ಸೌರ ವಿದ್ಯುತ್ ದರ ನಿಗದಿ ಅಕ್ರಮ: ಕೆ.ಇ.ಆರ್.ಸಿಗೆ ಜೆಡಿಎಸ್ ದೂರು

ರಾಜ್ಯ ಸರ್ಕಾರದ ಸೌರ ನೀತಿ ಯೋಜನೆಯ ವಿದ್ಯುತ್ ದರ ನಿಗದಿ ವಿಚಾರದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಜೆಡಿಎಸ್ ದೂರು ಸಲ್ಲಿಸಿದೆ.
ಸೌರ ವಿದ್ಯುತ್(ಸಾಂಕೇತಿಕ ಚಿತ್ರ)
ಸೌರ ವಿದ್ಯುತ್(ಸಾಂಕೇತಿಕ ಚಿತ್ರ)

ಬೆಂಗಳೂರು: ರಾಜ್ಯ ಸರ್ಕಾರದ ಸೌರ ನೀತಿ ಯೋಜನೆಯ ವಿದ್ಯುತ್ ದರ ನಿಗದಿ ವಿಚಾರದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಜೆಡಿಎಸ್ ದೂರು ಸಲ್ಲಿಸಿದೆ.

ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ(ಕೆ.ಇ.ಆರ್.ಸಿ) ಇದನ್ನು ಸ್ವೀಕರಿಸಿದ್ದು ದೂರು ನೀಡಿದವರ ವಿಚಾರಣೆ ನಡೆಸಿದೆ. ಅಲ್ಲದೇ ಈ ಬಗ್ಗೆ ಸಂಬಂಧಿಸಿದ ಇತರ ಪಾಲುದಾರರನ್ನು ವಿಚಾರಣೆ ಮಾಡಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ತಿಳಿಸಿದೆ.

ಜೆಡಿಎಸ್ ವಕ್ತಾರ ರಮೇಶ್ ಬಾಬು ಆಯೋಗಕ್ಕೆ ದೂರು ಸಲ್ಲಿಸಿದ್ದು, ಸರ್ಕಾರದ ಸೌರ ನೀತಿ ಯೋಜನೆಯಲ್ಲಿ ವಿದ್ಯುತ್ ಉತ್ಪಾದಿಸುವ ರೈತರೇ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪೂರೈಸಲು ಮುಂದಾಗಿದ್ದರೂ ಎಸ್ಕಾಂಗಳು ಹೆಚ್ಚಿನ ದರಕ್ಕೆ ಖರೀದಿಸಲು ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದು ಹೇಳಿದರು.

ಅಂದರೆ ಸರ್ಕಾರದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ 3 ಮೇ.ವ್ಯಾ ವರೆಗೂ ಸೌರ ವಿದ್ಯುತ್ ಉತ್ಪಾದಿಸುವಂತೆ ಮಾಡಲು ರೈತರಿಂದ ಅರ್ಜಿ ಆಹ್ವಾನಿಸಿತ್ತು. ಅಗಾ ಆನ್ ಲೈನ್  ಮೂಲಕ ಕೇವಲ 7 ನಿಮಿಷದಲ್ಲಿ 250 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 143 ಅರ್ಜಿಗಳನ್ನು ಅಖೈರುಗೊಳಿಸಿದ್ದ ಸರ್ಕಾರ 300 ಮೇ.ವ್ಯಾ ಸೌರ ವಿದ್ಯುತ್ ಉತ್ಪಾದಿಸಲು ನಿರ್ಧರಿಸಿತ್ತು. ಆದರೆ ಇದರಲ್ಲಿ ಮೂಲ ರೈತರು ಅರ್ಜಿ ಸಲ್ಲಿಸಿರುವ ಪ್ರಮಾಣ ಕಡಿಮೆಯಾಗಿ, ಮಧ್ಯವರ್ತಿಗಳು ಮತ್ತು ಹೊರ ರಾಜ್ಯದವರಿಗೆ ದಾರಿ ಮಾಡಲಾಗಿತ್ತು. ಇದರಲ್ಲಿ ವಂಚನೆಯಾಗಿದೆ. ಇದಲ್ಲದೇ ಈಗ ದರ ನಿಗದಿಯಲ್ಲೂ ಅಕ್ರಮ ನಡೆಯುತ್ತಿದೆ ಎಂದು ರಮೇಶ್ ಬಾಬು ದೂರು ಸಲ್ಲಿಸಿದ್ದಾರೆ.

ರೈತರು ಉತ್ಪಾದಿಸುವ ವಿದ್ಯುತ್ ನ್ನು ಸರ್ಕಾರ ಪ್ರತಿ ಯೂನಿಟ್ ಗೆ ರೂ 6 .90 ರಂತೆ ಖರೀದಿಸಲು ಅವಕಾಶವಿದೆ. ಇದನ್ನು ಆಧರಿಸಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಕೆ.ಇ.ಆರ್.ಸಿ ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ವಿದ್ಯುತ್ ಖರೀದಿ ದರವನ್ನು ಕೆ.ಇ.ಆರ್.ಸಿ ಪ್ರಕಟಿಸಿಲ್ಲ. ಈಗ ವಿದ್ಯುತ್ ಉತ್ಪಾದನಾ ಕಂಪನಿಗಳು ಅರ್ಜಿದಾರರಿಂದ ಪ್ರತಿ ಯೂನಿಟ್ ವಿದ್ಯುತ್ ಗೆ ರೂ 1 .45 ಹೆಚ್ಚಾಗಿ ನೀಡಿದಂತಾಗುತ್ತದೆ. ಅಲ್ಲದೇ ಸರ್ಕಾರಕ್ಕೆ ವಾರ್ಷಿಕ 73 .95  ಕೋಟಿ ನಷ್ಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com