ಆಂಬುಲೆನ್ಸ್ ಅದ ಹೊಯ್ಸಳ!

ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ನೆರವು ನೀಡಿರುವ ಗಸ್ತಿನಲ್ಲಿದ್ದ ಪೊಲೀಸರು ಹೊಯ್ಸಳ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ತಾಯಿ-ಮಗುವಿನ ಜೀವ ಉಳಿಸಿದ್ದಾರೆ.
ಆಂಬುಲೆನ್ಸ್ ಅದ ಹೊಯ್ಸಳ!

ಬೆಂಗಳೂರು: ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ನೆರವು ನೀಡಿರುವ ಗಸ್ತಿನಲ್ಲಿದ್ದ ಪೊಲೀಸರು ಹೊಯ್ಸಳ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ತಾಯಿ-ಮಗುವಿನ ಜೀವ ಉಳಿಸಿದ್ದಾರೆ.

ತುರ್ತು ಸ್ಥಿತಿಯಲ್ಲಿದ್ದ ಮಹಿಳೆಯರನ್ನು ಕರೆದೊಯ್ಯಲು 108 ಆಂಬುಲೆನ್ಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ವಾಹನ ಬರಲು ತಡವಾಗುತ್ತಿದೆ ಎಂದಾಗ ಸಮಯಪ್ರಜ್ಞೆ ಮೆರೆದ  ರಾಜಗೋಪಾಲ ನಗರ ಪೊಲೀಸರ ನೆರವಿನೊಂದಿಗೆ ಆಸ್ಪತ್ರೆಗೆ ತಲುಪಿದ ಹತ್ತೇ ನಿಮಿಷದಲ್ಲಿ ಮಹಿಳೆ ಹಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನು ಸ್ವಲ್ಪವೇ ತಡವಾಗಿದ್ದರೂ ತಾಯಿ-ಮಗು ಇಬ್ಬರ ಜೀವಕ್ಕೂ ಅಪಾಯವಾಗುತಿತ್ತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ರಾಜಗೋಪಾಲ ನಗರ ಠಾಣೆಯ ಸಿಬ್ಬಂದಿಯ ಈ ಕಾರ್ಯ ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ. ತಮಿಳುನಾಡು ಮೂಲದ ಮನೋಹರನ್ ಪತ್ನಿ ಅಸಾಜಿ ಹಾಗೂ ಒಂದು ಮಗುವಿನ ಜತೆ ಹೆಗ್ಗನಹಳ್ಳಿ ಸಮೀಪದ ಸಂಜೀವಿನಿ ನಗರ ನಾಲ್ಕನೇ ಕ್ರಾಸ್ ನಲ್ಲಿ ನೆಲೆಸಿದ್ದಾರೆ. ಇವರು ಸಮೀಪದ ಕಾರ್ಖಾನೆಯಲ್ಲಿ ಮೆಕಾನಿಕ್.

ಮನೋಹರ್ ಪತ್ನಿಗೆ ತಡರಾತ್ರಿ 1  ಗಂಟೆ ಸುಮಾರಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಟೋ ಸೇರಿದಂತೆ ಬೇರೆ ವಾಹನಗಳಿಗಾಗಿ ಹುಡುಕಾಡಿದರೂ ತಡರಾತ್ರಿಯಾದ ಕಾರಣ ಯಾವೊಂದು ವಾಹನವೂ ಸಿಕ್ಕಿಲ್ಲ. ಗಸ್ತು ತಿರುಗುತ್ತಿದ್ದ ಚೀತಾ ಪೊಲೀಸರು ಮನೋಹರನ್ ಅವರನ್ನು ಏನಾಗಿದೆ ಎಂದು ವಿಚಾರಿಸಿದ್ದಾರೆ. ಈ ವೇಳೆ ಹೊಯ್ಸಳ ವಾಹನವೂ ಅದೇ ಸ್ಥಳಕ್ಕೆ ಆಗಮಿಸಿತ್ತು. ಪೊಲೀಸರ ಸಲಹೆಯಂತೆ 108 ಆಂಬುಲೆನ್ಸ್ ಗೆ ಕರೆ ಮಾಡಿದಾಗ, ಸಹಾಯದ ಬದಲು ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎನ್ನುವ ಉತ್ತರ ಬಂದಿತು. ಕೊನೆಗೆ ಹೊಯ್ಸಳ ವಾಹನದಲ್ಲೇ ಗರ್ಭಿಣಿ ಮಹಿಳೆಯನ್ನು ಗೊರಗುಂಟೆ ಪಾಳ್ಯದ ಇ.ಎಸ್.ಐ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯೊಳಗೆ ಬಿಟ್ಟು ಹೊರ ಬರುವಷ್ಟರಲ್ಲೇ ಹೆರಿಗೆಯಾಗಿ ಹೆಣ್ಣುಮಗುವಾಯಿತು. ಪೊಲೀಸರು ದೇವರಂತೆ ನೆರವಿಗೆ ಬಂದರು ಎಂದು ಮನೋಹರ್ ಕೃತಜ್ಞತೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com