ಕೋಟ್ಯಾಂತರ ಬೆಲೆಯ ಜಲಮಂಡಳಿ ಆಸ್ತಿ ಕಬಳಿಕೆಗೆ ಯತ್ನ

ಕೋಟ್ಯಾಂತರ ಬೆಲೆ ಬಾಳುವ ಜಲಮಂಡಲಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸುತ್ತಿದ್ದರೂ, ತನ್ನ ಆಸ್ತಿಯನ್ನು ಉಳಿಸಿಕೊಳ್ಳಲು ಜಲಮಂಡಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋಟ್ಯಾಂತರ ಬೆಲೆ ಬಾಳುವ ಜಲಮಂಡಲಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸುತ್ತಿದ್ದರೂ, ತನ್ನ ಆಸ್ತಿಯನ್ನು ಉಳಿಸಿಕೊಳ್ಳಲು ಜಲಮಂಡಲಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಲೋಕಸತ್ತಾ ಪಕ್ಷ ಆರೋಪಿಸಿದೆ.

ನಗರದ ಕುಮಾರಪಾರ್ಕ್ ಪಶ್ಚಿಮದಲ್ಲಿರುವ ಕೋಟ್ಯಾಂತರ ಬೆಲೆ ಬಾಳುವ ಜಲಮಂಡಲಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸುಲು ಯತ್ನಿಸುತ್ತಿದ್ದಾರೆ. ಇದನ್ನು ಜಲಮಂಡಲಿ ಗಮನಕ್ಕೆ ತರಲಾಗಿದ್ದರೂ, ಮಂಡಲಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಪಕ್ಷದ ಮುಖಂಡ ದೀಪಕ್ ಆಪಾದಿಸಿದ್ದಾರೆ.

ಕುಮಾರಪಾರ್ಕ್ ಪಶ್ಚಿಮ ರೈಲ್ವೆ ಸಮಾನಾಂತರ ರಸ್ತೆಯ ನಿವೇಶನ ಸಂಖ್ಯೆ 120 ಮತ್ತು 130ರ ನಡುವೆ ಇರುವ ಜಲಮಂಡಳಿಯ ನೀರಿನ ಕೊಳವೆ ಹಾದು ಹೋಗಿವೆ. ಇಲ್ಲಿ ಸುಮಾರು 1200 ಚದರ ಅಡಿ ಭೂಮಿಯನ್ನು ವಸಂತಿ ರಾಜಶೇಖರನ್ ಎಂಬುವರು ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರಿ ಮೌಲ್ಯದಲ್ಲಿ ಇದು ಅಂದಾಜು 2 ಕೋಟಿ ಬೆಲೆ ಬಾಳುವ ಆಸ್ತಿಯಾಗಿದೆ.

ಈಗಲೂ ಈ ಜಾಗದಲ್ಲಿ ನೀರಿನ ಕೊಳವೆ 6 ಅಡಿ ಆಳದಲ್ಲಿದೆ. ಇದಕ್ಕೆ ಪೂರಕವಾದ ದಾಖಲೆಗಳಿದ್ದರೂ ಇದನ್ನು ವಶಕ್ಕೆ ಪಡೆದುಕೊಳ್ಳಲು ಜಲಮಂಡಲಿ ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಸತೇನ್ ಪಟೇಲ್ ಹೇಳಿದ್ದಾರೆ.

1956ರಲ್ಲಿ ಮಾರಾಟವಾದ ನಿವೇಶನಕ್ಕೆ 2011ರಲ್ಲಿ ಬಿಡಿಎ ಕ್ರಯಪತ್ರ ಮಾಡಿಕೊಟ್ಟಿದೆ. 1956ರಲ್ಲಿ 70x120 ಅಡಿ ಅಳತೆಯ ನಿವೇಶನವನ್ನು ಮಾತ್ರ ಮಂಜೂರು ಮಾಡಿ ಉಳಿದ ಜಾಗವನ್ನು ನೀರಿನ ಕೊಳವೆ ಹಾದು ಹೋಗಲು ಮೀಸಲಿಡಲಾಗಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವೂ ಕೂಡ ಜಲಮಂಡಲಿ ಪರವಾಗಿ ತೀರ್ಪು ನೀಡಿತ್ತು. ಆದರೆ, ಜಲಮಂಡಳಿ ಮಾತ್ರ ತನ್ನ ಆಸ್ತಿಯನ್ನು ಹಿಂಪಡೆಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com