
ಬೆಂಗಳೂರು : ಮುಂಗಾರು ಅಧಿವೇಶನದಲ್ಲಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ಬಾಲ ಕಾರ್ಮಿಕ ಮಸೂದೆ(ತಿದ್ದುಪಡಿ) ಅನುಷ್ಠಾನಗೊಂಡರೆ ಮುಂದಿನ ದಿನಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿ ಉಳಿಯಲಿದೆ ಎಂದು ಕರ್ನಾಟಕ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂಧೋಲನ ಆತಂಕ ವ್ಯಕ್ತಪಡಿಸಿದೆ.
ನಗರದ ಶಾಸಕರ ಭವನದಲ್ಲಿ ಕರ್ನಾಟಕ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂಧೋಲನ ಹಾಗೂ ಸಮಾನ ಮನಸ್ಕ ನಾಗರಿಕ ಸಮಾಜದ ಸಂಘನೆಗಳ ಅಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ವಿವಿಧ ಸಂಘನೆಗಳ ಸಂಚಾಲಕರು, ಕಾಯ್ದೆಯಿಂದ ಬಾಲ ಕಾರ್ಮಿಕರ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಚರ್ಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಸಿಎಲ್ ಫೆಲೋ(ಕೇಂದ್ರೀಯ ಶಿಕ್ಷಣ ತಜ್ಞ) ಡಾ.ವಿಪಿ ನಿರಂಜನಾರಾಧ್ಯ ಇತ್ತೀಚೆಗೆ ಕೇಂದ್ರ ಸರ್ಕಾರ ಸಂಪುಟ ಸಭೆಯಲ್ಲಿ 14 ವರ್ಷದೊಳಗಿನ ಮಕ್ಕಳು ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಉದ್ಯೋಗದಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದೆ. ಅದನ್ನು ಈ ಬಾರಿ ಮುಂಗಾರು, ಅಧಿವೇಶನದಲ್ಲಿ ಜಾರಿಗೊಳಿಸಲು ಮುಂದಾಗಿದೆ ಎಂದರು.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಬಾಲ ಕಾರ್ಮಿಕರಿದ್ದಾರೆ. ಅಲ್ಲದೇ, 1986 ರಲ್ಲಿ ಬಾಲ ಕಾರ್ಮಿಕರ ಹಿತರಕ್ಷಣೆಗಾಗಿ ಜಾರಿಗೊಳಿಸಿದ ಮಸೂದೆಯಲ್ಲೂ ಅನೇಕ ಲೋಪಗಳಿವೆ ಇದನ್ನು ಪುನರ್ ರಚಿಸಲು ಯಾರೂ ಮುಂದಾಗಿಲ್ಲ.ಎಂದ ಅವರು, ಕೇಂದ್ರ ಸರ್ಕಾರ ಪ್ರತಿಯೊಂದು ಮಗುವಿಗೆ ಗುಣಾತ್ಮಕ ಶಿಕ್ಷಣ ಪೌಷ್ಠಿಕ ಆಹಾರ ಹಾಗೂ 18 ವರ್ಷಗಳೊಳಗೆ ದುಡಿಯುವ ಎಲ್ಲಾ ಮಕ್ಕಳನ್ನೂ ಬಾಲ ಕಾರ್ಮಿಕರೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಏಕಾಏಕಿ ಜಾರಿಗೆ ತರಲು ನಿರ್ಧರಿಸಿರುವ ಬಾಲ ಕಾರ್ಮಿಕರ ಮಸೂದೆ ವಿರೋಧಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ ಎಂದು ಸಿ.ಎ.ಸಿ.ಎಲ್.ಕೆ ಸಂಘಟನೆ ತಿಳಿಸಿದೆ.
Advertisement