ಮೈಸೂರು ವಿವಿ ಶತಮಾನೋತ್ಸವಕ್ಕೆ ಸಂಭ್ರಮದ ಚಾಲನೆ

ಭಾರತದ ವಿಶ್ವವಿದ್ಯಾನಿಲಯಗಳು ತಂತ್ರಜ್ಞಾನ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದರು. ..
ಮೈಸೂರು ವಿವಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಮೈಸೂರು ವಿವಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಮೈಸೂರು: ಭಾರತದ ವಿಶ್ವವಿದ್ಯಾನಿಲಯಗಳು ತಂತ್ರಜ್ಞಾನ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದರು. ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವಿವಿ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಭಾರತದಲ್ಲಿ 730 ವಿಶ್ವವಿದ್ಯಾನಿಲಯಗಳು, 30 ಎನ್‍ಐಟಿ, 16 ಐಐಟಿಗಳಿವೆ. ಆದರೂ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತ ಯಾವುದೇ ವಿವಿ ಭಾರತದಲ್ಲಿ ಇಲ್ಲದಿರುವುದು ವಿಪರ್ಯಾಸ. ಸಂಶೋಧನೆಗೆ ಅಗತ್ಯವಿರುವ ಪ್ರಮಾಣದಲ್ಲಿ ಆದ್ಯತೆ ನೀಡದಿರುವುದೂ ಇದಕ್ಕೆ ಕಾರಣವಾಗಿದೆ. ಆದ್ದರಿಂದ ನಾವುತಾಂತ್ರಿಕ ಶಿಕ್ಷಣಣ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಸಂಶೋಧನೆಗಳು ನಡೆಯು ವಂತಾಗಬೇಕು. ಆ ಮೂಲಕ ನಾವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು. ದೇಶದಲ್ಲಿ 1.2 ಶತಕೋಟಿ ಜನರು 35 ವರ್ಷದೊಳಗಿನವರಿದ್ದಾರೆ. ಆ ಮೂಲಕ ಉತ್ತಮ ಮಾನವ ಸಂಪನ್ಮೂಲ ಹೊಂದಿದ್ದೇವೆ. ಉನ್ನತ ಶಿಕ್ಷಣದ ವಿಷಯದಲ್ಲಿಯೂ ನಾವು ಮುಂದೆ ಇದ್ದೇವೆ. ಆದರೆ ಉನ್ನತ ಶಿಕ್ಷಣ ಪಡೆದ ಶೇ. 20 ರಷ್ಟು ಮಂದಿ ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಈಗ ಉನ್ನತ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸುವ ಉದ್ದೇಶದಿಂದ ಸರ್ಕಾರ ಹೊಸ ಐಐಟಿ, ಎನ್‍ಐಟಿ ಮತ್ತು ಕೇಂದ್ರ ವಿವಿಗಳನ್ನು ತೆರೆಯಲು ಮುಂದಾಗಿದೆ. ಅಂತೆಯೇ ಖಾಸಗಿ ಸಂಸ್ಥೆಗಳೂ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿವೆ. ನಾವು ಜಾಗತಿಕ ಮಾರುಕಟ್ಟೆಗೆ ಅತ್ಯುತ್ತಮ ಜ್ಞಾನ ಮತ್ತು ಕ್ರಿಯಾಶೀಲತೆ ಹೊಂದಿದ ಪದವೀಧರರನ್ನು ಬಿಡಬೇಕಾದ ಜವಾಬ್ದಾರಿ ಇದೆ ಎಂಬುದನ್ನು ಅರಿಯಬೇಕು ಎಂದು ಅವರು ತಿಳಿಸಿದರು. ರಾಜ್ಯಪಾಲ ಮತ್ತು ಮೈಸೂರು ವಿವಿ ಕುಲಾಧಿಪತಿ ವಜೂಬಾಯಿ ರೂಡಾಭಾಯಿ ವಾಲಾ ಮಾತನಾಡಿ, ಯುವಶಕ್ತಿಯಿಂದ ತುಂಬಿರುವ ಭಾರತಕ್ಕೆ ಉತ್ತಮ ಭವಿಷ್ಯವಿದೆ. ಇಡೀ ವಿಶ್ವವೇ ಈಗ ಭಾರತದೆಡೆಗೆ ನೋಡುತ್ತಿದೆ. ಈ ಸಂದರ್ಭದಲ್ಲಿ ಯುವಕರು ಹಣ ಮತ್ತು ವ್ಯಸನದ ದಾಸರಾಗದೆ ಜ್ಞಾನಾರ್ಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜ್ಞಾನ, ಶಕ್ತಿ ಮತ್ತು ಧನವನ್ನು ಭಾರತ ಮಾತೆಯ ಚರಣಗಳಿಗೆ ಅರ್ಪಿಸಬೇಕು. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ದೇಶಕ್ಕಾಗಿ ದುಡಿಯುಬೇಕು ಎಂದು ಕರೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ರಾಜವಂಶಸ್ಥರ ಸ್ವಾಗತಿಸಲು ಮರೆತರು!
ಮೈಸೂರು: ಮೈಸೂರು ರಾಜ ಪರಂಪರೆಯ ಪ್ರಮುಖ ದೊರೆಯಾಗಿದ್ದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾನಿಲಯದ ಶತ ಮಾನೋತ್ಸವ ಸಮಾರಂಭಕ್ಕೆ ರಾಜವಂಶಸ್ಥ ರನ್ನೇ ಸ್ವಾಗತಿಸಲು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮರೆತರು.ನಗರದ ಮಾಸನ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಸಹೋದರಿಯರನ್ನು ಆಹ್ವಾನಿಸ ಲಾಗಿತ್ತು. ಆದರೆ ಗಣ್ಯರನ್ನು ಸ್ವಾಗತಿಸಲು ನಿಂತ ಪ್ರೊ.ಕೆ.ಎಸ್. ರಂಗಪ್ಪ ಅವರು ಸ್ವಾಗತದ ಜೊತೆಗೆ ಗಣ್ಯರಿಗೆ ನೆನಪಿನ ಕಾಣಕೆ ನೀಡುವು ದರಲ್ಲಿಯೂ ನಿರತರಾದರು. ಸಂಸದರು, ವಿಶ್ರಾಂತ ಕುಲಪತಿಗಳು, ಶಾಸಕರು ಮತ್ತು ಮಾಧ್ಯಮದವರಿಗೆಲ್ಲ ಸ್ವಾಗತ ಎಂದರು. ಆದರೆ ರಾಜವಂಶಸ್ಥರನ್ನೇ ಸ್ವಾಗತಿಸಲು ಮರೆತರು.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com