ಪಶು ಭಾಗ್ಯ ಯೋಜನೆಗೆ ಸಂಪುಟ ಅಸ್ತು

ಅಂತೂ ರಾಜ್ಯ ಸರ್ಕಾರ ಆರು ತಿಂಗಳ ಬಳಿಕ ಉದ್ದೇಶಿತ ಪಶುಭಾಗ್ಯ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ. ರೈತರಿಗೆ ನೆರವಾಗುವಂತೆ ಹಸು, ಕುರಿ, ಹಂದಿ ಸಾಕಾಣಿಕೆಗೆ ಸಾಲ, ಸೌಲಭ್ಯ ಮತ್ತು ಆರ್ಥಿಕ ನೆರವು ಹಾಗೂ ಖರೀದಿಸಿದ ಜಾನುವಾರುಗಳಿಗೆ ವಿಮಾ ಕಲ್ಪಿಸುವ...
ಪಶು ಭಾಗ್ಯ ಯೋಜನೆಗೆ ಸಂಪುಟ ಅಸ್ತು (ಸಾಂದರ್ಭಿಕ ಚಿತ್ರ)
ಪಶು ಭಾಗ್ಯ ಯೋಜನೆಗೆ ಸಂಪುಟ ಅಸ್ತು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಅಂತೂ ರಾಜ್ಯ ಸರ್ಕಾರ ಆರು ತಿಂಗಳ ಬಳಿಕ ಉದ್ದೇಶಿತ ಪಶುಭಾಗ್ಯ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ. ರೈತರಿಗೆ ನೆರವಾಗುವಂತೆ ಹಸು, ಕುರಿ, ಹಂದಿ ಸಾಕಾಣಿಕೆಗೆ ಸಾಲ, ಸೌಲಭ್ಯ ಮತ್ತು ಆರ್ಥಿಕ ನೆರವು ಹಾಗೂ ಖರೀದಿಸಿದ ಜಾನುವಾರುಗಳಿಗೆ ವಿಮಾ ಕಲ್ಪಿಸುವ ಪಶುಭಾಗ್ಯ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಐದು ತಿಂಗಳ ಹಿಂದೆ ಬಜೆಟ್‍ನಲ್ಲಿ ಘೋಷಿಸಲಾಗಿದ್ದು ಪಶುಭಾಗ್ಯಕ್ಕೆ ರೂಪಿಸಿದ ಮಾನದಂಡಗಳನ್ನು ಅನುಮೋದಿಸಲಾಯಿತು. ಈ ಮೂಲಕ ರೈತರು ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಸೇರಿದಂತೆ ವಿವಿಧ ಸಾಕು ಪ್ರಾಣಿಗಳನ್ನು ಸಾಲ ರೂಪದಲ್ಲಿ ಖರೀದಿಸಿ ಅದಕ್ಕೆ ಪ್ರೊರೀತ್ಸಾಹ ಧನ ಪಡೆಯಲು ಅನುವು ಮಾಡಿಕೊಡಲಾಗಿದೆ. ರೈತರು ಎಲ್ಲ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರು.1.20 ಲಕ್ಷದವರೆಗೂ ಸಾಲ ಸೌಲಭ್ಯ ಪಡೆಯ ಬಹುದಾಗಿದ್ದು, ಇದರಲ್ಲಿ ಹಸು, ಕುರಿ, ಮೇಕೆ, ಎಮ್ಮೆ ಮತ್ತು ಹಂದಿಗಳನ್ನು ಸಾಕಾಣಿಕೆ ಮಾಡ ಬಹುದು. ಇದಕ್ಕೆ ಅವರು ಪಾವತಿಸಬೇಕಿರುವ ಬಡ್ಡಿಯನ್ನು ಸರ್ಕಾರ ಪಾವತಿಸಲಿದೆ. ಅಂದರೆ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಶೇ.33ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.25ರಷ್ಟು ಪ್ರೊರೀತ್ಸಾಹ ಧನ ನೀಡಲಾಗುತ್ತದೆ.

