ತರಕಾರಿ ಮಾರುಕಟ್ಟೆ
ತರಕಾರಿ ಮಾರುಕಟ್ಟೆ

ಬೆಳೆ ಕುಂಠಿತ: ತರಕಾರಿ ಬೆಲೆ ಏರಿಕೆ

ಮಳೆ ಕೊರತೆ, ಮಳೆ ಹಾನಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಿಂದಾಗಿ ನಗರಕ್ಕೆ ಸರಬರಾಜಾಗುತ್ತಿರುವ ತರಕಾರಿ ಪ್ರಮಾಣದಲ್ಲಿ...

ಬೆಂಗಳೂರು: ಮಳೆ ಕೊರತೆ, ಮಳೆ ಹಾನಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಿಂದಾಗಿ ನಗರಕ್ಕೆ ಸರಬರಾಜಾಗುತ್ತಿರುವ ತರಕಾರಿ ಪ್ರಮಾಣದಲ್ಲಿ ಕುಂಠಿತವಾಗಿದ್ದು, ತರಕಾರಿ ಬೆಲೆ ಸದ್ಯಕ್ಕೆ ಹೆಚ್ಚಾಗಿದೆ. ಇನ್ನೊಂದು ವಾರದಲ್ಲಿ ಈ ಬೆಲೆ ಇಳಿಮುಖವಾಗಲಿದೆ. ಚುನಾವಣೆ ಪ್ರಕ್ರಿಯೆಯಿಂದ ಪ್ರತಿನಿತ್ಯವೂ ನಗರಕ್ಕೆ ತರಕಾರಿ ತಂದು  ಮಾರುತ್ತಿದ್ದ ರೈತರ ಪ್ರಮಾಣವೂ ಇಳಿಮುಖವಾಗುತ್ತಿದೆ. ಒಂದೆರಡು ದಿನ ಬಿಟ್ಟು ಮಾರುಕಟ್ಟೆಗೆ ಕೊಂಡೊಯ್ಯೋಣ ಎಂಬ ಆಲೋಚನೆ ಕೆಲವರದ್ದಾಗಿದ್ದರೆ, ಇನ್ನು ಕೆಲವರು ಚುನಾವಣೆ ಮುಗಿಯಲು ಕಾಯುತ್ತಿದ್ದಾರೆ. ಇನ್ನು ಮಳೆಯೂ ತರಕಾರಿ ಬೆಳೆ ಕುಂಠಿತವಾಗಲು ಕಾರಣವಾಗಿದ್ದು, ಕೆಲವು ಭಾಗಗಳಲ್ಲಿ ಅಕಾಲಿಕ ಮಳೆ, ಆಲಿಕಲ್ಲಿನಿಂದ ತರಕಾರಿ ಹಾಳಾಗಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರುಮುಖವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ತರಕಾರಿ ಸರಬರಾಜು ಮತ್ತು ಬೆಲೆ ಮೊದಲ ಹಂತಕ್ಕೆ ಬರುವ ಸಾಧ್ಯತೆಯಿದೆ. ಕೊತ್ತಂಬರಿ ಸೊಪ್ಪು ಏಕಾಏಕಿ ರು. 80ರಿಂದ ರು. 120ಕ್ಕೆ ತಲುಪಿದೆ. ಹೂಕೋಸು, ನಾಟಿ ಕ್ಯಾರೇಟ್, ಎಲೆಕೋಸು, ಬೀನ್ಸ್ ಬೆಲೆ ಇನ್ನೆರಡು ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಆದರೆ ಕೆಲವು ತರಕಾರಿಗಳಿಗೆ ಅನ್ಯ ರಾಜ್ಯಗಳಲ್ಲಿ ಬೇಡಿಕೆ ಮತ್ತು ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿವೆ. ಕೆಲವು ತರಕಾರಿಗಳ ಬೆಲೆ ಕಳೆದ ವಾರಕ್ಕೆ ಹೋಲಿಸಿದಲ್ಲಿ ಈ ವಾರ ಇಳಿಕೆಯಾಗಿವೆ. ಬೀನ್ಸ್  ರು.80ರಿಂದ 73ಕ್ಕೆ, ಟೊಮೆಟೋ ರು.27ರಿಂದ ರು.22ಕ್ಕೆ ಇಳಿಕೆಯಾಗಿದೆ. ಅವರೆಕಾಯಿ 44 ರಿಂದ 40ಕ್ಕೆ ಇಳಿದಿದೆ. ಕ್ಯಾರೇಟ್, ಎಲೆಕೋಸು, ಹೂಕೋಸು, ಟೊಮೇಟೊ ಹೀಗೆ ರಾಜ್ಯದಲ್ಲಿ ಬೆಳೆದ ಬಹುತೇಕ ತರಕಾರಿಗಳಲ್ಲಿ ಶೇ.50ಕ್ಕೂ ಅಧಿಕ ಪ್ರಮಾಣದಲ್ಲಿ ಕೇರಳ, ಆಂಧ್ರಮತ್ತಿತರ ರಾಜ್ಯಗಳಿಗೆ ಹೋಗುತ್ತವೆ. ಜತೆಗೆ ಈಗ ಕೆಲವೆಡೆ ಆಲಿಕಲ್ಲು ಮಳೆಯಾದ ಕಾರಣ ಕೆಲವು ತರಕಾರಿಗಳಿಗೆ ಹಾನಿಯಾಗಿದೆ. ಹೀಗಾಗಿ ಕೆಲವು ಏರಿಕೆಯಾದರೆ,
ಇನ್ನು ಕೆಲವಕ್ಕೆ ಇಳಿಕೆಯಾಗಿದೆ.


