ನಮ್ಮ 29 ಸಚಿವರ ಭತ್ಯೆ ಲೆಕ್ಕ ಬಲು ದುಬಾರಿ!

ಪ್ರಯಾಣ ವೆಚ್ಚವನ್ನು ತಪ್ಪಾಗಿ ತೋರಿಸಿರುವ ರಾಜ್ಯದ 29 ಸಚಿವರು, 2 ವರ್ಷಗಳಲ್ಲಿ ಬರೋಬ್ಬರಿ...
ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್
ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್

ಬೆಂಗಳೂರು: ಪ್ರಯಾಣ ವೆಚ್ಚವನ್ನು ತಪ್ಪಾಗಿ ತೋರಿಸಿರುವ ರಾಜ್ಯದ 29 ಸಚಿವರು, 2 ವರ್ಷಗಳಲ್ಲಿ ಬರೋಬ್ಬರಿ ರು. 13,79,98,244 ಭತ್ಯೆಯನ್ನು ಪಡೆದುಕೊಂಡಿರುವ ಮಾಹಿತಿ
ಬಹಿರಂಗವಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಬಹಿರಂಗವಾಗಿದ್ದು, ತಮ್ಮ ಪ್ರಯಾಣ ವೆಚ್ಚ ತಪ್ಪಾಗಿ ತೋರಿಸಿರುವ 29 ಸಚಿವರು, ಎರಡು ವರ್ಷಗಳಲ್ಲಿ  ಬರೋಬ್ಬರಿ ರು.13,79,98,244 ಭತ್ಯೆಯನ್ನು ಪಡೆದುಕೊಂಡಿದ್ದಾರೆ. ವೇತನ, ಅತಿಥಿ ಭತ್ಯೆ, ಮನೆ ಬಾಡಿಗೆ ಅಂತ ಕೋಟ್ಯಾಂತರ ರುಪಾಯಿಯನ್ನು ಭತ್ಯೆಯಾಗಿ ಪಡೆದುಕೊಂಡಿರುವ ಸತ್ಯ ಬೆಳಕಿಗೆ ಬಂದಿದೆ.

ರು. 6,26,97,721ಯನ್ನು ವೇತನ, ಮನೆ ಬಾಡಿಗೆ ಮತ್ತು ಅತಿಥಿ ಭತ್ಯೆ ಎಂದು ಹೇಳಿ ಪಡೆದುಕೊಂಡಿದ್ದಾರೆ. 29 ಸಚಿವರು ಕೇವಲ ಪ್ರಯಾಣಕ್ಕಾಗಿಯೇ ರು.7,53,00,523 ಪಡೆದುಕೊಂಡಿದ್ದಾರೆ. ಇನ್ನು ಪ್ರತಿ ಕಿ.ಮೀಗೆ ರು.15 ದರದಲ್ಲಿ ಕಾರುಗಳು ಸಿಗುತ್ತಿರುವ ಸಂದರ್ಭದಲ್ಲೂ ಪ್ರತಿ ಕಿ.ಮೀ ಗೆ ರು.20 ರಿಂದ ರು.30 ದರವನ್ನು ಹೆಚ್ಚಿಸಿ ಭತ್ಯೆ ಪಡೆದುಕೊಂಡಿದ್ದಾರೆ.

ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಮಾಹಿತಿ ಹಕ್ಕು ಕಾಯ್ದೆ ಪಡೆದುಕೊಂಡಿರುವ ಮಾಹಿತಿಯಲ್ಲಿ ಈ ಎಲ್ಲಾ ಅಂಶಗಳು ಬಹಿರಂಗವಾಗಿವೆ. ಯಾವ ಸಚಿವರು ಕೂಡ ಜಿಲ್ಲೆಗಳಿಗೆ ಸರಿಯಾಗಿ ಬರುತ್ತಿಲ್ಲ,

ಸರಿಯಾಗಿ ಕೆಲಸ ಮಾಡುತ್ತಿಲ್ಲ ಆದರೂ ಕೂಡ ಹೆಚ್ಚು ಭತ್ಯೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅತಿ ಹೆಚ್ಚು ಪ್ರಯಾಣ ಭತ್ಯೆ ಪಡೆದ ಸಚಿವರ ವಿವರನ್ನು ಪಡೆದುಕೊಂಡಿದ್ದು, ಅದರಲ್ಲಿ ಸಚಿವ ವಿನಯಕುಮಾರ್ ಸೊರಕೆ ರು.56,62,611, ಆರೋಗ್ಯ ಸಚಿವ ಯು.ಟಿ ಕಾದರ್ ರು.54,42,657, ಅರಣ್ಯ ಖಾತೆ ಸಚಿವ ರಮಾನಾಥ್ ರೈ ರು.51,44,218, ಸಚಿವ ಬಾಬೂರಾವ್ ಚಿಂಚನಸೂರ್ ರು.44,63,127 ಅವರು ಹೆಚ್ಚಿನ ಮಟ್ಟದ ಭತ್ಯೆ ಪಡೆದುಕೊಂಡಿದ್ದು, ಕಡಿಮೆ ಪ್ರಯಾಣ ದರ ಪಡೆದಿರುವ ಕಂದಾಯ ಇಲಾಖೆಯ ಸಚಿವ ಶ್ರೀನಿವಾಸ ಪ್ರಸಾದ್ ಕೇವಲ ರು.2,29,286 ಪ್ರಯಾಣ ಭತ್ಯೆ ಪಡೆದುಕೊಂಡಿದ್ದಾರೆ.

ತಮಗೆ ನೀಡಿರುವಂತಹ ಭತ್ಯೆ ಮಿತಿಯನ್ನು ಮೀರಿ ಹೆಚ್ಚಿನ ಪ್ರಯಾಣ ದರ ತೋರಿಸಿ ಹೆಚ್ಚು ಭತ್ಯೆ ಪಡೆದುಕೊಂಡಿದ್ದಾರೆ. ಕೋಟ್ಯಂತರ ರುಪಾಯಿಗಳನ್ನು ಕೇವಲ ಪ್ರಯಾಣ ದರಕ್ಕಾಗಿ ಪಡೆದುಕೊಂಡಿರುವಂತದ್ದು ಇದೀಗ ಬಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com