ಕಡ್ಡಾಯ ಮತದಾನಕ್ಕೆ 2ನೇ ಹಂತದಲ್ಲೂ ಹಿನ್ನಡೆ

ಗ್ರಾಪಂ ಚುನಾವಣೆಯ 2ನೇ ಹಂತದ ಮತದಾನ ಹದಿನೈದು ಜಿಲ್ಲೆಗಳಲ್ಲಿ ಮಂಗಳವಾರ ನಡೆದಿದ್ದು, ಶೇ.80ರಷ್ಟು ಮತದಾನವಾಗಿದೆ. ಕಳೆದ ಚುನಾವಣೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರಾಪಂ ಚುನಾವಣೆಯ 2ನೇ ಹಂತದ ಮತದಾನ ಹದಿನೈದು ಜಿಲ್ಲೆಗಳಲ್ಲಿ ಮಂಗಳವಾರ ನಡೆದಿದ್ದು, ಶೇ.80ರಷ್ಟು ಮತದಾನವಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ನಡೆದ ಒಟ್ಟಾರೆ ಮತದಾನಕ್ಕಿಂತಲೂ ಈ ಬಾರಿ ಕಡಿಮೆ ಮತದಾನವಾಗಿದ್ದು, ರಾಜ್ಯ ಸರ್ಕಾರದ ಬಹುನಿರೀಕ್ಷಿತ ಕಡ್ಡಾಯ ಮತದಾನ ಪದ್ಧತಿಗೆ ಹಿನ್ನಡೆಯಾಗಿದೆ.

ಸಾಯಂಕಾಲ 5 ಗಂಟೆವರೆಗೆ ಲಭ್ಯವಾದ ದಾಖಲೆ ಗಳನ್ನು ಕ್ರೋಢಿಕರಿಸಿರುವ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ ಶೇ.80ರಷ್ಟು ಮತದಾನ ನಡೆದಿದೆ. ನಿಖರ ಮಾಹಿತಿ ಲಭ್ಯವಾಗುವುದಕ್ಕೆ ಬುಧವಾರ ಮಧ್ಯಾಹ್ನದವರೆಗೆ ಕಾಯಲೇಬೇಕು. ಕೋಲಾರದಲ್ಲಿ ಅತಿ ಹೆಚ್ಚು ಅಂದರೆ ಶೇ.85ರಷ್ಟು ಮತದಾನ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯಲ್ಲೂ ಕಡ್ಡಾಯ ಮತದಾನಕ್ಕೆ ಬೆಲೆ ದೊರಕಿಲ್ಲ. ಶೇ.76ರಷ್ಟು ಮಾತ್ರ ಮತದಾನ ನಡೆದಿದ್ದು, ಬೆಂಗಳೂರು ಪೂರ್ವ ತಾಲೂಕಿನಲ್ಲಿ ಶೇ.76.21, ಆನೇಕಲ್‍ನಲ್ಲಿ ಶೇ.75.56, ಬೆಂಗಳೂರು ಉತ್ತರದಲ್ಲಿ ಶೇ.65ರಷ್ಟು ಮತದಾನ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ತಾಲೂಕಿನಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಲಭ್ಯವಾದ ಮಾಹಿತಿ ಪ್ರಕಾರ ಶೇ.60ರಷ್ಟು ಮಾತ್ರ ಮತದಾನ ನಡೆದಿದೆ.

ಮರು ಮತದಾನ: ಯಾದಗಿರಿ ಮತ್ತು ತುಮಕೂರು ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಯಾದಗಿರಿಯ ಚಪೇಟ್ಲಾ ಗ್ರಾಪಂ ಮತಗಟ್ಟೆ ಸಂಖ್ಯೆ 280, 281, ತುಮಕೂರು ಜಿಲ್ಲೆ ಕೊರಟಗೆರೆಯ ಹೊಳವನಹಳ್ಳಿ ಪಂಚಾಯಿತಿಯ ಮತಗಟ್ಟೆ ಸಂಖ್ಯೆ 73, 74, 76, 78ರಲ್ಲಿ ಮರು ಮತದಾನ ನಡೆಸುವುದಕ್ಕೆ ರಾಜ್ಯ ಚುನಾವಣಾ ಆಯೋಗ ಆದೇಶ ನೀಡಿದೆ. ಜೂನ್ 4ರಂದು ಈ ಪಂಚಾಯಿತಿಗಳಿಗೆ ಮರು ಮತದಾನ ನಡೆಸಲು ನಿರ್ಧರಿಸಲಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯುತ್ತದೆ. ಮತದಾರರಿಗೆ ಈ ಸಂದರ್ಭದಲ್ಲಿ ಬಲಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚಲು ಸೂಚಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ ಜಿಲ್ಲೆ ವ್ಯಾಪ್ತಿಯ 2681 ಗ್ರಾಮ ಪಂಚಾಯಿತಿಯ 45755 ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆದಿದೆ. ಒಟ್ಟು 113841 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 59257 ಪುರುಷರು, 54584 ಮಹಿಳಾ ಅಭ್ಯರ್ಥಿಗಳಾಗಿದ್ದರು.

ಎಣಿಕೆ: ನಿಷೇಧಾಜ್ಞೆ ಜಾರಿ
ಬೆಂಗಳೂರು: ಜೂ.5ರಂದು ಗ್ರಾಪಂ ಚುನಾವಣೆ ತ ಎಣಿಕೆ ನಡೆಯುವ ಐದು ಮತ ಎಣಿಕೆ ದ್ರಗಳ ಸುತ್ತಮುತ್ತಲಿನ 2 ಕಿಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ನಗರ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com