ಚೆಕ್ ಬೌನ್ಸ್: ಶ್ರೀರಾಮುಲು ಖುದ್ದು ಹಾಜರಿಗೆ ಸೂಚನೆ

ಚೆಕ್ ಬೌನ್ಸ್ ಪ್ರಕರಣ ಸಂಬಂಧ ಆಗಸ್ಟ್ 6 ರಂದು ಖುದ್ದು ಹಾಜರಾಗಬೇಕೆಂದು 13 ನೇ ಎಸಿಎಂಎಂ ನ್ಯಾಯಾಲಯ ಬಿಜೆಪಿ ಸಂಸದ ಶ್ರೀರಾಮುಲುಗೆ ನಿರ್ದೇಶನ ನೀಡಿದೆ.
ಸಂಸದ ಶ್ರೀರಾಮುಲು
ಸಂಸದ ಶ್ರೀರಾಮುಲು

ಬೆಂಗಳೂರು:  ಚೆಕ್ ಬೌನ್ಸ್ ಪ್ರಕರಣ ಸಂಬಂಧ ಆಗಸ್ಟ್ 6 ರಂದು ಖುದ್ದು ಹಾಜರಾಗಬೇಕೆಂದು 13 ನೇ ಎಸಿಎಂಎಂ ನ್ಯಾಯಾಲಯ ಬಿಜೆಪಿ ಸಂಸದ ಶ್ರೀರಾಮುಲುಗೆ ನಿರ್ದೇಶನ ನೀಡಿದೆ. ಸೋಮಣ್ಣ ಎಂಬುವವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಶ್ರೀರಾಮುಲು ಅವರಿಗೆ ಹಾಜರಾಗುವಂತೆ ಸೂಚಿಸಿದರು ಗೈರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಹೆಚ್.ಡಿ ಕೋಟೆ ಕ್ಷೇತ್ರದಿಂದ ಬಿಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಿ ಸೋತಿದ್ದರು. ನಂತರ ಎಂ.ಎಲ್.ಸಿ ಸೀಟು ಕೊಡಿಸುವುದಾಗಿ ಎರಡು ಬಾರಿ 75 ಲಕ್ಷದಂತೆ ಒಂದೂವರೆ ಕೋಟಿ ಪಡೆದಿದ್ದರು. ಬಳಿಕ ರಾಯಚೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ರೂ.1 . 46  ಕೋಟಿ ಸಾಲ  ಪಡೆದಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಸೋಮಣ್ಣ ಆರೋಪಿಸಿದ್ದಾರೆ.

ಯಾವುದೇ ಕೆಲಸ ಮಾಡಿಸಿಕೊಡದ ಶ್ರೀರಾಮಲು ಅವರಿಗೆ ಹಣ ಕೇಳಿದಾಗ 2014 ಮಾ.20 ರಂದು ಶ್ರೀರಾಮುಲು ಚೆಕ್ ನೀಡಿದ್ದರು. ಬೆಂಗಳುರಿನ ಹಲಸೂರು ವ್ಯಾಪ್ತಿಯ ಐ.ಎನ್.ಜಿ ವೈಶ್ಯ ಬ್ಯಾಂಕ್ ಚೆಕ್ ನ್ನು ಬ್ಯಾಂಕ್ ಗೆ ಹಾಕಿದಾಗ ಅದು ಬೌನ್ಸ್ ಆಗಿದೆ. ಕೇಳಿದರೆ ಬೆದರಿಕೆ ಹಾಕಿದರು ಎಂದು ಸೋಮಣ್ಣ ನ್ಯಾಯಾಲಯದ ಮೊರೆ ಹೋಗಿದ್ದಾರೆ.     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com