ಬಿಡಿಎ ವಶದಲ್ಲಿರುವ ರುದ್ರಭೂಮಿ ಬಿಟ್ಟುಕೊಡುವಂತೆ ಆಗ್ರಹಿಸಿ ನಾಳೆ ಪ್ರತಿಭಟನೆ

ಬಿಡಿಎ ವಶಪಡಿಸಿಕೊಂಡಿರುವ ತಲಘಟ್ಟಪುರ ಗ್ರಾಮದ ಗುಂಡುತೋಪು ರುದ್ರಭೂಮಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ನಾಳೆ ದಲಿತ...
ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಮಿತ್ರ ಸೇನೆ ಮುಖಂಡರು
ಪತ್ರಿಕಾಗೋಷ್ಠಿ ನಡೆಸಿದ ದಲಿತ ಸಂಘಮಿತ್ರ ಸೇನೆ ಮುಖಂಡರು

ಬೆಂಗಳೂರು: ಬಿಡಿಎ ವಶಪಡಿಸಿಕೊಂಡಿರುವ ತಲಘಟ್ಟಪುರ ಗ್ರಾಮದ ಗುಂಡುತೋಪು ರುದ್ರಭೂಮಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ನಾಳೆ ದಲಿತ ಸಂಘಮಿತ್ರ ಸೇನೆ ಪ್ರತಿಭಟನೆ ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಂದ್ರಪ್ಪ, ತಲಘಟ್ಟಪುರ ಗ್ರಾಮಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೇ ನಂಬರ್ 61ರ ಗುಂಡು ತೋಪುನಲ್ಲಿರುವ 1 ಎಕರೆ 20 ಗುಂಟೆ ವಿಸ್ತೀರ್ಣದ ಖಾಲಿ ಜಾಗ ಸ್ಮಶಾನವಾಗಿದ್ದು, ಪೂರ್ವಿಕರ ಕಾಲದಿಂದಲೂರು ಇಲ್ಲಿನ ಸ್ಥಳಿಯರಿಗೆ ಇದು ರುದ್ರ ಭೂಮಿವಾಗಿದೆ. ಈ ಭೂಮಿನಯನ್ನು 2001-2002ನೇ ಸಾಲಿನಲ್ಲಿ ಬಿಡಿಎ ವಶಪಡಿಸಿಕೊಂಡಿತ್ತು. ಅಂದಿನಿಂದಲೂ ಇಲ್ಲಿ ಶವಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಇಲ್ಲಿನ ಸ್ಥಳಿಯರಿಗೆ ಶವಸಂಸ್ಕಾರ ಮಾಡಲು ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದಾರೆ.

ರುದ್ರಭೂಮಿಯನ್ನು ಬಿಟ್ಟುಕೊಡುವಂತೆ ಅನೇಕ ಭಾರಿ ಬಿಡಿಎ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ರುದ್ರಭೂಮಿ ಬಿಟ್ಟುಕೊಡುವಂತೆ ಒತ್ತಾಯಸಿ ನಾಳೆ ಬೆಳಿಗ್ಗೆ 9 ಗಂಟೆಗೆ ರಘುವನಹಳ್ಳಿಯಿಂದ ತಲಘಟ್ಟಪುರ ರುದ್ರಭೂಮಿಯವರೆಗೂ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com