ರಾಜ್ಯದಲ್ಲಿ ಸೀಟ್ ಬ್ಲ್ಯಾಕಿಂಗ್‍ಗೆ ಲಂಗುಲಗಾಮಿಲ್ಲ!

ಮಧ್ಯಪ್ರದೇಶದ ವ್ಯಾಪಂ ಹಗರಣ ಮತ್ತು ಸರಣಿ ಸಾವಿನ ಪ್ರಕರಣ ಬಯಲಾಗುತ್ತಿದ್ದಂತೆ ಪದೇ ಪದೇ ಕರ್ನಾಟಕದ ಹೆಸರು ಪ್ರಸ್ತಾಪ...
ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)
ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)

 ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ, ಆಡಳಿತ ಮಂಡಳಿ ಪಡೆದದ್ದೇ ಶುಲ್ಕ

ಬೆಂಗಳೂರು: ಮಧ್ಯಪ್ರದೇಶದ ವ್ಯಾಪಂ ಹಗರಣ ಮತ್ತು ಸರಣಿ ಸಾವಿನ ಪ್ರಕರಣ ಬಯಲಾಗುತ್ತಿದ್ದಂತೆ ಪದೇ ಪದೇ ಕರ್ನಾಟಕದ ಹೆಸರು ಪ್ರಸ್ತಾಪವಾಗುತ್ತಿದೆ. ಕರ್ನಾಟಕದ ಮೆಡಿಕಲ್ ಕಾಲೇಜುಗಳ ಸೀಟ್ ಬ್ಲಾಕಿಂಗ್  ದಂಧೆಗೂ ವ್ಯಾಪಂ ಹಗರಣಕ್ಕೂ ನಂಟಿರುವುದರ ಬಗ್ಗೆ ಸುದ್ದಿ ಹರಡಲಾರಂಭಿಸಿದ್ದು, ಈ ಮಧ್ಯೆ ಕರ್ನಾಟಕದಲ್ಲಿ ನಡೆಯುವ ಸೀಟ್ ಬ್ಲಾಕಿಂಗ್‍ದಂಧೆಗೆ ನಿಯಂತ್ರಣ ಇಲ್ಲದಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
ಕಳೆದ ನಾಲ್ಕೈದು ವರ್ಷದ ಹಿಂದಿಗಿಂತ ಕಡಿಮೆ ಪ್ರಮಾಣದಲ್ಲಿ ಗುಪ್ತ ವ್ಯವಹಾರ ನಡೆಯುತ್ತಿದೆ ಯಾದರೂ ಸೀಟ್ ಬ್ಲಾಕಿಂಗ್ ದಂಧೆ ಮಾತ್ರ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಸರ್ಕಾರದ್ದೇ ವರದಿಯ ನುಸಾರ 4 ವರ್ಷಗಳಲ್ಲಿ ಕನಿಷ್ಟ 550 ಸೀಟುಗಳಷ್ಟು ನಿಯಮವಲ್ಲದ ಮಾರ್ಗದಲ್ಲಿ ಮಾರಾಟವಾಗಿತ್ತು.
ಬ್ಲ್ಯಾಕಿಂಗ್ ಅಲ್ಲ, ಮಾಲು: ವ್ಯಾಪಂ ಹಗರಣ ಬಯಲಿಗೆ ಬರುತ್ತಿದ್ದಂತೆ ಮಧ್ಯ ಪ್ರದೇಶದಲ್ಲಿ ಮೂವರು ವಿಶೇಷ ತನಿಖಾ ತಂಡದ ಕೈಗೆ ಸೆರೆಸಿಕ್ಕಿ ದ್ದಾರೆ. ಸುಧೀರ್ ರೈ, ಸಂತೋಷ್ ಗುಪ್ತ, ತರಂಗ ಶರ್ಮ ಬಂಧಿತರಾಗಿದ್ದು, ಇವರು ಇತ್ತೀಚಿನ ವರ್ಷ ಗಳಲ್ಲಿ ಕರ್ನಾಟಕ, ಮಹಾರಾಷ್ಟ್ರದ ವೈದ್ಯ ಕಾಲೇಜು ಗಳಲ್ಲಿ ಸೀಟುಕೊಡಿಸಲು 500ಕ್ಕೂ ಹೆಚ್ಚು ಮಂದಿಗೆ ಸಹಕಾರಕ್ಕೆ ನೀಡಿದ್ದಾರೆ. ಪ್ರತಿ ವಿದ್ಯಾರ್ಥಿಯಿಂದಲೂ  25 ಲಕ್ಷ ಡೀಲ್ ಕುದುರಿಸಿದ್ದಾರೆ ಎಂಬ ಮಾಹಿತಿ ದಾಖಲಾಗಿದೆ. ಈ ಸಂಗತಿಯನ್ನಿಟ್ಟು `ಕನ್ನಡಪ್ರಭ'ವು ಸರ್ಕಾರಿ ವ್ಯವಸ್ಥೆ ಮತ್ತು ಖಾಸಗಿ ಕಾಲೇಜು ಆಡಳಿತಮಂಡಳಿಗಳ ಬಳಿ ಪ್ರಶ್ನಿಸಿದಾಗ, ಯಾರೂ ಉತ್ತರಿ ಸಲು ಸಿದ್ಧರಿಲ್ಲ. ಆದರೆ, ಇದೇನು ಸೀಟ್ ಬ್ಲ್ಯಾಕಿಂಗ್ ಅಲ್ಲ, ಈ ರೀತಿ ಸೀಟು ಹಂಚಿಕೆ ಸಾಮಾನ್ಯ ಸಂಗತಿ ಎಂಬ ಮೆಲುದನಿಯ ಉತ್ತರ ಬಂತು.

