ಆಯುಷ್ ವೈದ್ಯರಿಗೂ ಪ್ರಶಸ್ತಿ: ಸಚಿವ ಖಾದರ್

ಆಯುಷ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವೈದ್ಯರಿಗೆ ಪ್ರಸಕ್ತ ಸಾಲಿನಿಂದ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ - ಯುಟಿ ಖಾದರ್
ಯುಟಿ ಖಾದರ್ (ಸಂಗ್ರಹ ಚಿತ್ರ)
ಯುಟಿ ಖಾದರ್ (ಸಂಗ್ರಹ ಚಿತ್ರ)

ಮಂಗಳೂರು: ಆಯುಷ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವೈದ್ಯರಿಗೆ ಪ್ರಸಕ್ತ ಸಾಲಿನಿಂದ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ದ.ಕ ಉಡುಪಿ ಆಯುಷ್ ಫೌಂಡೇಷನ್ ಉದ್ಘಾಟನೆ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಹಿರಿಯ ಆಯುಷ್  ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು. ಆಯುಷ್ ಪ್ರಶಸ್ತಿಗೆ ಶೀಘ್ರ ಅರ್ಜಿ ಆಹ್ವಾನಿಸುವ ಮೂಲಕ ಪ್ರಕ್ರಿಯೆ ನಡೆಯಲಿದೆ.ಈ ಕ್ಷೇತ್ರದ ಸಾಧಕರ ಸೇವೆ ಗುರುತಿಸುವುದು ಇದರ ಉದ್ದೇಶ ಎಂದರು.

ರಾಜ್ಯದಲ್ಲಿ 500 ಕ್ಕೂ ಹೆಚ್ಚು ಆಯುಷ್ ವೈದ್ಯರ ಹುದ್ದೆ ಖಾಲಿ ಇದೆ. ಇದನ್ನು ಭರ್ತಿಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕೇಂದ್ರಕ್ಕೆ ಪತ್ರ:  ರಾಜ್ಯದಲ್ಲಿ ತಲೆದೋರುವ ವೈದ್ಯರ ಕೊರತೆ ನೀಗಿಸಲು ಹೊಸ ರಾಷ್ಟ್ರೀಯ ನೀತಿ ರೂಪಿಸಲು ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಯುತಿ ಖಾದರ್ ತಿಳಿಸಿದ್ದಾರೆ. ಕೇಂದ್ರ ಸಚಿವರು ಆಯಾ ರಾಜ್ಯಗಳಲ್ಲಿ ಖಾಲಿ ಇರುವ ವೈದ್ಯ ಹುದ್ದೆಗಳ ಅಂಕಿ ಅಂಶಪಡೆಯಬೇಕು. ನಂತರ ಬೇರೆ ರಾಜ್ಯಗಳ ವೈದ್ಯರಿಗೆ ಆಯಾ ರಾಜ್ಯವೇ ಸ್ಟೈಫಂಡ್ ನೀಡುವಂತಾಗಬೇಕು. ಈ ಯೋಜನೆಗೆ ಕೇಂದ್ರ ಒಪ್ಪಿದರೆ ಎಲ್ಲಾ ರಾಜ್ಯಗಳಲ್ಲಿರುವ ವೈದ್ಯರ ಕೊರತೆಗೆ ಮುಕ್ತಿ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com