ಹಾಸ್ಟೆಲ್ ಸುಧಾರಣೆ, ಶುಚಿತ್ವ ಜಿಲ್ಲಾಧಿಕಾರಿಗಳ ಹೊಣೆ

ರಾಜ್ಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳ ಸುಧಾರಣೆ ಹಾಗೂ ಶುಚಿತ್ವ ಕಾಪಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ.
ಹೆಚ್. ಆಂಜನೇಯ(ಸಂಗ್ರಹ ಚಿತ್ರ)
ಹೆಚ್. ಆಂಜನೇಯ(ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳ ಸುಧಾರಣೆ ಹಾಗೂ ಶುಚಿತ್ವ ಕಾಪಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ವಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್. ಆಂಜನೇಯ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ವಿಜಯಾನಂದ ಕಾಶಪ್ಪನವರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಸ್ಟೆಲ್ ಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಡಿಸಿಗಳು ಅಲ್ಲಿನ ವ್ಯವಸ್ಥೆಯನ್ನು ಆಗಾಗ್ಗೆ ಪರಿಶೀಲಿಸುತ್ತಾರೆ. ಹಾಸ್ಟೆಲ್ ಗಳಲ್ಲೇ ಎಲ್ಲಾ ದಾಸ್ತಾನು ಇರಿಸಲಾಗುತ್ತದೆ ಎಂದರು. ಹಾಸ್ಟೆಲ್ ಗಳಲ್ಲಿ ಹುಳು ಕಲ್ಲು ಇರುವ ಆಹಾರವನ್ನೇ ಬೇಇಯಿಸಿ ನೀಡಲಾಗುತ್ತದೆ. ಅಡುಗೆ ಗುಣಮಟ್ಟದ್ದಾಗಿರುವುದಿಲ್ಲ ಎಂದು ಕಾಶಪ್ಪನವರ್ ಆರೋಪಿಸಿದರು.

ಅಲ್ಲದೇ 10 -15 ವರ್ಷಗಳಲ್ಲಿ ಒಂದೇ ಎನ್.ಜಿ.ಒ ಗಳಿಗೆ ಗುತ್ತಿಗೆ ನೀಡಲಾಗುತ್ತಿದೆ ಎಂದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com