ಕಸ ಹೆಕ್ಕಲು ಸರಳ ಯಂತ್ರ

ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಹೆಕ್ಕುವಂತಹ ಸೈಕಲ್ ಮಾದರಿಯ ಸರಳ ಯಂತ್ರವನ್ನು ನಗರದ ಗೋಪಾಲನ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ...
ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಹೆಕ್ಕುವ ಸೈಕಲ್ ಮಾದರಿಯ ಯಂತ್ರ
ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಹೆಕ್ಕುವ ಸೈಕಲ್ ಮಾದರಿಯ ಯಂತ್ರ

ಬೆಂಗಳೂರು: ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಹೆಕ್ಕುವಂತಹ ಸೈಕಲ್ ಮಾದರಿಯ ಸರಳ ಯಂತ್ರವನ್ನು ನಗರದ ಗೋಪಾಲನ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಈ ಸೈಕಲ್ ಯಂತ್ರ ರಸ್ತೆಯ ಮೇಲೆ ಬಿದ್ದಿರುವ ತ್ಯಾಜ್ಯವನ್ನು ಸಂಗ್ರಹಿಸಿ ಸೈಕಲ್  ಹಿಂಭಾಗದಲ್ಲಿರುವ ಡಬ್ಬಕ್ಕೆ ಸುರಿಯುತ್ತದೆ. ಯಂತ್ರಕ್ಕೆ ಅಳವಡಿಸಿರುವ ಕನ್ವೆಯರ್  ಬೆಲ್ಟ್ ವಾಹನಕ್ಕೆ ಅಳವಡಿಸಿರುವ ತ್ಯಾಜ್ಯ ಸಂಗ್ರಹ ಬುಟ್ಟಿಗೆ ತ್ಯಾಜ್ಯವನ್ನು ಹಾಕುತ್ತದೆ. ಸಾಮಾನ್ಯ ಸೈಕಲ್ ತುಳಿಯುವಂತೆ ಈ ವಾಹನವನ್ನು ಚಲಾಯಿಸಿ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸಬಹುದು ಎಂದು ವಾಹನವನ್ನು ಅಭಿವೃದ್ಧಿಪಡಿಸಿರುವ ವಿದ್ಯಾರ್ಥಿ ಗಿರೀಶ್ ತಿಳಿಸಿದ್ದಾರೆ.

ಕಾಲೇಜಿನ ಪ್ರೊ.ರಾಜ ಮಾತನಾಡಿ, 3 ತಿಂಗಳಲ್ಲಿ ಈ ಯಂತ್ರವನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಕಸ ಹೆಕ್ಕುವವರು ಕೈಯಿಂದ ಅದನ್ನು ಮುಟ್ಟಬಾರದು ಎಂಬ ಕಾಳಜಿ ಈ ಯಂತ್ರ ತಯಾರಿಕೆಯ ಹಿಂದಿರುವ ಉದ್ದೇಶವಾಗಿತ್ತು. ಇದಕ್ಕೆ 15ರಿಂದ 35 ಸಾವಿರ ರೂಪಾಯಿ ಖರ್ಚು ತಗುಲುತ್ತದೆ. ಶೀಘ್ರವೇ ಇದನ್ನು ಬಿಬಿಎಂಪಿ ಆಯುಕ್ತರ ಮುಂದೆ ಪ್ರದರ್ಶಿಸಿ ಅದನ್ನು ಖರೀದಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com