ಕೆಎಸ್‍ಆರ್ ಟಿಸಿ ಬಸ್ ಸ್ವಚ್ಛತೆಗೆ ಹೊಸ ಯಂತ್ರ

ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿಯೇ ಪ್ರಪ್ರಥಮ ಬಾರಿಗೆ ಬಸ್‍ನ ಹೊರಮೈ ಸ್ವಚ್ಛಗೊಳಿಸಲು ಆಂತರಿಕವಾಗಿ ನಿರ್ಮಿಸಿರುವ ನೂತನ ವಾಷಿಂಗ್...
ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ ಕಟಾರಿಯಾ ಬಸ್ ವಾಷಿಂಗ್ ಯಂತ್ರವನ್ನು ಉದ್ಘಾಟಿಸಿದರು.
ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ ಕಟಾರಿಯಾ ಬಸ್ ವಾಷಿಂಗ್ ಯಂತ್ರವನ್ನು ಉದ್ಘಾಟಿಸಿದರು.

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿಯೇ ಪ್ರಪ್ರಥಮ ಬಾರಿಗೆ ಬಸ್‍ನ ಹೊರಮೈ ಸ್ವಚ್ಛಗೊಳಿಸಲು ಆಂತರಿಕವಾಗಿ ನಿರ್ಮಿಸಿರುವ ನೂತನ ವಾಷಿಂಗ್ ಯಂತ್ರವನ್ನು ಅಳವಡಿಸಲಾಗಿದೆ. ಕೆಎಸ್‍ಆರ್ ಟಿಸಿ ಬೆಂಗಳೂರು ಕೇಂದ್ರಿಯ ವಿಭಾಗ (ಘಟಕ 4)ದಲ್ಲಿ ಈ ಯಂತ್ರ ಅಳವಡಿಸಲಾಗಿದ್ದು, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ ಕಟಾರಿಯಾ ಮಿಷಿನ್ ಅನ್ನು ಉದ್ಘಾಟಿಸಿದರು.

ವೋಲ್ವೋ ಬಸ್‍ನ ಹೊರಮೈಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಇದನ್ನು ಬಳಸಲಾಗುತ್ತದೆ. ಈ ಹಿಂದೆ ಇದ್ದ ವಾಷಿಂಗ್ ಮಿಷಿನ್‍ನಲ್ಲಿ 2 ಬ್ರಷ್‍ಗಳಿದ್ದವು. ಇದರಿಂದ ಬಸ್ ತೊಳೆಯುವುದು ಕಷ್ಟವಾಗುತ್ತಿತ್ತು. ಆದರೆ, ಈಗ ಅಳವಡಿಸಿರುವ ವಾಷಿಂಗ್ ಮಿಷಿನ್‍ನಲ್ಲಿ 6 ಬ್ರಷ್ ಗಳಿದ್ದು(ಎರಡೂ ಕಡೆಯಲ್ಲಿ ತಲಾ 3 ಬ್ರಶ್‍ಗಳನ್ನು ಅಳವಡಿಸಲಾಗಿದೆ), ಇದರಿಂದ ಬಸ್ ಸ್ವಚ್ಛಗೊಳಿಸುವುದು ಸುಲಭ. ಮಿಷಿನ್‍ನಲ್ಲಿರುವ ಹೆಚ್ಚಿನ ಸೌಲಭ್ಯಗಳು, ವಾಷಿಂಗ್‍ನ ಗುಣಮಟ್ಟ ಹೆಚ್ಚಿಸುವುದರೊಂದಿಗೆ, ಬಳಕೆಯಾಗುತ್ತಿದ್ದ ಮಾನವ ಶಕ್ತಿ ಕಡಿಮೆ ಮಾಡುತ್ತದೆ. ಈ ಹಿಂದೆ
ಉಪಯೋಗಿಸುತ್ತಿದ್ದ ವಾಷಿಂಗ್ ಮೆಷಿನ್‍ನಲ್ಲಿ ಈ ಸೌಲಭ್ಯ ಇರಲಿಲ್ಲ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com