ನಟ ರಾಘವೇಂದ್ರ ರಾಜಕುಮಾರ್
ಜಿಲ್ಲಾ ಸುದ್ದಿ
ರಾಘವೇಂದ್ರ ರಾಜ್ ಕುಮಾರ್, ಪತ್ನಿ ಮಂಗಳ ವಿರುದ್ಧ ಕೇಸ್
ವಜ್ರೇಶ್ವರಿ ಕಂಬೈನ್ಸ್ ನ ಮಾಲಿಕರಾದ ರಾಘವೇಂದ್ರ ರಾಜಕುಮಾರ್ ಮತ್ತು ಅವರ ಪತ್ನಿ ಮಂಗಳ ವಿರುದ್ಧ ಪೊಲೀಸರು ಪ್ರರಕರಣ...
ಬೆಂಗಳೂರು: ವಜ್ರೇಶ್ವರಿ ಕಂಬೈನ್ಸ್ ನ ಮಾಲಿಕರಾದ ರಾಘವೇಂದ್ರ ರಾಜಕುಮಾರ್ ಮತ್ತು ಅವರ ಪತ್ನಿ ಮಂಗಳ ವಿರುದ್ಧ ಪೊಲೀಸರು ಪ್ರರಕರಣ ದಾಖಲಿಸಿದ್ದಾರೆ.
ವಜ್ರೇಶ್ವರಿ ಕಂಬೈನ್ಸ್ ಅಕೌಂಟೆಂಟ್ ಉಮೇಶ್ ಅವರ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ರಾಜಕುಮಾರ್ ಮತ್ತು ಅವರ ಪತ್ನಿ ಮಂಗಳ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಐಪಿಸಿ ಸೆಕ್ಷನ್ 306ರಡಿ ಪ್ರಕರಣ ದಾಖಲು ಮಾಡಿದ್ದಾರೆ.
ರಾಘವೇಂದ್ರ ರಾಜಕುಮಾರ್ ಮತ್ತು ಅವರ ಪತ್ನಿ ಮಂಗಳಾ, 3 ಕೋಟಿ ಹಣವನ್ನು ದುರಪಯೋಗ ಪಡೆಸಿಕೊಂಡಿದ್ದಾರೆ ಎಂದು ಆರೋಪಿಸಿ ಉಮೇಶ್ ಅವರಿಗೆ ಕಿರುಕುಳ ಕೊಡುತ್ತಿದ್ದರು. ಅಲ್ಲದೇ, ಉಮೇಶ್ ಅವರ ಕೆಲ ಸಹದ್ಯೋಗಿಗಳು ಮನೆಗೆ ಬಂದು ಕೆಲ ಕಡತಗಳನ್ನು ತೆಗೆದುಕೊಂಡು ಹೋಗಿದ್ದರು. ಈ ಕಿರುಕುಳವನ್ನು ಸಹಿಸದ ಉಮೇಶ್ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಮೇಶ್ ಕುಟುಬಂಸ್ಥರು ದೂರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