ನದಿಯೊಳಗೆ ಸಿಕ್ಕಿತು ಅಕ್ಕಿ!

ಯಲ್ಲಾಪುರ ಮತ್ತು ಶಿರಸಿ ತಾಲೂಕಿನ ಗಡಿ ಭಾಗವಾದ ತಡಗುಣಿ ನದಿ ಸೇತುವೆ ಬಳಿ ಸುಮಾರು 20 ಚೀಲದಷ್ಟು ಅಕ್ಕಿ ಚೆಲ್ಲಿರುವುದು ಪತ್ತೆಯಾಗಿದೆ.
ಅಕ್ಕಿ ಚೀಲ( ಸಾಂಕೇತಿಕ ಚಿತ್ರ)
ಅಕ್ಕಿ ಚೀಲ( ಸಾಂಕೇತಿಕ ಚಿತ್ರ)

ಯಲ್ಲಾಪುರ: ಯಲ್ಲಾಪುರ ಮತ್ತು ಶಿರಸಿ ತಾಲೂಕಿನ ಗಡಿ ಭಾಗವಾದ ತಡಗುಣಿ ನದಿ ಸೇತುವೆ ಬಳಿ ಸುಮಾರು 20 ಚೀಲದಷ್ಟು ಅಕ್ಕಿ ಚೆಲ್ಲಿರುವುದು ಪತ್ತೆಯಾಗಿದೆ.

ಈ ಅಕ್ಕಿಯನ್ನು ಎರಡು ದಿನಗಳ ಹಿಂದೆ ಎಸೆದಿರಬಹುದೆಂದು ಅಂದಾಜಿಸಲಾಗಿದ್ದು, ಹರಿದ ಚೀಲಗಳು ನದಿ ತಟದಲ್ಲಿ ಲಭ್ಯವಾಗಿವೆ.

ನದಿಯಲ್ಲಿ ಸುಮಾರು ನಾಲ್ಕೈದು ಅಡಿ ನೀರಿನಲ್ಲಿ ಎರಡು ಅಡಿಗೂ ಹೆಚ್ಚು ಎತ್ತರಕ್ಕೆ ಅಕ್ಕಿ ರಾಶಿ ಬಿದ್ದಿದೆ. 50 ಕೆ.ಜಿಯ 20 ಹರಿದ ಖಾಲಿ ಗೋಣಿಚೀಲ ದೊರೆತಿದ್ದು, ಅದರ ಮೇಲೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಪಂಜಾಬ್ ರೈಸ್ ಎಂದು ಬರೆಯಲಾಗಿದೆ. ಸಂಗೂರ್ ಜಿಲ್ಲೆಯ ಮಲ್ಲಾರ್ ಕೋಟ್ಲಾದ ಎ.ಕೆ ರೈಸ್ ಮಿಲ್ ನಲ್ಲಿ ಮಿಲ್ಲಿಂಗ್ ಆಗಿದ್ದು ಎ ಗ್ರೇಡ್ ರಾ ರೈಸ್ ಎಂದು ಬರೆಯಲಾಗಿದೆ. 2014 -15 ರ ವೇಳೆಯ ಬೆಳೆಯಾಗಿದ್ದು ತೂಕ 50 ಕೆ.ಜೆ ಎಂದು ಲೇಬಲ್ ನಲ್ಲಿ ನಮೂದಿಸಲಾಗಿದೆ. ಈ ಕುರಿತು ಆಹಾರ್ ಶಿರಸ್ತೆದಾರ್ ಜಿ.ಎಸ್ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದು ಇದುವರೆಗೆ ತಮಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. ಬೃಹತ್ ಪ್ರಮಾಣದ ಅಕ್ಕಿ ಚೆಲ್ಲಿರುವುದು ಕುತೂಹಲಕ್ಕೆ ಕಾರಣವಾಗಿದೆ.      
  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com