ಪಿಯು ವಿದ್ಯಾರ್ಥಿಗಳಿಗೆ ವಿಮೆ ಭಾಗ್ಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಸಾಮೂಹಿಕ ವಿಮೆ ವ್ಯವಸ್ಥೆಯೊಳಗೆ ತರಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.

ತನ್ನ ನೂತನ ಯೋಜನೆಯನ್ನು ವೆಬ್ ಸೈಟ್ ನಲ್ಲಿ ಹರಿಯಬಿಟ್ಟಿರುವ ಇಲಾಖೆ, ಈ ವಿಚಾರದಲ್ಲಿ ಕಾನೂನು ಸಲಹೆ, ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯೆ, ವಿಮೆ ಕಂಪೆನಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.

ಇಲಾಖೆ ಪ್ರಸ್ತಾವನೆ: ಇತ್ತೀಚೆಗೆ ಖಾಸಗಿ ಅನುದಾನ ರಹಿತ ಪದವಿಪೂರ್ವ ಕಾಲೇಜೊಂದರಲ್ಲಿ ಓರ್ವ ವಿದ್ಯಾರ್ಥಿನಿಯನ್ನು ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಈ ವೇಳೆ ಇತರೆ ವಿದ್ಯಾರ್ಥಿನಿಯರಿಗೂ ಗಾಯಗಳಾಗಿ ಕಾಲೇಜಿನ ಒಟ್ಟು ವಾತಾವರಣ ಹದಗೆಟ್ಟಿತ್ತು. ಈ ರೀತಿ ಸುರಕ್ಷಿತ ಹಾಗೂ ಪ್ರಶಾಂತ ವಾತಾವರಣ ಇಲ್ಲದೇ ಇರುವುದು ಒಂದು ಕಡೆಯಾದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮತ್ತು ದಾಖಲಾತಿ ಪರಿಗಣಿಸಿ ವಿಮಾ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com