ವಿಶ್ವವನ್ನು ಕಾಡುತ್ತಿದೆ ಹೃದ್ರೋಗ

2030ರ ವೇಳೆಗೆ ಜಗತ್ತಿನಲ್ಲಿ ಹೃದ್ರೋಗ ಸಮಸ್ಯೆ ಬೃಹದಾಕಾರವಾಗಿ ಕಾಡಲಿದೆ, ಈ ರೋಗಕ್ಕೆ ಹೆಚ್ಚು ತುತ್ತಾಗುತ್ತಿರುವವರು ಯುವ ಜನತೆ...
ಹೃದಯ (ಸಾಂದರ್ಭಿಕ ಚಿತ್ರ)
ಹೃದಯ (ಸಾಂದರ್ಭಿಕ ಚಿತ್ರ)

ಬೆಂಗಳೂರು: 2030ರ ವೇಳೆಗೆ ಜಗತ್ತಿನಲ್ಲಿ ಹೃದ್ರೋಗ ಸಮಸ್ಯೆ ಬೃಹದಾಕಾರವಾಗಿ ಕಾಡಲಿದೆ, ಈ ರೋಗಕ್ಕೆ ಹೆಚ್ಚು ತುತ್ತಾಗುತ್ತಿರುವವರು ಯುವ ಜನತೆ ಎಂದು ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಆತಂಕ ವ್ಯಕ್ತಪಡಿಸಿದರು. ಸೋಮವಾರ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ 19ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ `ಹೃದ್ರೋಗಗಳು ಹಾಗೂ ಇತ್ತೀಚಿನ ಬೆಳವಣಿಗೆಗೆಳು - ಒಂದು ಪಕ್ಷಿ ನೋಟ' ಕುರಿತು ಅವರು ಮಾತನಾಡಿದರು. ನಗರೀಕರಣ, ಮೊಬೈಲೀಕರಣ, ಸಾಂಕ್ರಾ ಮಿಕವಲ್ಲದ ರೋಗಗಳಾದ ಕ್ಯಾನ್ಸರ್, ಹೃದಯಾಘಾತ, ಉಸಿರಾಟದ ತೊಂದರೆ ಹಾಗೂ ಅನುವಂಶೀಯತೆಯಿಂದ 45ರ ಒಳಗಿನ ವಯಸ್ಸಿನವರಲ್ಲಿ ಹೃದಯದ ಸಮಸ್ಯೆ ಕಂಡು ಬರುತ್ತಿದೆ. ಈ ಸಮಸ್ಯೆಗಳಿಂದ ಹೆಚ್ಚು ಮಹಿಳೆಯರು ಮತ್ತು ಯುವಕರು ಬಳಲುತ್ತಿದ್ದಾರೆ. ಮಹಿಳೆಯರಿಗೆ ಮೆನೋಪಾಸ್ ಸಂದರ್ಭದಲ್ಲಿ ಉಂಟಾಗುವ ಒತ್ತಡಗಳಿಂದ ಹೃದ್ರೋಗ ಕಾಣಿಸಿಕೊಳ್ಳುತ್ತದೆ. ನಗರೀಕರಣದಿಂದ ನಗರದ ಜನತೆ ಮೇಲೆ ಒತ್ತಡ ಹೆಚ್ಚುತ್ತಿದೆ. ಇದು ಅವರ ಆರೋಗ್ಯದ ಮೇಲೂ ಪ್ರಭಾವ ಬೀರಿ ಹೃದಯರೋಗ, ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ತಂದೊಡ್ಡುತ್ತಿದೆ ಎಂದರು.


ಸೈಲೆಂಟ್ ಕಿಲ್ಲರ್: ಧೂಮಪಾನ, ವಾಯು ಮಾಲಿನ್ಯ ಹಾಗೂ ಮಧುಮೇಹದಿಂದ ಮುಂಬರುವ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಸ್ಥೂಲ ದೇಹವುಳ್ಳವರು ವ್ಯಾಯಾಮ ಮಾಡುವ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು. ಸಣ್ಣಗಿರುವವರಲ್ಲಿ ಅಪೌಷ್ಟಿಕತೆಯಿಂದ ಹೃದಯಾಘಾತ ಸಂಭವಿಸುತ್ತದೆ. ಒತ್ತಡ ಮತ್ತು ವ್ಯಕ್ತಿತ್ವ ದೋಷದಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆಹೆಚ್ಚುತ್ತಿದೆ. ತೃತೀಯ ಜಗತ್ತಿನ ದೇಶಗಳಲ್ಲಿ ಈ ಹಿಂದೆ ಶೇ.20 ರಿಂದ 25ರಷ್ಟು ಹೃದ್ರೋಗಿಗಳ ಸಂಖ್ಯೆ ಇತ್ತು. ಈಗ ಈ ದೇಶಗಳಲ್ಲೂ ಹೃದಯ ಸಂಬಂ„ ಕಾಯಿಲೆಗಳು ಹೆಚ್ಚುತ್ತಿವೆ. ಈಗಿನ ಜೀವನ ಶೈಲಿಯೇ ಹಲವು ರೋಗಗಳನ್ನು ತಂಡೊಡ್ಡುತ್ತದೆ. ಐಟಿ ಕ್ಷೇತ್ರದಲ್ಲಿರುವವರು ಕಚೇರಿ, ಪ್ರಯಾಣ, ವಿಶ್ರಾಂತಿ ಸಂದರ್ಭಗಳಲ್ಲೂ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದಾರೆ. ಆದ್ದರಿಂದ ಆ ಕ್ಷೇತ್ರದವರು ಸಣ್ಣ ವಯಸ್ಸಿಗೇ ಸಾಂಕ್ರಾಮಿಕ ವಲ್ಲದ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ವೈದ್ಯಕೀಯ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕಿ ಡಾ. ಶಿವರತ್ನ ಸಿ. ಸಾವಡಿ, ರಾಜೀವ್ ಗಾಂ„ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲ ಯದ ಕುಲಪತಿ ಡಾ. ಕೆ.ಎಸ್.ರವೀಂದ್ರನಾಥ್ ಹಾಗೂ ಡಾ. ಭರತ್‍ಚಂದ್ರ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com