ಲಾಟರಿ ನಿಷೇಧ ಹಿಂಪಡೆಯಿರಿ: ಅಗ್ನಿ ಶ್ರೀಧರ್

ಲಾಟರಿ ನಿಷೇಧವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ನ್ಯಾಯಾಕ್ಕಾಗಿ ನಾವು ಸಂಘಟನೆಯ ಕಾರ್ಯಾಧ್ಯಕ್ಷ ಹಾಗೂ ಹಿರಿಯ...
ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಇಂದೂಧರ ಹೊನ್ನಾಪುರ, ಅಗ್ನಿ ಶ್ರೀಧರ್, ಮೋಹನ್ ರಾಜ್, ನಾಗರಾಜ್ ಮತ್ತಿತರರು ಹಾಜರಿದದ್ದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಇಂದೂಧರ ಹೊನ್ನಾಪುರ, ಅಗ್ನಿ ಶ್ರೀಧರ್, ಮೋಹನ್ ರಾಜ್, ನಾಗರಾಜ್ ಮತ್ತಿತರರು ಹಾಜರಿದದ್ದರು.

ಬೆಂಗಳೂರು: ಲಾಟರಿ ನಿಷೇಧವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ನ್ಯಾಯಾಕ್ಕಾಗಿ ನಾವು ಸಂಘಟನೆಯ ಕಾರ್ಯಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಮಂಗಳವಾರ ಒತ್ತಾಯಿಸಿದ್ದಾರೆ.

ನಿಷೇಧವೇರಿದಷ್ಟು ಅಕ್ರಮಗಳು ಹೆಚ್ಚಾಗುತ್ತಿವೆ ಹೊರತು, ಕಡಿಮೆಯಾಗುತ್ತಿಲ್ಲ. ಲಾಟರಿ ನಿಷೇಧದಿಂದ ದಂಧೆಕೋರರಿಗೆ ಲಾಭವೇ ಹೆಚ್ಚಾಗಿದೆ. ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಲಾಟರಿ, ಬೆಟ್ಟಿಂಗ್ ಸೇರಿದಂತೆ ಅನೇಕ ಚಟುವಟಿಕೆಗಳಿಗೆ ಸರ್ಕಾರ ಕಡಿವಾಣ ಹಾಕುತ್ತಿದ್ದರೇ, ಇತ್ತ ಲೂಟಿಕೋರರು ಮಾತ್ರ ಹೆಚ್ಚಾಗುತ್ತಾ ಹೋಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಲಾಟರಿ ನಿಷೇಧವನ್ನು ಹಿಂಪಡೆಯಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಗ್ರಹಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಲಾಟರಿ, ಕ್ರಿಕೆಟ್ ಬೆಟ್ಟಿಂಗ್ ನಂತಹ ಆಟಗಳನ್ನು ನಿಷೇಧಿರುವುದರಿಂದ ಹೆಚ್ಚುಗುತ್ತಾದೆ. ಆದ್ದರಿಂದ ಇಂದಹುದನ್ನೆಲ್ಲ ನಿಯಂತ್ರಣಕ್ಕೊಳಪಡಿಸಿ ಕಾನೂನು ಬದ್ಧಗೊಳಿಸಬೇಕು. ಇಂಗ್ಲೆಂಡ್, ಅಮೆರಿಕಾದಂತಹ ಮುಂದುವರಿದ ದೇಶಗಳಲ್ಲೂ ಲಾಟರಿ, ಕ್ರಿಕೆಟ್ ಬೆಟ್ಟಿಂಗ್ ಕಾನೂನು ಬದ್ಧವಾಗಿವೆ. ನಮ್ಮ ದೇಶದ 17 ರಾಜ್ಯಗಳಲ್ಲಿ ಲಾಟರಿ ಮಾರಾಟಕ್ಕೆ ನಿಷೇಧವೇರಿಲ್ಲ ಎಂದಿದ್ದಾರೆ.

