
ಬೆಂಗಳೂರು: ಕಾಮೆಡ್-ಕೆ ಕೌಲ್ಸಿಲಿಂಗ್ ವೇಳೆ ದೃಢೀಕೃತಗೊಂಡ ದೋಷಪೂರಿತ ಅಂಕಪಟ್ಟಿ ಪತ್ತೆಯಾದ ಬೆನ್ನಲ್ಲೇ ಉಂಟಾದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ 18 ವಿಶ್ವವಿದ್ಯಾಲಯ, ಸರ್ಕಾರದ ವಿವಿಧ ಇಲಾಖೆಗೆ ಪತ್ರ ಬರೆದಿದೆ.
ಕಾಲೇಡು ಪ್ರಾಂಶುಪಾಲರಿಂದ ದೃಢೀಕರಣಗೊಂಡ ದೋಷಪೂರಿತ ಅಂಕಪಟ್ಟಿಗಳು ಕೌಲ್ಸೆಲಿಂಗ್ ವೇಳೆ ಪತ್ತೆಯಾಗಿದ್ದರಿಂದ ಕಾಮೆಡ್-ಕೆಯು ಸುತ್ತೋಲೆ ಹೊರಡಿಸಿ, ಮೂಲ ಅಂಕಪಟ್ಟಿ ತರಬೇಕು ಇಲ್ಲವೇ ಇಲಾಖೆಯಿಂದಲೇ ದೃಢೀಕರಿಸಿ ಅಂಕಪಟ್ಟಿ ತರಬೇಕೆಂದು ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷ ಣ ಇಲಾಖೆಯು ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸೇರಿದಂತೆ 18 ವಿಶ್ವವಿದ್ಯಾಲಯ ಮತ್ತು ಕಾಮೆಡ್-ಕೆಗೆ ಪತ್ರ ಬರೆದು, ಮೂಲ ಅಂಕಪಟ್ಟಿ ವಿತರಿಸುವವರೆಗೆ ಈ ಹಿಂದಿನ ವರ್ಷಗಳಲ್ಲಿದ್ದಂತೆ ದೃಢೀಕೃತ ಅಂಕಪಟ್ಟಿಯನ್ನು ಪರಿಗಣಿಸಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಟುವಂತೆ ತಿಳಿಸಿದೆ.
Advertisement