ಒಕ್ಕಲಿಗರ ಸಂಘದ ಕಚೇರಿಗೆ ನುಗ್ಗಿ ದಾಂಧಲೆ: ಖಜಾಂಚಿಗೆ ಚಪ್ಪಲಿ ಹಾರ

ವೈದ್ಯಕೀಯ ಸೀಟು ಕೊಡುವುದಾಗಿ ನಂಬಿಸಿ 60 ಲಕ್ಷ ಪಡೆದು ವಂಚಿಸಿದ್ದಾರೆಂದು ಆರೋಪಿಸಿ ಒಕ್ಕಲಿಗರ ಸಂಘಕ್ಕೆ ನುಗ್ಗಿದ ನೂರಾರು ಮಂದಿ ಸಂಘದ....
ಒಕ್ಕಲಿಗರ ಸಂಘದ ವೈದ್ಯಕೀಯ ಕಾಲೇಜ್
ಒಕ್ಕಲಿಗರ ಸಂಘದ ವೈದ್ಯಕೀಯ ಕಾಲೇಜ್

ಬೆಂಗಳೂರು: ವೈದ್ಯಕೀಯ ಸೀಟು ಕೊಡುವುದಾಗಿ ನಂಬಿಸಿ 60 ಲಕ್ಷ ಪಡೆದು ವಂಚಿಸಿದ್ದಾರೆಂದು ಆರೋಪಿಸಿ ಒಕ್ಕಲಿಗರ ಸಂಘಕ್ಕೆ ನುಗ್ಗಿದ ನೂರಾರು ಮಂದಿ ಸಂಘದ ಖಜಾಂಚಿ ಉಲ್ಲೂರು ಸಿ.ಮಂಜುನಾಥ್ ಮುಖಕ್ಕೆ ಸ್ಪ್ರೇ ಸಿಂಪಡಿಸಿ, ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಮಧ್ಯಾಹ್ನ ವಿವಿ ಪುರದಲ್ಲಿರುವ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ವೆಂಕಟೇಶ್ ಮತ್ತು ಅವರ ಬೆಂಬಲಿಗರು ಏಕಾಏಕಿ ಬೆಳಗ್ಗೆ ಕಚೇರಿಗೆ ನುಗ್ಗಿ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ವೈದ್ಯಕೀಯ ಸೀಟು ಪಡೆಯಲು ಪಡೆದಿರುವ ಹಣ ಕೂಡಲೇ ವಾಪಸ್ ಮಾಡಬೇಕು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಂಜುನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಧ್ಯಕ್ಷರಿಗೆ ಧಿಕ್ಕಾರ ಕೂಗುತ್ತಾ 100ಕ್ಕೂ ಅಧಿಕ ಮಂದಿ ಕಚೇರಿಗೆ ನುಗ್ಗಿದರು. ನಾನು ಅಧ್ಯಕ್ಷ ಅಲ್ಲ, ಖಜಾಂಚಿ ಎಂದಾಗ ಖಜಾಂಚಿಗೂ ಧಿಕ್ಕಾರ ಎಂದು ಘೋಷಣೆ ಕೂಗಿದರು. ಕೊಟ್ಟ ಹಣ ಈಗಲೇ ಕೊಡಬೇಕೆಂದು ಪಟ್ಟು ಹಿಡಿದರು.

ಈ ಬಗ್ಗೆ ಅಧ್ಯಕ್ಷರನ್ನು ಕೇಳುವಂತೆ ಅವರಿಗೆ ಹೇಳಿದೆ. ಮಾತಿನ ಮಧ್ಯೆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಮುಖಕ್ಕೆ ಸ್ಪ್ರೇ ಸಿಂಪಡಿಸಿ, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದ. ಹಲ್ಲೆಗೆ ಮುಂದಾದಾಗ ಕಚೇರಿ ಸಿಬ್ಬಂದಿ ಮಧ್ಯಪ್ರವೇಶಿಸಿ ತಡೆದರು ಎಂದಿರುವ ಮಂಜುನಾಥ್, ಸಂಘದ ಅಧ್ಯಕ್ಷಕರು ಹಾಗೂ ಸದಸ್ಯರ ಜತೆ ಚರ್ಚಿಸಿದ ನಂತರವೇ ಪೊಲೀಸರಿಗೆ ದೂರು ನೀಡುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದ್ದಾರೆ.

ಏನಿದು ವಿವಾದ: 2014-15ನೇ ಸಾಲಿನಲ್ಲಿ ಕಿಮ್ಸ್ ಸಂಸ್ಥೆಯಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೇರಲು ಒಕ್ಕಲಿಗರ ಸಂಘಕ್ಕೆ ಗಿರೀಶ್ ಖುತ್ವಿಕ್, ಆರ್. ಲೇಖಶ್ರೀ, ವದಾನ್ಯ, ವೆಂಕಟೇಶ್ ಮತ್ತು ಶ್ರೀಕಾರ್ ಸುರಪನೇನಿ ಎಂಬುವವರು ಪ್ರವೇಶ ಶುಲ್ಕ ಪಾವತಿಸಿದ್ದರು. ಆದರೆ ಸೀಟು ದೊರಕಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com