ಮತಕ್ಕೊಂದು ಕೋಳಿ ಕೊಟ್ಟರು!

ಚುನಾವಣೆ ಬಂತೆಂದರೆ ಮತದಾರರಿಗೆ ಆಮಿಷ ತೋರುವುದು ಸಾಮಾನ್ಯ ಎಂಬಂತಾಗಿದೆ. ಇಷ್ಟು ದಿನ ಮದ್ಯ, ಹಣ, ಬಟ್ಟೆಗಳನ್ನು ಹಂಚುತ್ತಿದ್ದ ಸುದ್ದಿಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಚುನಾವಣೆ ಬಂತೆಂದರೆ ಮತದಾರರಿಗೆ ಆಮಿಷ ತೋರುವುದು ಸಾಮಾನ್ಯ ಎಂಬಂತಾಗಿದೆ. ಇಷ್ಟು ದಿನ ಮದ್ಯ, ಹಣ, ಬಟ್ಟೆಗಳನ್ನು ಹಂಚುತ್ತಿದ್ದ ಸುದ್ದಿಯನ್ನು ಓದಿದ್ದೀರಿ, ಕೇಳಿದ್ದೀರಿ. ಆದರೆ, ಇಲ್ಲೊಂದು ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ಮತ ಹಾಕುವಂತೆ ಪುಸಲಾಯಿಸಲು ಕೋಳಿ ಕೊಟ್ಟಿದ್ದಾರೆ!

ಇಂಥಹ ಪ್ರಕರಣ ನಡೆದದ್ದು ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ. ಇಲ್ಲಿನ ಮತಗಟ್ಟೆಯಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಪ್ರಾರಂಭವಾಗಿತ್ತು. ಬೆಳಗ್ಗೆಯಿಂದಲೇ ಮತದಾರರು ಆಸಕ್ತಿಯಿಂದಲೇ ಮತ ಚಲಾವಣೆ ಮಾಡುತ್ತಿದ್ದರು. ಇದೇ ವೇಳೆ ಮತಕೇಂದ್ರದ ವ್ಯಾಪ್ತಿಯ ಹೊರಗಡೆ ಮತದಾರರಿಗೆ ಕೋಳಿ ವಿತರಣೆ ಮಾಡಲಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತು.

ಮತದಾರರು ಅತ್ತ ದೌಡಾಯಿಸಿದರು. ಮಾಹಿತಿ ಪಡೆದ ಪತ್ರಕರ್ತರು ಗ್ರಾಮಕ್ಕೆ ತೆರಳಿದಾಗ ಮಹಿಳೆಯೊಬ್ಬರ ಕೈಯಲ್ಲಿ ಕೋಳಿ ಇತ್ತು. `ಈ ಕೋಳಿಯನ್ನು ಎಲ್ಲಿಂದ ತಂದಿರಿ? ಕೊಟ್ಟವರು ಯಾರು ಎಂದು ಪ್ರಶ್ನಿಸಿದಾಗ, `ಮತ ಹಾಕಿದ್ದಕ್ಕೆ ಕೋಳಿ ಕೊಟ್ಟಿದ್ದಾರೆ. ಅದನ್ನು ತೆಗೆದುಕೊಂಡು ಹೋಗುತ್ತಿದ್ದೇನೆ' ಎಂದರು. ಮಾಧ್ಯಮದ ಕ್ಯಾಮೆರಾ ಕಂಡ ತಕ್ಷಣ ಮಾತು ಬದಲಿಸಿದ ಆಕೆ, `ಕೋಳಿಯನ್ನು ಬೇರೆಡೆಯಿಂದ ಕೊಂಡು ತಂದಿದ್ದೇನೆ. ನಾನು ಮನೆಗೆ ಹೋಗಬೇಕು' ಎಂದು ಅವಸರದಿಂದ ಜಾಗ ಖಾಲಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com