ಬಾಂಬ್ ಸ್ಫೋಟಕ್ಕೆ ಸಂಚು: ನಾಲ್ವರು ಉಗ್ರರ ವಿರುದ್ಧ ದೋಷಾರೋಪ ಪಟ್ಟಿ

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ನಾಲ್ವರು ಉಗ್ರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ(ಸಂಗ್ರಹ ಚಿತ್ರ)
ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ(ಸಂಗ್ರಹ ಚಿತ್ರ)

ಬೆಂಗಳೂರು: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಲ್ವರು ಉಗ್ರರ ವಿರುದ್ಧ ನ್ಯಾಯಾಲಯಕ್ಕೆ  ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ದೇಶದ ವಿವಿಧೆಡೆ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸ್ಫೋಟಕ ಪೂರೈಕೆ ಹಾಗೂ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ನಾಲ್ವರು ಉಗ್ರರು ಬಂಧಿತರಾಗಿದ್ದಾರೆ.

ರಾಜ್ಯ ಸರ್ಕಾರದ ಅನುಮತಿ ಪಡೆದು ಮೂರು ಸಂಪುಟಗಳಲ್ಲಿ 1700 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದ್ದು 123 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಆಜಾದ್ ನಗರ ನಿವಾಸಿ ಗ್ಬೆಂಗಳೂರಿನ ಕಾಕ್ಸ್ ಟೌನ್ ನಲ್ಲಿರುವ ಚಾಂದ್ ರಸ್ತೆ ನಿವಾಸಿ ಸೈಯದ್ ಇಸ್ಮಾಇಯಿಲ್ ಅಫಾಕ್(36 ) ಭಟ್ಕಳದ ಜಾಮೀಯಾಬಾದ್ ನಿವಾಸಿ ಅಬ್ದುಲ್ ಸಬೂರ್, ಸದ್ದಾಂ ಹುಸೇನ್ ಹಾಗೂ ಭಟ್ಕಳದ ಮುಗ್ಧಂ ಕಾಲೋನಿಯ ರಿಯಾಜ್ ಅಹಮದ್ ಸೈಯದಿ ವಿರುದ್ಧ 49 ನೇ ಸಿಟಿ ಸಿವಿಲ್ ಮತ್ತು ವಿಶೇಷ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

ಬಂಧಿತ ಮೂವರಿಂದ ಪೈಪ್ ಬಾಂಬ್ ಬಳಕೆಗೆ ಬೇಗಾಗಿರುವ ಪೈಪ್ ಗಳು, ಅಮೋನಿಯಂ ನೈಟ್ರೇಟ್, ಟೈಮರ್ ಗಳು ಸ್ಫೋಟಕ ಸಾಮಗ್ರಿಗಳು ಜಿಹಾದ್ ಸಾಹಿತ್ಯ ಇರುವ ಲ್ಯಾಪ್ ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮೊದಲ ಆರೋಪಿ ಇಸ್ಮಾಯಿಲ್ ಅಫಾಕ್ ಹೋಮಿಯೋಪತಿ ವೈದ್ಯನಾಗಿದ್ದು ದೇಶದಲ್ಲಿ ನಡೆಯುವ ಬಾಂಬ್ ಸ್ಫೋಟಗಳಿಗೆ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡುವ ಹೊಣೆ ವಹಿಸಿಕೊಂಡಿದ್ದ. ಭಯೋತ್ಪಾದನಾ ಚಟುವಟಿಕೆ ನಡೆಸುವ ತನ್ನ ಮೇಲೆ ಯಾರಿಗೂ ಅನುಮಾನ ಬರಬಾರದು ಎಂದು ಪಾಕಿಸ್ತಾನದ ಕರಾಚಿಯಲ್ಲಿರುವ ಪಾಕಿಸ್ತಾನಿ ಮಹಿಳೆಯನ್ನು ವಿವಾಹವಾಗಿದ್ದ. ಹಂಡತಿ ಮನೆಗೆ ಹೋಗಿ ಬರುವ ನೆಪದಲ್ಲಿ ಸುಲಭವಾಗಿ ವೀಸಾಪಡೆದು 2009 ರಿಂದ ಕರಾಚಿಗೆ ಹೋಗಿ ಅಲ್ಲಿರುವ ವಿವಿಧ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಅಲ್ಲದೇ ಶಶ್ತ್ರಾಸ್ತ್ರಗಳ ಬಳಕೆ ಮತ್ತು ಬಾಂಬ್ ತಯಾರಿಸುವ ತರಬೇತಿಯನ್ನು ಪಡೆದು ಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com