ಬೆಂಗಳೂರು ವಿವಿಯಿಂದ 23 ಕಾಲೇಜುಗಳಿಗೆ ಪಿ.ಹೆಚ್.ಡಿ ಕೇಂದ್ರಗಳ ಮಾನ್ಯತೆ

ಬೆಂಗಳೂರು ವಿಶ್ವವಿದ್ಯಾಲಯ 23 ಕಾಲೇಜುಗಳನ್ನ ಪಿ.ಹೆಚ್.ಡಿ ಸಂಶೋಧನಾ ಕೇಂದ್ರಗಳನ್ನಾಗಿ ಗುರುತಿಸಿ ಮಾನ್ಯತೆ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯ(ಸಂಗ್ರಹ ಚಿತ್ರ)
ಬೆಂಗಳೂರು ವಿಶ್ವವಿದ್ಯಾಲಯ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮೂಲ ಸೌಕರ್ಯ, ಮಾರ್ಗದರ್ಶಕರನ್ನು ಒಳಗೊಂಡಂತೆ ಉತ್ತಮ ಸೌಲಭ್ಯಗಳನ್ನು ಹೊಂದಿದ 23 ಕಾಲೇಜುಗಳನ್ನ ಪಿ.ಹೆಚ್.ಡಿ ಸಂಶೋಧನಾ ಕೇಂದ್ರಗಳನ್ನಾಗಿ ಗುರುತಿಸಿ ಮಾನ್ಯತೆ ನೀಡಿದೆ.

ಪಿ.ಹೆಚ್.ಡಿ ಕೋರ್ಸ್ ಗಳ ಕೇಂದ್ರಗಳಾಗಿ ಮಾನ್ಯತೆ ಪಡೆಯಲು 32  ಕಾಲೇಜುಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ 23 ಕಾಲೇಜುಗಳಿಗೆ ಅವು ಅರ್ಜಿ ಸಲ್ಲಿಸಿದ ಎಲ್ಲಾ ವಿಷಯಗಳೂ ಪಿ.ಹೆಚ್.ಡಿ ಕೇಂದ್ರಗಳ ಮಾನ್ಯತೆಗೆ ಅವಕಾಶ ಮಾಡಿಕೊಡಲಾಗಿದೆ. 3 ಕಾಲೇಜುಗಳಲ್ಲಿ ಕೆಲವು ವಿಷಯಕ್ಕೆ ಪಿ.ಹೆಚ್.ಡಿ ಕೇಂದ್ರದ ಮಾನ್ಯತೆ ದೊರೆತಿದ್ದು, ಕೆಲವನ್ನು ನಿರಾಕರಿಸಲಾಗಿದೆ. 6 ಕಾಲೇಜುಗಳಿಗೆ ಪಿ.ಹೆಚ್.ಡಿ ಕೇಂದ್ರದ ಮಾನ್ಯತೆ ನೀಡಲು ಸಮಿತಿ ನಿರಾಕರಿಸಿದೆ.
ಪಿ.ಹೆಚ್.ಡಿ ಮಾಡಲಿಚ್ಛಿಸುವವರ ಸಂಖ್ಯೆ ಹೆಚ್ಚಿದ್ದು, ಅನೇಕರಿಗೆ ಪ್ರವೇಶ ದೊರೆಯುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಈ ಅವಕಾಶ ಮಾಡಿಕೊಡಲಾಗಿದೆ ಎಂದು ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಜ್ಞಾನಭಾರತಿ ನೆನೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯಾವಿಷಯಕ ಪರಿಷತ್ ನ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.

ಪದವಿಯ 4 ಸೆಮಿಸ್ಟರ್ ಗಳಲ್ಲಿ ಕನ್ನಡ ಕಲಿಯುವುದು ಕಡ್ಡಾಯ. ಕನ್ನಡವನ್ನು ಮುಖ್ಯ ವಿಷಯವನ್ನಾಗಿ ಕಲಿಯಬೇಕು. 2 ನೇ ಐಚ್ಛಿಕ ವಿಷಯವನ್ನಾಗಿ ಇಂಗ್ಲೀಷ್ ಒಳಗೊಂಡಂತೆ ಯಾವುದೇ ಭಾಷೆ ಕಲಿಯಬಹುದು. ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಸರಳ ಕನ್ನಡ ಪಠ್ಯವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ಹೊಸ ವಿಷಯ ಅಳವಡಿಕೆ: ಪದವಿ ತರಗತಿಗಳಲ್ಲಿ ಕೌಶಲ ಅಭಿವೃದ್ಧಿ ಅಂಗವಾಗಿ ಕಲೆ ಮತ್ತು ವಾಣಿಜ್ಯ ವಿಭಾಗಾದವರು 3 ನೇ ಸೆಮಿಸ್ಟರ್ ನಲ್ಲಿ ವಿಜ್ಞಾನ ಮತ್ತು ಸಮಾಜ ಎಂಬ ವಿಷಯವನ್ನು ಅಧ್ಯಯನ ಮಾಡಲಿದ್ದಾರೆ. ಈ ವಿಷಯಗಳನ್ನು ಅಳವಡಿಸುತ್ತಿರುವುದರಿಂದ ಬೋಧನಾ ಸಮಸ್ಯೆಗಳಿರುತ್ತವೆ. 4 ನೇ ಸೆಮಿಸ್ಟರ್ ಗೆ ಲೈಫ್ ಸ್ಕಿಲ್ ವಿಷಯ ಅಳವಡಿಸಲಾಗುವುದು. ಉದ್ಯೋಗದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿ ಈ ಕೋರ್ಸ್ ಗಳನ್ನು ಅಳವಡಿಸುತ್ತಿದೆ ಎಂದರು.

ಸ್ನಾತಕೋತ್ತರ ಪದವಿಗಳಲ್ಲಿ 3 ನೇ ಸೆಮಿಸ್ಟರ್ ನಲ್ಲಿ ಮುಕ್ತ ಆಯ್ಕೆ ಕಲಿಕೆಯಲ್ಲಿ ವಿಜ್ಞಾನ ವಿದ್ಯಾರ್ಥಿಗಳು ಕಲಾ ವಿಷಯವನ್ನು ಕಲಾ ವಿದ್ಯಾರ್ಥಿಗಳು ವಿಜ್ಞಾನದ ವಿಷಯವನ್ನು ವಾಣಿಜ್ಯದವರು ಕಲೆ ಅಥವಾ ವಿಜ್ಞಾನದ ಒಂದು ವಿಷಯವನ್ನು ಕಡ್ಡಾಯವಾಗಿ ಕಲಿಯಬೇಕು. ಇದನ್ನು ಚಾಯ್ಸ್ ಬೇಸ್ ಕ್ರೆಡಿಟ್ ಸಿಸ್ಟಮ್ ಅಂಗವಾಗಿ ಅಳವಡಿಸಲಾಗಿದ್ದು ಪ್ರಸಕ್ತ ಸಾಲಿನೀಂದ ಅನ್ವಯವಾಗುತ್ತದೆ ಎಂದು ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com