ಸಿಇಟಿ: ವಿಕಲಚೇತನರ ಪರೀಕ್ಷೆ

2015ನೇ ಸಾಲಿನ ವೃತ್ತಿ ಶಿಕ್ಷಣ ಸೀಟುಗಳ ಆಯ್ಕೆಗಾಗಿನ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ...
ವೃತ್ತಿ ಶಿಕ್ಷಣ ಸೀಟುಗಳ ಆಯ್ಕೆಯ ಪೂರ್ವಭಾವಿಯಾಗಿ ವಿಕಲಚೇತನ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಬುಧವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಭಾಂಗಣದಲ್ಲಿ ನಡೆಯಿತು.
ವೃತ್ತಿ ಶಿಕ್ಷಣ ಸೀಟುಗಳ ಆಯ್ಕೆಯ ಪೂರ್ವಭಾವಿಯಾಗಿ ವಿಕಲಚೇತನ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಬುಧವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರು: 2015ನೇ ಸಾಲಿನ ವೃತ್ತಿ ಶಿಕ್ಷಣ ಸೀಟುಗಳ ಆಯ್ಕೆಗಾಗಿನ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ
ಪ್ರಕ್ರಿಯೆಯಲ್ಲಿ ವಿಕಲಚೇತನ ಕೋಟಾದಡಿ ಅರ್ಜಿಸಲ್ಲಿಸಿ ಸಿಇಟಿ-2015 ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುವ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಯಿತು.

ತಜ್ಞ ವೈದ್ಯರು ಅಭ್ಯರ್ಥಿಗಳನ್ನು ಪರೀಕ್ಷೆ ನಡೆಸಿ ವಿಕಲಚೇತನ ಕೋಟಾದಡಿ ಸೀಟು ಪಡೆಯಲು ಅರ್ಹರೋ, ಅಲ್ಲವೋ ಎಂದು ಪರಿಶೀಲಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ತಮ್ಮ ಪೋಷಕರೊಂದಿಗೆ ಆಗಮಿಸಿದ್ದ ಅಭ್ಯರ್ಥಿಗಳು ಉತ್ಸಾಹದಲ್ಲಿ ಪಾಲ್ಗೊಂಡಿದ್ದರು. ಹುಟ್ಟುವಾಗಿನಿಂದಲೇ ದೈಹಿಕ ಅಂಗವೈಕಲ್ಯ ಹೊಂದಿದವರು, ನಂತರ ಅವಘಡದಿಂದ ಅಂಗವೈಕಲ್ಯ ಹೊಂದಿದ್ದ ಅಭ್ಯರ್ಥಿಗಳು ಅಲ್ಲಿ ಸೇರಿದ್ದರು.

ಗುಲ್ಬರ್ಗದಿಂದ ಆಗಮಿಸಿದ್ದ ಕಾರ್ತಿಕ್ ಬಾಲಗ್ರಹದಿಂದ ಪೀಡಿತರಾಗಿ ಕುಬ್ಜರಾಗಿರುವವರು. ಅವರು ಬಿಎಸ್ಸಿ ಅಗ್ರಿ ಸೀಟನ್ನು ಈ ಕೋಟಾದಡಿ ಪಡೆಯುವ ಅಪೇಕ್ಷೆಯೊಂದಿಗೆ ಬಂದಿದ್ದರು. ನಾನು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕೆಂದಿರುವೆ. ಗ್ರಾಮೀಣ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ನನ್ನ ಗುರಿ ಎಂದು ಹೇಳಿದರು. ಕಾರ್ತಿಕ್ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ನಡೆಸಿದ್ದು, ಪದವಿಪೂರ್ವ ಶಿಕ್ಷಣವನ್ನು ಗುಲ್ಬರ್ಗದ ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಶೇ.65 ಅಂಕದೊಂದಿಗೆ ಪೂರೈಸಿದ್ದಾರೆ. ಬಿಎಸ್ಸಿ ಅಗ್ರಿಯಲ್ಲಿ 61,000 ರ್ಯಾಂಕ್ ಪಡೆದಿದ್ದಾರೆ. ಇನ್ನು ತುಮಕೂರು ಜಿಲ್ಲೆಯ ಹಳ್ಳಿಯಿಂದ ಬಂದಿದ್ದ ನೇತ್ರಾ ಅವರು ಡೈಸೋಫಿಸಿಯೋಸಿಸ್ (ಕೂಡು ಮೂಳೆಗಳ ಸಮಸ್ಯೆ)ನಿಂದ ಬಳಲುತ್ತಿದ್ದಾರೆ. ಇದೇ ರೀತಿ ವಿವಿಧ ತೀಕ್ಷ್ಣ ಸಮಸ್ಯೆಯಿಂದ ಬಳಲುತ್ತಿರುವ ನೂರಾರು ಮಂದಿ ಪಾಲ್ಗೊಂಡಿದ್ದರು. ಒಟ್ಟಾರೆ 195 ಮಂದಿ ಪರೀಕ್ಷೆಗೊಳಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com