ಇಂದು ಎಲ್ಲ ರೀತಿಯ ಆಠಗಳು ಆನ್ ಲೈನ್ ಮೂಲಕ ನಡೆಯುತ್ತಿದೆ. ಶೇರು ಮಾರುಕಟ್ಟೆಯಿಂದ ಅತೀ ಹೆಚ್ಚು ಶೇರು ಅತಿ ಹೆಚ್ಚು ಜನರು ನಷ್ಟಹೊಂದಿದ್ದಾರೆ. ಆದರೆ ಇದರ ಮೇಲಿರದ ನಿಷೇಧ, ಇಂತಹ ಬೆಟ್ಟಿಂಗ್, ಲಾಟರಿ ಮೇಲೆ ಏಕೆ ಎಂದು ಪ್ರಶ್ನಿಸಿದ ಅವರು, ಆನ್ ಲೈನ್ ನಲ್ಲೂ ಕೂಡ ಇಂತಹ ಬೆಟ್ಟಿಂಗ್ ಆಟಗಳು ನಡೆಯುತ್ತಿವೆ. ಆದರೆ ಇದರ ಮೇಲೆ ಸರ್ಕಾರ ನಿಷೇಧವೇರಲು ಸಾಧ್ಯವಿಲ್ಲ. ಹಾಗಿರುವಾಗ ಇಂತಹ ನಿಷೇಧಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಕ್ರಮ ನಡೆಸುವವರಿಗೆ ಮಾತ್ರ ಇದರಿಂದ ಲಾಭವಾಗುತ್ತದೆ. ಕಾನೂನುಬದ್ಧಗೊಳಿಸಿದರೆ ಸರ್ಕಾರಕ್ಕೆ ಒಂದಿಷ್ಟು ಆದಾಯ ಬರತ್ತದೆ ಎಂದು ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ.

ಎಚ್ ಡಿಕೆಯಿಂದ ಬ್ಲಾಕ್ ಮೇಲ್ ತಂತ್ರ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಂದಂಕಿ ಲಾಟರಿ ಪ್ರಕರಣವನ್ನು ಸಿಬಿಐ ತನಿಖೆವಹಿಸುವ ಒಂದು ದಿನದ ಮುಂಚೆ, ಹಗರಣಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯರೊಬ್ಬರು 100 ಕೋಟಿ ಬೇಡಿಕೆ ಇಟ್ಟಿದ್ದರು ಎಂದು ಹೇಳಿ, ಹೆಸರು ಬಹಿರಂಗಪಡಿಸುವುದಾಗಿ ತಿಳಿಸಿದ್ದರು. ಮರುದಿನ ಸಿದ್ದರಾಮಯ್ಯನವರು, ಪರೋಕ್ಷವಾಗಿ ಅವರ ಮನೆ ಬಾಗಿಲು ತಟ್ಟುವ ಕೆಲಸ ಕುಮಾರಸ್ವಾಮಿ ಮಾಡುತ್ತಾರೆ ಎಂದಿದ್ದರು.
ಈ ರೀತಿ ರಾಜಕೀಯವಾಗಿ ತಮ್ಮ ಕೆಲಸ ಸಾಧನೆಗೆ ಹೇಳಿಕೆಗಳನ್ನು ನೀಡುತ್ತಾ, ಜನರಿಗೆ ವಂಚಿಸುತ್ತಿದ್ದಾರೆ. ಇದೊಂದು ಕುಮಾರಸ್ವಾಮಿ ಅವರ ಬ್ಲಾಕ್ ಮೇಲ್ ತಂತ್ರವಾಗಿದೆ. ಇಲ್ಲವಾದರೆ, ತಾವು ಹೇಳಿದಂತಹ ಆ ಎಂ ಎಲ್ ಸಿ ಯಾರು? ಅವರ ಹೆಸರನ್ನು ಕುಮಾರಸ್ವಾಮಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಅವರು, ಪ್ರತಿಯೊಂದು ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುವುದನ್ನು ಕೈಬಿಡಬೇಕು. ಇಲ್ಲವಾದರೇ, ರಾಜಕಾರಣಿಗಳು ಏಡ್ಸ್ ರೋಗಿಗಳಿಗಿಂತಲೂ ನಿಕೃಷ್ಟವಾಗಿ ಕಾಣುತ್ತಾರೆ ಎಂದು ಅಗ್ನಿಶ್ರೀಧರ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಇಂದೂಧರ ಹೊನ್ನಾಪುರ, ಮೋಹನ್ ರಾಜ್, ನಾಗರಾಜ್ ಮತ್ತಿತರರು ಹಾಜರಿದದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com