ಗ್ಯಾಸ್ ಗೋದಾಮಿಗೆ ತಕರಾರು: 17ರಂದು ಸಿಎಸ್ ಖುದ್ದು ಹಾಜರಿಗೆ ಕೋರ್ಟ್ ಆದೇಶ

ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಬಾಂಬ್ ಸ್ಪೋಟದಿಂದ ಮೃತಪಟ್ಟಿದ್ದ ಯೋಧನ ಪತ್ನಿಗೆ ಗೋದಾಮಿನಲ್ಲಿ ಸಿಲಿಂಡರ್ ದಾಸ್ತಾನಿಗೆ ಅಡ್ಡಿಪಡಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ...
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜುಲೈ 17ರಂದು ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶಿಸಿದೆ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜುಲೈ 17ರಂದು ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶಿಸಿದೆ

ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಬಾಂಬ್ ಸ್ಪೋಟದಿಂದ ಮೃತಪಟ್ಟಿದ್ದ ಯೋಧನ ಪತ್ನಿಗೆ ಗೋದಾಮಿನಲ್ಲಿ ಸಿಲಿಂಡರ್ ದಾಸ್ತಾನಿಗೆ ಅಡ್ಡಿಪಡಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜುಲೈ 17ರಂದು ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಉಡುಪಿ ಜಿಲ್ಲೆ ಸಾಲಿಗ್ರಾಮ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿದ ಗೋದಾಮಿನಲ್ಲಿ ಸಿಲೆಂಡರ್ ಗಳ ದಾಸ್ತಾನಿಗೆ ಪಂಚಾಯತಿ ಮುಖ್ಯ ಕಾರ್ಯದರ್ಶಿ ಅನುಮತಿ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಮೃತ ಯೋಧನ ಪತ್ನಿ ಎಂ.ಯು. ಭೋಜಮ್ಮ ಎಂಬುವರು ಹೈಕೋರ್ಟ್ ನಲ್ಲಿ ತಕರಾರು ಅರ್ಜಿ ದಾಖಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಸ್ಪಷ್ಟೀಕರಣ ನೀಡಲು ಸ್ವತಹ ಸರ್ಕಾರದ ಮುಖ್ಯ ಕಾರ್ಯದರ್ಶಿ ಜುಲೈ 13ರಂದು ಹೈಕೋರ್ಟ್ ಗೆ ಖುದ್ದು ಹಾಜರಾಗಬೇಕೆಂದು ಸೂಚಿಸಿತ್ತು. ಆದರೆ, ಶುಕ್ರವಾರ ಕಲಾಪದ ಮಧ್ಯೆ ಸರ್ಕಾರದ ಪರ ವಕೀಲೆ ಶ್ವೇತಾ ಕೃಷ್ಣಪ್ಪ ಅವರು ಕೋರ್ಟ್ ಗೆ ಬಂದು, ಮುಖ್ಯ ಕಾರ್ಯದರ್ಶಿ ಅವರ ಹಾಜರಾತಿಗೆ ವಿನಾಯ್ತಿ ನೀಡುವಂತೆ ಕೋರಿದರು.

ಇದಕ್ಕೆ ನ್ಯಾಯಮೂರ್ತಿ ರಾಫವೇಂದ್ರ ಎಸ್.ಚೌಹಾಣ್ ಅಕ್ಷೇಪ ವ್ಯಕ್ತಪಡಿಸಿ ಮುಖ್ಯ ಕಾರ್ಯದರ್ಶಿಯವರಿಗೆ ವಿಚಾರಣೆಗೆ ಬರಲು ಏನು ತೊಂದರೆ? ಅವರೇನು ಬಹಳ ಹೊತ್ತು ನಿಲ್ಲಬೇಕಾಗಿಲ್ಲ, ಕೋರ್ಟ್ ನಲ್ಲಿ ವಿವರಣೆ ಪಡೆದ ನಂತರ ಕಳುಹಿಸಿಕೊಡಲಾಗುವುದು ಎಂದರು.

ಕೊನೆಗೆ ಸರ್ಕಾರಿ ವಕೀಲರು ಪರಿಪರಿಯಾಗಿ ಬೇಡಿಕೊಂಡಾಗ ಜುಲೈ 13ರ ಬದಲು 17ರಂದು ವಿಚಾರಣೆಗೆ ಹಾಜರಾಗಬೇಕೆಂದು ನಿರ್ದೇಶಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com