ಇದೇ ಮೊದಲ ಬಾರಿಗೆ ಜಾನುವಾರುಗಳಿಗೆ ವಿಮಾ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದ್ದು, ರೈತರು ತಮ್ಮ ಹಸುಗಳಿಗೆ ವಿಮೆ ಮಾಡಿಸಬಹುದಾಗಿದ್ದು, ಅವರು ಶೇ.30ರಷ್ಟು ಪ್ರೀಮಿಯಂ ಪಾವತಿಸಿದರೆ ಸಾಕು. ಇನ್ನುಳಿದ ಶೇ.60ರಷ್ಟು ಹಣವನ್ನು ಸರ್ಕಾರ ಮತ್ತು ಕೆಎಂಎಫ್ ನೀಡಲಿದೆ. ರೈತರು ಒಂದು ಪ್ರಾಣಿಗೆ ರು.50,000ವರೆಗೂ 5 ಪ್ರಾಣಿಗಳಿಗೆ ಈ ಸೌಲಭ್ಯ ಪಡೆಯಬಹುದಾಗಿದ್ದು, ಇದರಿಂದ ಸುಮಾರು 2 ಲಕ್ಷ ಪ್ರಾಣಿಗಳಿಗೆ ಸೌಲಭ್ಯ ಸಿಗುತ್ತದೆ. ಇದೇ ವೇಳೆ ರಾಜ್ಯದಲ್ಲಿರುವ 80ಕ್ಕೂ ಹೆಚ್ಚು ಗೋ ಶಾಲೆಗಳಿಗೆ ನೆರವು ಒದಗಿಸಲು ಸುಮಾರು ರು.7ಕೋಟಿ ಒದಗಿಸಲು ತೀರ್ಮಾನಿಸ ಲಾಗಿದೆ.

ಹಾಗೆಯೇ ಪ್ರಾಣಿದಯಾ ಸಂಘಟನೆಗಳು ಮತ್ತು ಪ್ರಾಣಿ ಕಲ್ಯಾಣ ಮಂಡಳಿಗಳಿಗೆ ನೆರವು ನೀಡುವುದಕ್ಕೂ ನಿರ್ಧರಿಸಲಾಗಿದೆ. ಖಾಸಗಿ ಬಸ್ಸುಗಳಿಗೆ ಖುಷ್: ರಾಜ್ಯಾದ್ಯಂತ 22 ಜಿಲ್ಲೆಗಳಲ್ಲಿ ಪರ್ಮಿಟ್ ಇಲ್ಲದೆ ಸ್ಥಗಿತವಾಗಿದ್ದ 2830 ಖಾಸಗಿ ಬಸ್ಸುಗಳ ಪುನಾರಂಭಕ್ಕೆ ಅನುವು ಮಾಡಲು ತೀರ್ಮಾನಿಸಲಾಗಿದೆ. ಖಾಸಗಿ ಬಸ್ಸು ಗಳು ಒಂದೇ ಮಾರ್ಗದಲ್ಲಿ ಸಂಚರಿಸಿ ಪರ್ಮಿಟ್ ಉಲ್ಲಂಘಿಸಿದ್ದವು. ಅವುಗಳ ವಿರುದಟಛಿ ರಾಜ್ಯ ರಸ್ತೆ ಸಾರಿಗೆ ನಿಗಮ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆಗ ಕೋರ್ಟ್ ನಿಗಮದ ಪರ ತೀರ್ಪು ನೀಡಿತ್ತು. ಪರಿಣಾಮ ರಾಜ್ಯದಲ್ಲಿ ಸಂಚರಿಸುತ್ತಿದ್ದ 2830 ಖಾಸಗಿ ಬಸ್ಸುಗಳ ಸಂಚಾರ ರದ್ದಾಗಿ ಜನರಿಗೆ ತೊಂದರೆಯಾಗಿತ್ತು. ಅಷ್ಟೇ ಅಲ್ಲ. ಆ ಮಾರ್ಗಗಳಲ್ಲಿ ರಸ್ತೆ ಸಾರಿಗೆ ನಿಗಮಕ್ಕೆ ಬಸ್‍ಗಳನ್ನು ಹಾಕಲು ಕಷ್ಟವೂ ಆಗಿತ್ತು. ಆದ್ದರಿಂದ ಕೋರ್ಟ್ ಆದೇಶ ದಂತೆ 2830 ಬಸ್ಸುಗಳ ಪರ್ಮಿಟ್ ರದ್ದುಗೊಳಿಸಿ, ಅವುಗಳಿಗೆ ತಾತ್ಕಾಲಿಕವಾಗಿ ಪರ್ಮಿಟ್ ನೀಡಲಾಗುತ್ತದೆ. ಈ ಮೂಲಕ ಕೋರ್ಟ್ ಆದೇಶವನ್ನೂ ಪಾಲಿಸಿ, ಬಸ್‍ಗಳ ಸಂಚಾರಕ್ಕೂ ಅನುವುಮಾಡುವುದಕ್ಕೂ ಸಂಪುಟ ತೀರ್ಮಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com