ಆಯ್ದ ಸಾರಿಗೆ ದರ ಇಳಿಕೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರತಿಷ್ಠಿತ ಸಾರಿಗೆ ವಾಹನಗಳ ಪ್ರಯಾಣ ದರವನ್ನು ಶೇ.10ರಷ್ಟು ಕಡಿತಗೊಳಿಸಿದೆ. ಆದರೆ, ಶನಿವಾರ ಹಾಗೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರತಿಷ್ಠಿತ ಸಾರಿಗೆ ವಾಹನಗಳ ಪ್ರಯಾಣ ದರವನ್ನು ಶೇ.10ರಷ್ಟು ಕಡಿತಗೊಳಿಸಿದೆ. ಆದರೆ, ಶನಿವಾರ ಹಾಗೂ ಭಾನುವಾರ ಸಂಚರಿಸುವ ಪ್ರಯಾಣಿಕರಿಗೆ ಈ ದರ ಅನ್ವಯವಾಗುವುದಿಲ್ಲ. ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಪ್ರಯಾಣಿಸುವ ಪ್ರಯಾಣಿಕರುಗಳಿಗೆ ಮಾತ್ರ ಈ ರಿಯಾಯಿತಿ ಸಿಗಲಿದೆ.

ನಿಗಮದ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ವೈಭವ, ಐರಾವತ, ಐರಾವತ ಮಲ್ಟಿ ಆ್ಯಕ್ಸೆಲ್, ಎಸಿ ಸ್ಲೀಪರ್, ನಾನ್ ಎಸಿ ಸೀಪರ್, ಬ್ಲಿಸ್, ಸುಪೀರಿಯಾ ವಾಹನಗಳಿಗೆ ಈ ದರ ಅನ್ವಯವಾಗಲಿದೆ. ಜುಲೈ 1ರಿಂದ ಈ ಕಡಿತದ ದರ ಜಾರಿಯಾಗಿದ್ದು, ಸೆಪ್ಟೆಂಬರ್ ಕೊನೆವರೆಗೆ ರಿಯಾಯಿತಿ ಸಿಗಲಿದೆ. ಈ ತಿಂಗಳುಗಳಲ್ಲಿ ಜನರ ಓಡಾಟ ಕಡಿಮೆ ಇರುತ್ತದೆ.

ಸಾಕಷ್ಟು ಬಸ್‍ಗಳು ಖಾಲಿ ಸಂಚರಿಸುತ್ತವೆ. ಹಾಗಾಗಿ ಪ್ರಯಾಣಿಕರನ್ನು ಸೆಳೆಯುವ ಹಿನ್ನೆಲೆಯಲ್ಲಿ ಹಾಗೂ ಇಲಾಖೆ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ರಿಯಾಯಿತಿ ನೀಡಲಾಗಿದೆ. ರಿಯಾಯಿತಿ ಬಗ್ಗೆ ಇಲಾಖೆ ವೆಬ್‍ಸೈಟ್‍ನಲ್ಲಿಯೂ ಮಾಹಿತಿ ಡಲಾಗಿದೆ ಎಂದು ಕರಾರಸಾ ನಿಗಮದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com