ನಿಯಮವೇನು?: ಸುಪ್ರಿಂ ನಿರ್ದೇಶದಂತೆಯೇ ಸೀಟು ಹಂಚಿಕೆಗೆ ಒಂದು ಮಾರ್ಗಸೂಚಿ ಇದೆ. ವೃತ್ತಿ ಶಿಕ್ಷಣ ಸೀಟುಗಳ ಹಂಚಿಕೆಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಸೀಟು ಹಂಚಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕೆಆರ್‍ಎಲ್‍ಎಂ, ಕಾಮೆಡ್-ಕೆ ಸೇರಿ ರಾಷ್ಟ್ರೀಯ ಮಟ್ಟದಲ್ಲಿ 2 ಪ್ರತ್ಯೇಕ ವ್ಯವಸ್ಥೆಗಳಿವೆ.
ಇಲ್ಲಿ ಎರಡು ಅಥವಾ ಮೂರು ಸುತ್ತಿನ ಕೌನ್ಸೆಲಿಂಗ್ ಮುಗಿದ ನಂತರ ಉಳಿಯುವ ಸೀಟು ಸಹಜವಾಗಿ ಆಡಳಿತ ಮಂಡಳಿಗೆ ಸೇರುತ್ತದೆ. ಅಂದರೆ, ಆಯಾ  ಯ ಸಂಸ್ಥೆಗಳೇ ಸೀಟು ಹಂಚಬೇಕು. ಕಾಲೇಜು ಆಡ ಳಿತ ಮಂಡಳಿಗೆ ಸೇರುತ್ತದೆ. ಅಂದರೆ , ಆಯಾ ಸಂಸ್ಥೆಗಳೇ ಸೀಟು ಹಂಚಬೇಕು. ಕಾಲೇಜು  ಆಡಳಿತ ಮಂಡಳಿಗಳು  ಬಯಸುವುದೂ ಅದನ್ನೇ. ಏಕೆಂದರೆ ಸರ್ಕಾಪರಿ ಮಾಡಿದ ಶುಲ್ಕದ 25-30 ಪಟ್ಟು ಹೆಚ್ಚಿನ ಹಣ ಪ್ರತಿ ಸೀಟಿಂದ ಬರುವಾಗ ಆಡಳಿತ ಮಂಡಳಿಗಳೂ ಬೇಡವೆನ್ನು ವುದಿಲ್ಲ. ನ್ಯಾಯಾಲಯದ ತೀರ್ಪಿನಂತೆಯೇ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕೆಇಎ, ಕಾಮೆಡ್-ಕೆ, ರಾಷ್ಟ್ರೀಯ ಪ್ರವೇಶ ಪರೀಕ್ಷೆ ಎದುರಿಸಿ ಸೀಟು ಆಯ್ಕೆ ಮಾಡಿ ಕೊಳ್ಳಬಹುದು. ಅಂತಿಮವಾಗಿ ಒಂದು ಸೀಟನ್ನು ಮಾತ್ರ ಇಟ್ಟುಕೊಂಡು ಉಳಿದಿದ್ದನ್ನು ಬಿಟ್ಟು ಕೊಡ ಬೇಕು. ಮುಂಚೂಣಿ ರ್ಯಾಂಕ್ ಪಡೆದ ವಿದ್ಯಾರ್ಥಿ ಗಳು ಸಹಜವಾಗಿ ಪ್ರಮುಖ ಕಾಲೇಜುಗಳ, ಪ್ರಮುಖ ಕೋರ್ಸುಗಳನ್ನು ಎರಡು ಮೂರು ಸಂಸ್ಥೆಗಳೇ  ಪಡೆದುಕೊಂಡು ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿಕೊಂಡು ಉಳಿದಿದ್ದನ್ನು ಬಿಟ್ಟುಕೊಡುತ್ತಾರೆ.
ಸಿಇಟಿ ನಡೆಸಿ ಸೀಟು ಹಂಚುವ ಸಂಸ್ಥೆಗಳಲ್ಲಿ ಎಲ್ಲಾ ಸುತ್ತಿನ ಕೌನ್ಸೆಲಿಂಗ್ ಮುಗಿದ ನಂತರ ಈ ರೀತಿ ವಾಪಸು ಬರುವ ಸೀಟುಗಳನ್ನು ಮ್ಯಾನೇಜ್‍ಮೆಂಟ್‍ಗಳು ತುಂಬಿಕೊಳ್ಳಲು ಅವಕಾಶವಿದೆ. ಇದನ್ನೂ ಸುಪ್ರೀಂ ಪ್ರಸ್ತಾಪಿಸಿದೆ. ಆದರೆ, ಇಲ್ಲೊಂದು ನಿಯಮವಿದೆ. ಸಂಬಂಧಪಟ್ಟ ಕಾಲೇಜುಗಳು ಈ ರೀತಿಯ ಸೀಟನ್ನು ಅಪೇಕ್ಷಿಸುವ ವಿದ್ಯಾರ್ಥಿಗಳಿಂದ ಪ್ರತ್ಯೇಕ ಅರ್ಜಿ ಆಹ್ವಾನಿಸಿ, ಮೆರಿಟ್ ಆಧಾರದಲ್ಲಿ ಸೀಟು ತುಂಬಿ ಕೊಳ್ಳಬೇಕು. ಆದರೆ, ಈ ನಿರ್ದೇಶ ಪಾಲಿಸುತ್ತಿರುವ ಆಡಳಿತ ಮಂಡಳಿಗಳು ಒಂದೋ ಎರಡೋ ಅಷ್ಟೇ. ರಾಜ್ಯದಲ್ಲಿ 12 ವೈದ್ಯ ಕಾಲೇಜುಗಳಿಗೆ ಕಾಮೆಡ್-ಕೆ ಮುಖಾಂತರ, 14 ಕಾಲೇಜುಗಳಿಗೆ ಕಂ ಆರ್ ಎಲ್ ಎಂ ಮುಖಾಂತರ, 8 ಡೀಮ್ಡ್ ವಿವಿಗಳಿಗೆ ಪ್ರತ್ಯೇಕವಾಗಿ ಸಿಇಟಿ ನಡೆದು ಸೀಟು ಹಂಚಿಕೆ ಮಾಡಲಾಗುತ್ತಿದೆ.

