ಇ- ಹರಾಜು ಮಾರುಕಟ್ಟೆಗೆ ಅಸ್ತು

ರೈತರು ಬೆಳೆದ ತೋಟಗಾರಿಕಾ ಉತ್ಪನ್ನಗಳಿಗೆ ಗರಿಷ್ಠ ಬೆಲೆ ದಕ್ಕಿಸಿಕೊಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಹರಾಜು ವ್ಯವಸ್ಥೆಯನ್ನು 200 ಕೋಟಿ ವೆಚ್ಚದಲ್ಲಿ ರೂಪಿಸಲಿದೆ.
ಇ-ಹರಾಜು(ಸಾಂಕೇತಿಕ ಚಿತ್ರ)
ಇ-ಹರಾಜು(ಸಾಂಕೇತಿಕ ಚಿತ್ರ)

ನವದೆಹಲಿ: ರೈತರು ಬೆಳೆದ ತೋಟಗಾರಿಕಾ ಉತ್ಪನ್ನಗಳಿಗೆ ಗರಿಷ್ಠ ಬೆಲೆ ದಕ್ಕಿಸಿಕೊಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಹರಾಜು ವ್ಯವಸ್ಥೆಯನ್ನು 200 ಕೋಟಿ ವೆಚ್ಚದಲ್ಲಿ ರೂಪಿಸಲಿದೆ. ಮುಂದಿನ ಆರು ತಿಂಗಳೊಳಗಾಗಿ ಈ ವ್ಯವಸ್ಥೆ ಸಿದ್ಧವಾಗಲಿದೆ.

ತೋಟಗಾರಿಕಾ ಉತ್ಪನ್ನಗಳಿಗೆ ಇಡಿ ರಾಜ್ಯವನ್ನು ಒಂದೇ ಮಾರುಕಟ್ಟೆಯನ್ನಾಗಿ ಮಾಡಿ ದೇಶಾದ್ಯಂತ ಹರಡಿರುವ 585  ಮಂಡಿಗಳೊಂದಿಗೆ ಆನ್ ಲೈನ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಎಲ್ಲಾ ತೋಟಗಾರಿಕಾ ಉತ್ಪನ್ನಗಳಿಗೂ ಒಂದೇ ಪರವಾನಗಿ ಪಡೆಯುವ ವ್ಯವಸ್ಥೆಯನ್ನು ಜಾರಿಗೊಲಿಸಲಾಗಿದೆ ಎಂದು ಕೆಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ನೂತನ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ರೂಪಿಸಿರುವ ರಾಷ್ಟ್ರೀಯ ನೀತಿಗೂ ಅನುಮೋದನೆ ನೀಡಲಾಗಿದ್ದು ನೂತನ ನೀತಿಯಡಿ 2022 ರೊಳಗೆ 40 ಕೋಟಿ ಜನರಿಗೆ ಕೌಶಲ್ಯತಾ ತರಬೇತಿ ನೀಡುವ ಗುರಿಹೊಂದಿದೆ. ಕೌಶಲ್ಯ ತರಬೇತಿಯನ್ನು ಸಾರ್ವಜನಿಕ ಖಾಸಗಿ ಪಾಲುದಾರಿಕೆಯಡಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಕೃಷಿ ನೀರಾವರಿ ವಿಸ್ತರಿಸಲು ಮತ್ತು ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ಕೃಷಿ ಸಂಚಯಿ ಯೋಜನೆ(ಪಿಎಂಕೆಎಸ್ ವೈ) ರೂಪಿಸಿದೆ. 142 ದಶಲಕ್ಷ ಹೆಕ್ಟೇರ್ ಕೃಷಿ ಪ್ರದೇಶದ ಪೈಕಿ ಶೇ.65 ರಷ್ಟು ಮಳೇಯಾಶ್ರಿತವಾಗಿದೆ. ಈ ಎಲ್ಲಾ ಭೂಮಿಗೆ ಲಭ್ಯವಿರುವ ಎಲ್ಲಾ ಮೂಲಗಳನ್ನು ಬಳಸಿ ನೀರಾವರಿಗೆ ಒಳಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com