತಾಡಿ ಅಪ್ಪ ಲೂಸಾ, ಅಮ್ಮ ಲೂಸಾ ಎಂಬ ಹಾಡುಗಳಿರುವ ಸಿನಿಮಾ ಗಳನ್ನು ನಿರ್ಮಿಸುವ ನಿರ್ಮಾ ಪಕರಿಗೆ ಬಿಬಿಎಂಪಿಯಿಂದ ಉಚಿತ ಜಾಹೀರಾತು  ಫಲಕ ನೀಡಬೇಕಂತೆ. ಉಚಿತ ಚಿತ್ರಮಂದಿರವನ್ನೇ ಕಟ್ಟಿಸಿ ಕೊಟ್ಟುಬಿಡಿ ಎಂದು ವ್ಯಂಗ್ಯ ವಾಡಿದರು. ಪರೋಕ್ಷವಾಗಿ ಶಾಸಕ ಮುನಿರತ್ನ ಅವರನ್ನು ಟೀಕಿಸಲು ಮುಂದಾದ ನಂಜುಂಡಪ್ಪ, ಸಿನಿಮಾ ಭಿತ್ತಿಪತ್ರಗಳನ್ನು ಅಂಟಿಸಬಾರದು ಎಂದು ನಿಷೇಧಿ ಸಿದ್ದರೆ,  ಕೆಲವು ಚಿತ್ರ ನಿರ್ಮಾಪಕರು  ಬಿಬಿಎಂಪಿ ಹೋರ್ಡಿಂಗ್ಸ್ ನೀಡಿದರೆ ಭಿತ್ತಿಪತ್ರ ಅಂಟಿಸುವುದನ್ನು ನಿಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಅವರು ನಿರ್ಮಿಸುವ ಕೀಳು ಅಭಿರುಚಿಯ ಚಿತ್ರಗಳಿಗೆ ಹೋರ್ಡಿಂಗ್ಸ್ ನೀಡಬೇಕಂತೆ. ಟಾಕೀಸ್ ಗಳನ್ನೇ ಕಟ್ಟಿಸಿಕೊಡೋಣ ಬಿಡಿ ಎಂದು ಲೇವಡಿಮಾಡಿದರು. ಆಗ ಬಿಜೆಪಿಯ ಕೃಷ್ಣಪ್ಪ, ಹಳೇ ಪಾತ್ರ, ಹಳೇಕಬ್ಬಿಣ ಹಾಡು ನೆನಪಿಸುವ ಮೂಲಕ ನಿರ್ಮಾಪಕರ ಅಭಿರುಚಿಯನ್ನು ಸಭೆಯ ಗಮನಕ್ಕೆ ತಂದರು. ಜೆಡಿಎಸ್ ನ ಪ್ರಕಾಶ್, ಹೌದು. ನಿಮ್ಮ ಶಾಸಕರೇ ನಿರ್ಮಾಪಕರ ಸಂಘದ ಅಧ್ಯಕ್ಷರು, ಅವರೇ ಹೀಗಾದರೆ ಹೇಗೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com