
ಬೆಂಗಳೂರು: ಕರ್ನಾಟಕ ರಾಜ್ಯ ರೈತರು ಆತ್ಮಹತ್ಯೆಗೆ ಶರಣಾಗದೇ, ನೈಸರ್ಗಿಕ ಕೃಷಿ ಮಾಡಿ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸೋಮವಾರ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಸಾಯನಿಕ ಬಳಸಿ, ಸಾಲಸೋಲ ಮಾಡಿ ಬೆಳೆ ಬೆಳೆಯುವುದಲ್ಲದೇ, ಅದರಿಂದ ಉಂಟಾಗುವ ನಷ್ಟವನ್ನು ತುಂಬಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುದ್ದಾರೆ. ಆದರೆ, ರೈತರು ಈ ರೀತಿ ಆತ್ಮಹತ್ಯೆಗೆ ಶರಣಾಗುವುದು ಸರಿಯಲ್ಲ. ರೈತರು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡರೆ ಈ ರೀತಿ ಆತ್ಮಹತ್ಯೆಗೆ ಶರಣಾಗುವು ಪರಿಸ್ಥಿತಿ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ರೈತ ಜಿರೋ ಬಜೆಟ್ ನಲ್ಲಿ ಕೃಷಿ ಮಾಡಬಹುದು. ಈ ಅರಿವು ಮೂಡಿಸಲೆಂದು ಕರ್ನಾಟಕ ರಾಜ್ಯ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಈ ವೇದಿಕೆಯ ಸದಸ್ಯರು ರಾಜ್ಯದ ಮೂಲೆ ಮೂಲೇಯಲ್ಲೂ ಇದ್ದು, ರೈತರು ಇವರನ್ನು ಸಂಪರ್ಕಿಸಿದರೆ, ಉಚಿತವಾಗಿ ನೈಸರ್ಗಿಕ ಕೃಷಿ ಮಾಡುವುದರ ಬಗ್ಗೆ ಸಲಹೆ ನೀಡುತ್ತಾರೆ.
ರೈತ ಯಾವುದೇ ರಾಸಾಯನಿಕಗಳ ಅವಲಂಭಿತನಾಗದೆ, ಖರ್ಚಿಲ್ಲದೇ ಬೆಳೆಗಳನ್ನು ಬೆಳಯಬಹುದಾಗಿದೆ. ಈ ಹಿನ್ನಲೆಯಲ್ಲಿ ರೈತ ಆತ್ಮಹತ್ಯೆಗೆ ಶರಣಾಗದೇ, ನೈಸರ್ಗಿಕ ಕೃಷಿಯನ್ನು ಅವಲಂಭಿಸಿಕೊಂಡರೆ, ಲಾಭ ಪಡೆಯುವುದರ ಜೊತೆಗೆ, ನಿರಾಳವಾಗಿ ಜೀವನ ಸಾಗಿಸಬಹುದು ಎಂದು ಅವರು ಹೇಳಿದ್ದಾರೆ.
ನಂತರ ಮಾತನಾಡಿದ ವೇದಿಕೆಯ ಮುಖಂಡ ಶಂಕ್ರಣ್ಣ ದೊಡ್ಡಣ್ಣ ಅವರು, ಮಹಾರಾಷ್ಟ್ರದ ಸುಭಾಷ್ ಪಾಳೇಕಾರ್ ಎಂಬುವವರು ನೈಸರ್ಗಿಕ ಕೃಷಿ ಬಗ್ಗೆ ಆಂದೋಲನ ಕೈಗೊಂಡಿದ್ದಾರೆ. ಈ ಆಂದೋಲನದಿಂದ ಸುಮಾರು 1000 ರೈತರು ಜೀರೋ ಬಜೆಟ್ ನಲ್ಲಿ ನೈಸರ್ಗಿಕ ಕೃಷಿ ಪ್ರಾರಂಭಿಸಿ ಹೆಚ್ಚು ಲಾಭ ಪಡೆದಿದ್ದಾರೆ. ಈ ಕೃಷಿ ಮಾಡಲು ರೈತ ಪೇಟೆಗೆ ಹೋಗಬೇಕಿಲ್ಲ ಎಂದಿದ್ದಾರೆ.
ಹೆಚ್ಚಿನ ಮಾಹಿತಿಗೆ: ಚಂದ್ರಶೇಖರ್ ಕಾಡದಿ 9449966891, ಶಂಕ್ರಣ್ಣ ದೊಡ್ಡಣ್ಣ 9448916370 ಸಂಪರ್ಕಿಸಬಹುದು.
Advertisement