ಮರಳಿ ಮನೆ ಸೇರಿದ ನಿವಾಸಿಗಳು

ಕನ್ನಿಂಗ್ ಹ್ಯಾಂ ರಸ್ತೆಯ ಕ್ವೀನ್ಸ್ ಅಪಾರ್ಟ್ ಮೆಂಟ್ ವಾಸಿಸಲು ಸುರಕ್ಷಿತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಂತಿಮ ವರದಿ ನೀಡಿದ್ದರಿಂದ, ಅಪಾರ್ಟ್ ಮೆಂಟ್ ನ 'ಸಿ' ಬ್ಲಾಕ್ ನ 32 ಕುಟುಂಬಗಳು ಕಟ್ಟಡಕ್ಕೆ ಮರಳಿವೆ...
ಕ್ವೀನ್ಸ್ ಅಪಾರ್ಟ್ ಮೆಂಟ್ ಪಕ್ಕ ಕಟ್ಟಡ ನಿರ್ಮಿಸುತ್ತಿರುವ ಲೆಗೆಸಿ ಸಂಸ್ಥೆ ಪಕ್ಕದ ಕಟ್ಟಡಗಳಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಿದೆ.
ಕ್ವೀನ್ಸ್ ಅಪಾರ್ಟ್ ಮೆಂಟ್ ಪಕ್ಕ ಕಟ್ಟಡ ನಿರ್ಮಿಸುತ್ತಿರುವ ಲೆಗೆಸಿ ಸಂಸ್ಥೆ ಪಕ್ಕದ ಕಟ್ಟಡಗಳಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಿದೆ.

ಬೆಂಗಳೂರು: ಕನ್ನಿಂಗ್ ಹ್ಯಾಂ ರಸ್ತೆಯ ಕ್ವೀನ್ಸ್ ಅಪಾರ್ಟ್ ಮೆಂಟ್ ವಾಸಿಸಲು ಸುರಕ್ಷಿತವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಂತಿಮ ವರದಿ ನೀಡಿದ್ದರಿಂದ, ಅಪಾರ್ಟ್ ಮೆಂಟ್ ನ 'ಸಿ' ಬ್ಲಾಕ್ ನ 32 ಕುಟುಂಬಗಳು ಕಟ್ಟಡಕ್ಕೆ ಮರಳಿವೆ.

17 ದಿನಗಳ ನಂತರ ಕುಟುಂಬಗಳ ಮನೆಗೆ ಮರಳಿದ್ದು, ಇದುವರೆಗೆ ಸಿಟ್ರಸ್ ಹೊಟೇಲ್ ನಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು. ಲೆಗೆಸಿ ಬಿಲ್ಡರ್ ನಿಂದ ನಡೆಯುತ್ತಿರುವ ಕಟ್ಟಡ ಕಾಮಗಾರಿಯಿಂದ ಕ್ವೀನ್ಸ್ ಅಪಾರ್ಟ್ ಮೆಂಟ್ ಗೆ ಯಾವುದೇ ಹಾನಿಯಿಲ್ಲ ಎಂದು ಅಧಿಕಾರಿಗಳ ತಂಡ ವರದಿ ನೀಡಿದೆ.

ಹೀಗಾಗಿ ಕುಟುಂಬಗಳು ಸಂತಸದಿಂದ ಮನೆಗೆ ಮರಳಿದ್ದು, ಹೊಟೇಲ್ ನಲ್ಲಿ ವಸತಿ, ಆಹಾರ ಸೇರಿದಂತೆ ಎಲ್ಲ ಬಿಲ್ ಗಳನ್ನು ಲೆಗೆಸಿ ಸಂಸ್ಥೆ ಪಾವತಿ ಮಾಡಿದೆ. ವಾಣಿಜ್ಯ ತೆರಿಗೆ ಅಧಿಕಾರಿಗಳ ವಸತಿ ಸಂಕೀರ್ಣಕ್ಕೂ ಕಟ್ಟಡ ಕಾಮಗಾರಿಯಿಂದ ಹಾನಿಯಾಗಿದ್ದು, 6 ಕುಟುಂಬಗಳು ಇನ್ನೂ ಹೊಟೇಲ್ ನಿಂದ ವಾಪಸ್ ಬಂದಿಲ್ಲ. ಈ ಜಾಗದಲ್ಲಿ ಕಟ್ಟಡ ಕಾಮಗಾರಿ ಮುಂದುವರಿದಿದೆ.

ಜೂನ್ 15ರಂದು ಲೆಗೆಸಿ ಸಂಸ್ಥೆಯ ಕಟ್ಟಡ ಕಾಮಗಾರಿಯಿಂದ ಕ್ವೀನ್ಸ್ ಅಪಾರ್ಟ್ ಮೆಂಟ್ ಗೆ ಹಾನಿಯಾಗಿದ್ದು, ಸಿ ಬ್ಲಾಕ್ ನಿವಾಸಿಗಳು ಆತಂಕಗೊಂಡಿದ್ದರು. ಪಾಯ ಅಗೆಯುವಾಗ ಕುಸಿದ ಜಾಗದ ಹತ್ತಿರದಲ್ಲೇ ವಾಸಿಸುತ್ತಿದ್ದವರನ್ನು ಸ್ಥಳಾಂತರಿಸುವಂತೆ ಸೂಚಿಸಲಾಗಿತ್ತು. ಕಟ್ಟಡದ ಅಧ್ಯಯನ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳ ತಂಡ, ಅಪಾರ್ಟ್ ಮೆಂಟ್ ದುರಸ್ತಿ ಪೂರ್ಣಗೊಳ್ಳುವವರೆಗೂ ನಿವಾಸಿಗಳನ್ನು ಮತ್ತೆ ಮನೆಗೆ ಕಳುಹಿಸಬಾರದು ಎಂದು ಮಧ್ಯಂತರ ವರದಿಯಲ್ಲಿ ತಿಳಿಸಿತ್ತು. ಹೀಗಾಗಿ ಹೊಟೇಲ್ ನಲ್ಲೇ ನಿವಾಸಿಗಳು ವಾಸಿಸಬೇಕಾಯಿತು.

ಈಗ ಅಂತಿಮ ವರದಿ ನೀಡಿರುವ ಅಧಿಕಾರಿಗಳ ತಂಡ, ನಿವಾಸಿಗಳು ಮರಳಿ ಮನೆ ಸೇರಬಹುದು ಎಂದು ತಿಳಿಸಿದೆ. 32 ಕುಟುಂಬಗಳ ನಿವಾಸಿಗಳು ಒಂದೇ ಹೊಟೇಲ್ ನಲ್ಲಿ ತಂಗಿದ್ದು, ಮತ್ತೆ ಕ್ವೀನ್ಸ್ ಅಪಾರ್ಟ್ ಮೆಂಟ್ ನಲ್ಲಿನ ತಮ್ಮ ಫ್ಲ್ಯಾಟ್ ಗೆ ಹಿಂದಿರುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com