ಮೇಲ್ವಿಚಾರಣೆಯೇಇಲ್ಲ

ಒಟ್ಟಾರೆ ಸೀಟು ಹಂಚಿಕೆ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿದ ನಂತರವೂ ಹಂಚಿಕೆಯಾಗುವ ಸೀಟುಗಳ ಕುರಿತು ಸರ್ಕಾರ ಮತ್ತು ವಿವಿ ವ್ಯವಸ್ಥೆ ಗಂಭೀರವಾಗಿ ಗಮನಿಸಬೇಕಾಗುತ್ತದೆ ಎಂದು ಶಿಕ್ಷಣ ತಜ್ಞರು ವಿಶ್ಲೇಷಿಸುತ್ತಾರೆ. ಏಕೆಂದರೆ, ಸೀಟು ಹಂಚಿಕೆ ಮಾಡುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಾಮೆಡ್-ಕೆ, ಕೆಆರ್‍ಎಲ್‍ಎಂ ಗಳಿಗೆ ಪರೀಕ್ಷೆ ನಡೆಸಿ ಸೀಟು ಹಂಚುವ ಅಧಿಕಾರ ಇದೆಯೇ ಹೊರತು ಬೇರೆ ಅಧಿಕಾರವಿಲ್ಲ. ಆದರೆ, ಮೆಡಿಕಲ್ ಸೀಟು ಪರಿಶೀಲನೆ ಅಧಿಕಾರ ವೈದ್ಯಕೀಯ ಶಿಕ್ಷಣ ಇಲಾಖೆ, ರಾಜೀ ವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ,ಎಂಸಿಐ, ಎಂಜಿನಿಯರಿಂಗ್ ಸೀಟುಗಳಿಗೆ ಸಂಬಂಧಿಸಿ ತಾಂತ್ರಿಕ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ವಿವಿ, ಎಐಸಿಟಿಇ ಗಮನಿಸಬೇಕಾಗುತ್ತದೆ. ಆದರೆ, ಈ ವ್ಯವಸ್ಥೆಗಳಿಗೆ ಇದೆನ್ನೆಲ್ಲಾ ಗಮನಿಸುವ ಅಧಿಕಾರವಿದ್ದರೂ ಪ್ರಯೋಗಿಸು ತ್ತಿಲ್ಲ. ಕನಿಷ್ಟ ಗಮನಿಸುತ್ತಲೂ ಇಲ್ಲ ಎಂಬುದು ಸುಸ್ಪಷ್ಟ. ಈ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ನಿರಾಕರಿಸುತ್ತಾರೆ. ಕಾಮೆಡ್-ಕೆಯನ್ನು ಪ್ರಶ್ನಿಸಿದರೆ, ನಮ್ಮ ವ್ಯಾಪ್ತಿಗೆ ಇದೆಲ್ಲ ಬರುವುದೇ ಇಲ್ಲ ಎಂದು ಸ್ಪಷ್ಟಪಡಿಸುತ್ತದೆ. ಒಟ್ಟಾರೆ, ಸೀಟು ಹಂಚಿಕೆ ಕೌನ್ಸೆಲಿಂಗ್ ನಂತರ ಏನೆಲ್ಲಾ ನಡೆಯು ತ್ತದೆ ಎಂಬುದಕ್ಕೆ ಎಲ್ಲೂ ಉತ್ತರವಿಲ್ಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com