ಹಾಪ್‍ಕಾಮ್ಸ್ ತರಕಾರಿ ಬೆಲೆ (ಕೆ.ಜಿಗೆ)
ಅವರೆಕಾಯಿ  ರು. 40
ಬೇಬಿ ಕಾರ್ನ್ ರು.24
ಬೀನ್ಸ್ ರು.73
ಕ್ಯಾಬೇಜ್ ರು.23
ಕ್ಯಾಪ್ಸಿಕಮ್ ರು.32
ಕ್ಯಾರೇಟ್ ನಾಟಿ ರು.36
ಬೆಳ್ಳುಳ್ಳಿ ರು.90
ಹೀರೆಕಾಯಿ ರು.55
ಟೊಮೆಟೋ ರು.22
ಬೀಟ್ರೂಯಟ್ ರು.27
ಪಾಲಕ್ ಸೊಪ್ಪು ರು.44
ಪುದೀನಾ ಸೊಪ್ಪು ರು.44
ಅಂಜೂರಾ ರು.80
ಸೇಬೂ ರು.265
ಚಂದ್ರಬಾಳೆ ರು.46
ಏಲಕ್ಕಿ ಬಾಳೆ ರು.39
ಹಸಿರು ದ್ರಾಕ್ಷಿ ರು.30
ಆಮ್ರಪಾಲಿ ಮಾವು ರು.70
ಬಾದಾಮಿ ರು.84
ದಶೇರಿ ರು.80
ಮಲಗೋವಾ ರು.90
ಮೊಸಂಬಿ ರು.63
ಕಿತ್ತಳೆ ರು.85
ಪಪ್ಪಾಯ ರು.15
ಪೈನಾಪಲ್ ರು.36
ಕಲ್ಲಂಗಡಿ ರು.14
ಸ್ಟ್ರಾಬೆರಿ ರು.34

ಕಳೆದ ವಾರಕ್ಕಿಂತ ಇಂದು ಸಾಕಷ್ಟು ತರಕಾರಿಗಳ ಬೆಲೆ ಕಡಿಮೆಯಾಗಿದೆ. ರೈತರು ಗ್ರಾಮ ಪಂಚಾಯಿತಿ ಚುನಾ ವಣೆ ಗೊಂದಲದಲ್ಲಿರುವುದ ರಿಂತ ಮಾರುಕಟ್ಟೆಗೆ ತರಕಾರಿ ಗಳು ಲಭ್ಯವಾಗುತ್ತಿಲ್ಲ. ಇನ್ನು ವಾರಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಬಹುದು.
-ಕದಿರೇಗೌಡ, ವ್ಯವಸ್ಥಾಪಕ, ನಿರ್ದೇಶಕ ಹಾಪ್‍ಕಾಮ್ಸ್

Related Stories

No stories found.

Advertisement

X
Kannada Prabha
www.kannadaprabha.com